ಬೆಂಗಳೂರು: ರಾಜಕೀಯದಿಂದ ದೂರವಾಗಿ, ಸನ್ಯಾಸ ಸ್ವೀಕರಿಸೋದಾಗಿ ಈ ಹಿಂದೆ ಹೇಳಿದ್ದಂತ ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿ, ಈಗ ನುಡಿದಂತೆ ನಡೆದುಕೊಂಡಿದ್ದಾರೆ. ಖಾದಿ ಬಿಟ್ಟು, ಕಾವಿ ತೊಟ್ಟು, ಪೂರ್ಣಾನಂದ ಪುರಿ ಸ್ವಾಮಿಗಳಾಗಿದ್ದಾರೆ.
ಹೌದು.. ಮಾಜಿ ಸಚಿವ ಬಿ.ಜೆ ಪುಟ್ಟಸ್ವಾಮಿಯವರು, ತಮ್ಮ 50ನೇ ವರ್ಷದಲ್ಲಿ ರಾಜಕೀಯ ಜೀವನ ತ್ಯಜಿಸಿ, ಸನ್ಯಾಸ ಸ್ವೀಕರಿಸಿದ್ದಾರೆ. ಕೈಲಾಸ ಆಶ್ರಮ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಜಯೇಂದ್ರಪುರಿ ಮಹಾಸ್ವಾಮೀಜಿಗಳು, ಮಾಜಿ ಸಚಿವ ಪುಟ್ಟಸ್ವಾಮಿಗೆ ಸನ್ಯಾಸ ಧೀಕ್ಷೆ ನೀಡಿದರು. ಅಲ್ಲದೇ ಅವರ ಹೆಸರನ್ನು ಶ್ರೀ ಪೂರ್ಣಾನಂದ ಪುರಿ ಸ್ವಾಮೀಜಿ ಎಂಬುದಾಗಿ ಮರುನಾಮಕರಣಗೊಳಿಸಿದರು.
ಇನ್ನೂ ನಾಳೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿರುವಂತ ಶ್ರೀ ಕ್ಷೇತ್ರ ತೈಲೇಶ್ವರ ಗಾಣಿಗ ಮಹಾ ಸಂಸ್ಥಾನ ಮಠಕ್ಕೆ ತೆರಳಿರುವಂತ ಅವರು, ಮೇ.15ರಂದು ಪ್ರಥಮ ಪೀಠಾಧಿಪತಿಗಳಾಗಿ ಪೂರ್ಣಾನಂದ ಪುರಿ ಸ್ವಾಮಿಗಳು ಪೀಠಾಲಂಕಾರ ಮಾಡಲಿದ್ದಾರೆ. ಅವರ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಹಲವು ರಾಜಕೀಯ ನಾಯಕರು ಆಗಮಿಸಲಿದ್ದಾರೆ.




