www.karnatakatv.net : ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸಕ್ಕೆ ನಲುಗಿ ಜೀವ ಉಳಿಸಿಕೊಂಡ್ರೆ ಸಾಕು ಅಂತ ಬಹುತೇಕ ಅಫ್ಘನ್ನರು ದೇಶ ತೊರೆದಿದ್ದಾರೆ. ಜೀವ ಇದ್ರೇನೆ ಜೀವನ ಅಂತ ಅರಿತ ಲಕ್ಷಾಂತರ ಮಂದಿ ಆಫ್ಘನ್ನರು ಬೇರೆ ಬೇರೆ ದೇಶಗಳಿಗೆ ತೆರಳಿ ಪ್ರಾಣ ಉಳಿಸಿಕೊಂಡಿದ್ದಾರೆ. ಇಂತಹದ್ರಲ್ಲಿ ಅಫ್ಘಾನಿಸ್ತಾನದ ಮಾಜಿ ಸಚಿವರೊಬ್ಬರು ಜೀವನ ನಡೆಸೋದಕ್ಕಾಗಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾರೆ.
ಹೌದು, ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರದಲ್ಲಿ ಐಟಿ ಮತ್ತು ಸಂವಹನ ಸಚಿವರಾಗಿದ್ದ ಸೈಯದ್ ಅಹಮದ್ ಸಾದತ್, ಜೀವನದ ಬಂಡಿ ಎಳೆಯೋದಕ್ಕೆ ಜರ್ಮನಿಯ ಲೈಪ್ ಸಿಗ್ ನಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದಾರೆ. ಎಲ್ಲವನ್ನೂ ಕಳೆದುಕೊಂಡು, ಕೊನೆಗೆ ಅನಿವಾರ್ಯವಾಗಿ ತಾಯ್ನಾಡನ್ನೇ ತೊರೆದಿರೋ ಸಾದತ್ ತಾವಿದ್ದ ಸ್ಟೇಟಸ್ ಮರೆತು ಜರ್ಮನಿಯ ಬೀದಿಬೀದಿಗಳಲ್ಲಿ ಸೈಕಲ್ ಏರಿ ಪಿಜ್ಜಾಗಳನ್ನ ಮನೆಮನೆಗಳಿಗೆ ತಲುಪಿಸೋ ಕೆಲಸ ಮಾಡ್ತಿದ್ದಾರೆ.
ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿಭಾಗದ ಎರಡು ಮಾಸ್ಟರ್ ಡಿಗ್ರಿ ಪೂರೈಸಿರೋ ಸಾದತ್ ಕಳೆದ 20 ವರ್ಷಗಳಿಂದ 13 ವಿವಿಧ ದೇಶಗಳ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಇನ್ನು ಸಾದತ್ 2018ರಿಂದ 2020ರವರೆಗೂ ಎರಡು ವರ್ಷಗಳ ಕಾಲ ಐಟಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.