ಬಾಗಲಕೋಟೆ: ಸಾಮಾಜಿಕ ಜಾಲತಾಣದಲ್ಲಿ ಈಗ ಜನನ ಪ್ರಮಾಣಪತ್ರವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಜೊತೆಗೆ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎರಡನೇ ವಿವಾಹ ಆಗಿಬಿಟ್ರಾ ಎನ್ನುವ ಸಂದೇಶವನ್ನು ಹುಟ್ಟುಹಾಕಿದೆ. ಆ ಕುರಿತು ಮಾಜಿ ಎಂ.ಎಲ್ ಎ ಏನ್ ಹೇಳಿದ್ರು ಅಂತ ಮುಂದೆ ಓದಿ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದಂತ ಅವರು, ನನಗೆ ಯಾವುದೇ ಮಾಹಿತಿ ಇಲ್ಲ. ದಾಖಲೆ ಇಲ್ಲದೇ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಯಾರು ವೈರಲ್ ಮಾಡಿದ್ರು ಅಂತಾನು ನನಗೆ ಮಾಹಿತಿ ಇಲ್ಲ ಎಂದರು.
ಕಾಂಗ್ರೆಸ್ ಪಕ್ಷದಿಂದ ಮುಂದಿನ ಸಿಎಂ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದಂತ ಅವರು, ಆ ಬಗ್ಗೆ ನಮ್ಮ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇದ್ದಾರೆ ಅವರು ತೀರ್ಮಾನ ಮಾಡಲಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಚಾರವಾಗಿದೆ ಎಂದು ಹೇಳಿದರು.
ಸಾರ್ ಸೋಷಿಯಲ್ ಮೀಡಿಯಾದಲ್ಲಿ ನಿಮಗೆ ಆಗದವರು ಯಾರಾದ್ರು ನಿಮ್ಮ ಹೆಸರಿನ ಜನನ ಪ್ರಮಾಣ ಪತ್ರ ವೈರಲ್ ಮಾಡಿರಬಹುದಾ ಎಂದು ಕೇಳಿದಕ್ಕೆ, ಇರಬಹುದು. ನನಗೆ ಮಾಹಿತಿ ಇಲ್ಲದೇ ಯಾವುದೇ ಮಾತನಾಡೋದಿಲ್ಲ. ದಾಖಲೆ ಕೈ ಸಿಗಲಿ ಆಗ ಮಾತನಾಡುತ್ತೇನೆ ಎಂದರು.
ಅಂದಹಾಗೇ ಸಾಮಾಜಿಕ ಜಾಲತಾಣದಲ್ಲಿ ವಿಜಯಾನಂದ ಕಾಶಪ್ಪನವರ ಎಂಬುದಾಗಿ ತಂದೆಯ ಹೆಸರಿನ ಕಲಂ ನಲ್ಲಿ ಉಲ್ಲೇಖಿಸಿದಂತ ಜನನ ಪ್ರಮಾಣ ಪತ್ರ ವೈರಲ್ ಆಗಿದೆ. ತಾಯಿಯ ಹೆಸರು ಪೂಜಾಶ್ರೀ ಎಂದು ಉಲ್ಲೇಖಿಸಲಾಗಿದೆ. ದಿನಾಂಕ 01-09-2021ರಲ್ಲಿ ಹುಟ್ಟಿದಂತ ಹೆಣ್ಣುಮಗುವಿನ ಜನನ ಪ್ರಮಾಣ ಪತ್ರ ಅದಾಗಿದೆ. ಜನ್ಮಸ್ಥಳ ಮದರ್ ಹುಡ್ ಆಸ್ಪತ್ರೆ, ನೋಂದಣಿ ದಿನಾಂಕ 22-09-2021 ಎಂದಿದೆ.
ಇನ್ನೂ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಹಾಗೂ ಮೊದಲ ಪತ್ನಿ ವೀಣಾ ಕಾಶಪ್ಪನವರ ಜೊತೆಗೆ ವರ್ಷದ ಹಿಂದೆ ಜಗಳವಾಗಲು ಇದೇ 2ನೇ ಮದುವೆಯೇ ಮುಖ್ಯ ಕಾರಣ ಎಂಬುದಾಗಿಯೂ ಅವರ ಸ್ವಕ್ಷೇತ್ರದ ಜನರ ಗುಸುಗುಸು ಮಾತಾಗಿದೆ.




