Sunday, October 5, 2025

Latest Posts

ಕಾಂತಾರಗೆ ಇಡೀ ಥಿಯೇಟರ್ ಬುಕ್‌ ಮಾಡಿದ ಪ್ರತಾಪ್‌ ಸಿಂಹ

- Advertisement -

ಕಾಂತಾರ ಚಾಪ್ಟರ್‌ 1 ಸಿನಿಮಾ, ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡ್ತಿದೆ. ಇದೀಗ ರಾಜಕೀಯ ವಲಯದಲ್ಲೂ ಕಾಂತಾರಾ ಕ್ರೇಜ್‌ ಶುರುವಾಗಿದೆ. ಕಾಂತಾರಾ ಚಾಪ್ಟರ್‌ 1 ಸಿನಿಮಾ ವೀಕ್ಷಣೆಗೆ, ಮಾಜಿ ಸಂಸದ ಪ್ರತಾಪ್‌ ಸಿಂಹ ಇಡೀ ಥಿಯೇಟರ್‌ ಬುಕ್‌ ಮಾಡಿದ್ದಾರೆ.

ಕಾರ್ಯಕರ್ತರ ಜೊತೆ ಸಿನಿಮಾ ವೀಕ್ಷಣೆ ಮಾಡಲಿದ್ದಾರೆ. ಮೈಸೂರಿನ ಡಿಆರ್‌ಸಿಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ಒಟ್ಟು 197 ಟಿಕೆಟ್‌ ಖರೀದಿಸಿದ್ದು, 68,920 ರೂಪಾಯಿ ಪಾವತಿಸಿ, ಇಡೀ ಥಿಯೇಟರ್‌ ಬುಕ್‌ ಮಾಡಿದ್ದಾರೆ.

 

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ, ಭಾರತದಲ್ಲಿ ಒಟ್ಟು 6,500 ಚಿತ್ರ ಮಂದಿರಗಳಲ್ಲಿ ತೆರೆ ಕಂಡಿದೆ. ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡಿದೆ. ಈಗಾಗಲೇ ಎಲ್ಲಾ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಭಾನುವಾರವೂ ಹೌಸ್‌ ಫುಲ್ ಪ್ರದರ್ಶನಕ್ಕೆ ಸಜ್ಜಾಗಿದೆ.

ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿರುವ ಕಾಂತಾರ ಸಿನಿಮಾ, ಈಗಾಗಲೇ ಬಾಕ್ಸ್ ಆಫೀಸ್‌ ಕೊಳ್ಳೆ ಹೊಡೆದಿದೆ. ವೀಕ್‌ ಎಂಡ್‌ ಕಲೆಕ್ಷನ್‌ಗಳನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಇಂದು ಟಿಕೆಟ್‌ ಸಿಗದವರಿಗೆ ಸೋಮವಾರ ಅಂದ್ರೆ, ಅಕ್ಟೋಬರ್‌ 6ರಂದು ಸೋಮವಾರ ವ್ಯವಸ್ಥೆ ಮಾಡಿಕೊಡುವುದಾಗಿ ಪ್ರತಾಪ್‌ ಸಿಂಹ ಟ್ವೀಟ್‌ ಮಾಡಿದ್ದಾರೆ.

 

- Advertisement -

Latest Posts

Don't Miss