Sunday, May 26, 2024

Latest Posts

ಕುಮಾರಸ್ವಾಮಿ ಸಿಎಂ ಆಗುವುದು ಶತಸಿದ್ಧ: ಹೆಚ್ಡಿಕೆ ಬಗ್ಗೆ ಭವಿಷ್ಯ ನುಡಿದ ಹೆಚ್ಡಿಡಿ..

- Advertisement -

ಚನ್ನಪಟ್ಟಣ: ಸಮೀಕ್ಷೆ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಈ ಬಾರಿ ಸಿಎಂ ಆಗೋದು ಕುಮಾರಸ್ವಾಮಿನೇ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಮಾತನಾಡಿದ ದೇವೇಗೌಡರು, ಈ ದೇಶದಲ್ಲಿ ರೈತರಿಗೆ ಪಿಂಚಣಿ ಕೊಡುತ್ತೇನೆ ಎಂದು ಹೇಳಿದ ವ್ಯಕ್ತಿ ಎಂದರೆ, ಅದು ಕುಮಾರಸ್ವಾಮಿ ಮಾತ್ರ. ನುಡಿದಂತೆ ನಡೆಯುವ ರಾಜಕಾರಣಿ ಅಂದ್ರೆ ಕುಮಾರಸ್ವಾಮಿ. ಕಾಂಗ್ರೆಸ್ಸಿಗರ ವ್ಯಂಗ್ಯದ ನಡುವೆಯೂ ಸಾಲ ಮನ್ನಾ ಮಾಡಿದ್ರು. ಕಾಂಗ್ರೆಸ್‌ ನವರು ಮಾಡಿದ ಕಾರ್ಯಕ್ರಮಗಳ ಸಾಲಮನ್ನಾ ಮಾಡಿದ್ದು ಕುಮಾರಸ್ವಾಮಿ. ಅವರು 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಇಡೀ ಇಂಡಿಯಾದಲ್ಲಿ ಕುಮಾರಸ್ವಾಮಿಯಂಥ ರಾಜಕಾರಣಿ ಮತ್ತೊಬ್ಬರಿಲ್ಲ ಎಂದು ಮಗನನ್ನು ಹಾಡಿ ಹೊಗಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಹೆಚ್.ಡಿ.ದೇವೇಗೌಡರು, ಮುಸ್ಲಿಂರಿಗೆ ವಸತಿ ಶಾಲೆ ಕೊಟ್ಟಿದ್ದು ನಾನು. ಆದರೆ ಸಮಾಜಕಲ್ಯಾಣ ಇಲಾಖೆಗಳಿಗೆ ಸೇರಿಸಿ, ಅದನ್ನು ಹಾಳು ಮಾಡಿದರು. ಹದಿಮೂರು ಬಾರಿ ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿದವರು ಕೂಡ, ಇದಕ್ಕಾಗಿ ಉತ್ಸಾಹ ತೋರಿಸಲಿಲ್ಲ ಎಂದು ಕಾಂಗ್ರೆಸ್ ವಿರುದ್ದ ಹೆಚ್ಡಿಡಿ ವಾಗ್ದಾಳಿ ಮಾಡಿದ್ದಾರೆ.

ಅಲ್ಲದೇ ಕುಮಾರಸ್ವಾಮಿಯವರಿಗೆ ಮಂಡ್ಯದಲ್ಲೂ ಚುನಾವಣೆಗೆ ನಿಲ್ಲಿ ಎಂದು ಒತ್ತಾಯ ಮಾಡಲಾಗಿತ್ತು. ಆದರೂ ಅಲ್ಲಿ ನಿಲ್ಲದೇ, ಚೆನ್ನಪಟ್ಟಣ ನನ್ನ ಕರ್ಮಭೂಮಿ ಎಂದು ಕುಮಾರಸ್ವಾಮಿ ಇಲ್ಲೇ ಚುನಾವಣೆಗೆ ನಿಲ್ಲುತ್ತಿದ್ದಾರೆ. ಏನೇ ವ್ಯತ್ಯಾಸವಾದರೂ, ಅದನ್ನು ಸರಿಮಾಡಿಕೊಂಡು ಹೋಗಿ. ಈ ಬಾರಿ ಕುಮಾರಸ್ವಾಮಿ ಸಿಎಂ ಆಗೋದು ಶತಸಿದ್ಧ. ಅವರ ಹೆಗ್ಗಳಿಕೆ ನಿಮಗೇ ಸಲ್ಲಬೇಕು. ಯುವ ಜನರು ಈ ಪಕ್ಷವನ್ನು ಉಳಿಸಬೇಕು. ಕುಮಾರಸ್ವಾಮಿ ಇಲ್ಲಿ ಬರಲು ಸಾಧ್ಯವಿಲ್ಲ. ಅದಕ್ಕಾಗಿ ನಾನು ಬಂದಿದ್ದೇನೆ. ಅವರು ರಾತ್ರಿ 12ಗಂಟೆವರೆಗೂ ಕ್ಯಾಂಪೇನ್ ಮಾಡುತ್ತಿರುತ್ತಾರೆ. ಹಾಗಾಗಿ ಯಾರ ಮಾತಿಗೂ ಕಿವಿಗೊಡಬೇಡಿ. ಸಮೀಕ್ಷೆಗಳಿಗೆಲ್ಲ ತಲೆಕೆಡಿಸಿಕೊಳ್ಳಬೇಡಿ. ಕುಮಾರಣ್ಣನನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

‘ರಾತ್ರಿ ಎಲ್ಲಾ ಮಟನ್ ತಿಂತಾರೆ, ಬೆಳಿಗ್ಗೆ ಎದ್ದು ಮಾಂಸಾಹಾರಿಗಳಿಗೆ ಬೈತಾರೆ’

‘ರಾಜ್ಯದ ಜನ ಮೈಮರೆತರೆ, ಕರ್ನಾಟಕದಲ್ಲಿ ತಾಲಿಬಾನ್ ಸರ್ಕಾರ ರಚನೆಯಾಗತ್ತೆ’

‘ಕಾಂಗ್ರೆಸ್ ಮೊದಲು ಅಧಿಕಾರಕ್ಕೆ ಬರಲಿ, ಆಮೇಲೆ ನಿಷೇಧದ ಬಗ್ಗೆ ಮಾತನಾಡಲಿ ‘

- Advertisement -

Latest Posts

Don't Miss