ಹುಬ್ಬಳ್ಳಿ: ಅವರೆಲ್ಲರೂ ಕೊರೆಯುವ ಚಳಿಯಲ್ಲಿ, ಸುಡುವ ಬಿಸಿಲಿನಲ್ಲಿ ಮನೆ ಬಿಟ್ಟು ದೇಶದ ಸೇವೆ ಮಾಡಿದ ಮಾಜಿ ಸೈನಿಕರು. ಭಾರತಾಂಬೆಯ ಸೇವೆ ಮಾಡಿರುವ ಮಾಜಿ ಸೈನಿಕರು. ರೈಲ್ವೆ ಇಲಾಖೆಯ ಧೋರಣೆಯಿಂದ ಕಣ್ಣೀರು ಹಾಕುವಂತಾಗಿದೆ.
ಹೀಗೆ ಕೈಯಲ್ಲಿ ಕರಪತ್ರ ಹಿಡಿದು ಕಣ್ಣೀರು ಹಾಕುತ್ತಿರುವ ಇವರೆಲ್ಲರೂ ದೇಶದ ಸೇವೆಗಾಗಿ ಸುಮಾರು ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕರು. ನಿವೃತ್ತಿಯ ನಂತರ ಜೀವನೋಪಾಯಕ್ಕಾಗಿ ರೈಲ್ವೆ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಗೇಟ್ ಮ್ಯಾನ್ ಆಗಿ ಸುಮಾರು 140 ಮಾಜಿ ಸೈನಿಕರು ಕರ್ತವ್ಯ ನಿರ್ವಹಿಸುತ್ತಿದ್ದರು.
ಆದರೆ ಈಗ ಅವರನ್ನು ಏಕಾಏಕಿ ತೆಗೆದು ಹಾಕಲಾಗಿದೆಯಂತೆ. ಈ ರೀತಿನಲ್ಲಿ ಮಾಜಿ ಸೈನಿಕರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಲ್ಲದೆ ರೈಲ್ವೆ ಇಲಾಖೆಯ ಎಂತಹದೊಂದು ಧೋರಣೆಯಿಂದ ಮಾಜಿ ಸೈನಿಕರು ಕಣ್ಣೀರು ಹಾಕುತ್ತಿದ್ದಾರೆ.
ಈ ಬಗ್ಗೆ ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ ಹಾಗೂ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಸಲ್ಲಿಸಿದರೂ ರೈಲ್ವೆ ಅಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನೂ ನೈರುತ್ಯ ರೈಲ್ವೆ ವಲಯದಲ್ಲಿ ಸುಮಾರು 300ಕ್ಕೂ ಅಧಿಕ ಜನರನ್ನು ವಜಾಗೊಳಿಸಿರುವುದು ಕುಟುಂಬ ನಿರ್ವಹಣೆ ಸಮಸ್ಯೆ ಎದುರಾಗಿದೆ. ನಮಗೆ ಜೀವನ ನಡೆಸಲು ಅವಕಾಶ ಕೊಡಿ ಎಂದು ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ.
ಸಿಯಾಚಿನದ್ದಂತಹ ಯುದ್ಧಭೂಮಿಯಲ್ಲಿ ಕೆಲಸ ಮಾಡಿ ಬಂದ ಮಾಜಿ ಸೈನಿಕರು ಈಗ ತಮ್ಮ ಜೀವನೋಪಾಯಕ್ಕಾಗಿ ಕೆಲಸವನ್ನು ಕೇಳುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಪರ್ಯಾಸಕರ ಸಂಗತಿಯಾಗಿದೆ. ಒಟ್ಟಿನಲ್ಲಿ ದೇಶದ ಸೇವೆ ಮಾಡಿದ ಮಾಜಿ ಸೈನಿಕರು ಸಂಕಷ್ಟಕ್ಕೆ ಸಿಲುಕಿದ್ದು, ಈ ಬಗ್ಗೆ ರೈಲ್ವೆ ಸಚಿವರು ಹಾಗೂ ಈ ಭಾಗದ ಸಂಸದರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮುತುವರ್ಜಿಯಿಂದ ಮಾಜಿ ಸೈನಿಕರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ.
ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ.
ಗ್ರಾಮ ವಾಸ್ತವ್ಯದ ಮೂಲಕ ಜನರ ಸಮಸ್ಯೆ ಆಲಿಸಿ ಚಕ್ಕಡಿ ರಸ್ತೆ ಸರದಾರ ಎನಿಸಿಕೊಂಡ ಶಾಸಕ ಕೋನರಡ್ಡಿ
Drought: ಬರಗಾಲ ಘೋಷಣೆಗೆ ಒತ್ತಾಯಿಸಿ ಹಸಿರು ಸೇನೆ ವತಿಯಿಂದ ಪ್ರತಿಭಟನೆ..!