ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಕರ ನೈಜ ಪ್ರತಿನಿಧಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಬಸವರಾಜ ಹೊರಟ್ಟಿ ಶಿಕ್ಷಕರ ನೈಜ ಪ್ರತಿನಿಧಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇಂದು ಹುಬ್ಬಳ್ಳಿಯ ಕೆ ಎಲ್ ಇ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಪರವಾಗಿ ಶಿಕ್ಷಕ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೆಲ್ಲುವ ಕುದುರೆ ಹಾಗೂ ಗೆಲ್ಲಿಸುವ ಪಕ್ಷ ಒಂದಾಗಿದೆ. ಎರಡು ಶಕ್ತಿ ಗಳು ಸೇರಿದಾಗ ಸಮಾಜಕ್ಕೆ, ಶಿಕ್ಷಣಕ್ಕೆ ಹಾಗೂ ರಾಜ್ಯ ಕ್ಕೆ ಒಳ್ಳೆಯದಾಗಬೇಕು. ಅದು ಆಗಲಿದೆ ಎನ್ನುವ ನಂಬಿಕೆ ನನ್ನದು ಎಂದರು.

ಉತ್ತರ ಕರ್ನಾಟಕದಲ್ಲಿ ಕೆ.ಎಲ್.ಈ ಸಂಸ್ಥೆಯಿಂದ ಶಿಕ್ಷಣ ಕ್ರಾಂತಿಯಾಗಿದೆ. ಬಸವರಾಜ ಹೊರಟ್ಟಿಯವರು 43 ವರ್ಷಗಳ ಸುದೀರ್ಘ ಅವಧಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಅವರು ಛಲ ಹಾಗೂ ಸಕಾರಾತ್ಮಕ ಚಿಂತನೆವುಳ್ಳ ವ್ಯಕ್ತಿ. ಶಿಕ್ಷಣ ಕ್ಷೇತ್ರದಲ್ಲಿ ಕಾನೂನು ಬದಲಾವಣೆಗಳು ಅವರಿಂದಾಗಿದೆ. ಶಿಕ್ಷಕರು ಹಾಗೂ ಬಸವರಾಜ ಹೊರಟ್ಟಿ ಅವರದ್ದು ತಾಯಿ ಮಕ್ಕಳ ಸಂಬಂಧ. ಹೊರಟ್ಟಿ ಅವರು ಈ ಎತ್ತರಕ್ಕೆ ಏರಲು ಅವರ ಕಠಿಣ ಪರಿಶ್ರಮ ಕಾರಣ. ಶಿಕ್ಷಕರ ಕ್ಷೇತ್ರ ಮಾತ್ರವಲ್ಲ ನಾಡಿನ ಸಮಗ್ರ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ ಎಂದರು.

ಆದ್ದರಿಂದ ತಮ್ಮ ಮತ ಮಾತ್ರವಲ್ಲದೆ ಎಲ್ಲರೂ ದಾಖಲೆ ಪ್ರಮಾಣದ ಮತಗಳನ್ನು ಹಾಕಬೇಕಿದೆ. ಬಸವರಾಜ ಹೊರಟ್ಟಿಯವರ ಮೇಲೆ ತಮ್ಮ ಆಶೀರ್ವಾದವಿರಬೇಕು ಎಂದರು.

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದಿಂದ ಕ್ರಾಂತಿಕಾರಿ ಬದಲಾವಣೆ

ಶಿಕ್ಷಣ ಹಾಗೂ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರ ಕ್ರಾಂತಿಕಾರಿ ಬದಲಾವಣೆ ತರುತ್ತಿದೆ. ಯುವಕರಿಗೆ ಅವಕಾಶಗಳನ್ನು ಒದಗಿಸಲಾಗುತ್ತಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣಕ್ಕಾಗಿ ಬಸವರಾಜ ಹೊರಟ್ಟಿಯವರಿಗೆ ಪ್ರಥಮ ಪ್ರಾಶಸ್ತ್ಯ ಮತಗಳನ್ನು ನೀಡಬೇಕೆಂದು ಕೋರಿದರು.

About The Author