International news
ನ್ಯೂಯಾರ್ಕ್(ಫೆ.21): ಗಾಯಗೊಂಡಿರುವ ಸಿಂಹದ ಕೂಗೂ ಘರ್ಜನೆಗಿಂತ ಭಯಂಕರ ಎನ್ನುವ ಮಾತು ಈಗ ಗೂಗಲ್ ಕಂಪನಿಯಲ್ಲಿ ಕೆಲಸವನ್ನು ಕಳೆದುಕೊಂಡಿರುವ ಉದ್ಯೋಗಿಗಳ ಜೀವನದಲ್ಲಿ ನಿಜವಾಗಿದೆ. ಕೆಲವು ತಿಂಗಳುಗಳ ಹಿಂದೆ ಗೂಗಲ್ ಕಂಪನಿ 12 ಸಾವಿರ ಕೆಲಸಗಾರರನ್ನು ಕಂಪನಿಯು ವಜಾಗೊಳಿಸಿತ್ತು. ಅದರಲ್ಲಿ ಕಂಪನಿಯ ಸಿನಿಯರ್ ಮ್ಯಅನೇಜರ್ ಆಗಿದ್ದ ಹೆನ್ರಿ ಕಿರ್ಕ್ ಮತ್ತು ಇನ್ನ್ಊ ಆರು ಜನ ಉದ್ಯೋಗ ವಂಚಿತರ ಜೀವನದಲ್ಲಿ ಹೊಸ ತಿರುವನ್ನು ಪಡೆದುಕೊಂಡಿದ್ದಾರೆ.
ಗೂಗಲ್ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದ ಹೆನ್ರಿ ಕಿರ್ಕ್ ಮುಂದಾಳತ್ವದಲ್ಲಿ ಒಟ್ಟು ಏಳು ಮಂದಿ ಸೇರಿ ಅಮೆರಿಕದ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಡಿಸೈನ್ ಮತ್ತು ಡೆವಲಪ್ಮೆಂಟ್ ಸ್ಟುಡಿಯೋ ಸ್ಥಾಪಿಸಿದ್ದಾರೆ.
ಗೂಗಲ್ ದಿಢೀರನೇ 12 ಸಾವಿರ ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದವರು. ಅವರಲ್ಲಿ ಈ ಏಳು ಮಂದಿಯೂ ಇದ್ದಾರೆ. ಈ 12 ಸಾವಿರ ಮಂದಿಗೆ 60 ದಿನಗಳ ಕಾಲ ಸಮಯಾವಕಾಶ ಇದೆ. ಅಷ್ಟರೊಳಗೆ ಇವರು ಹೊಸ ಕೆಲಸ ಹುಡುಕಿಕೊಳ್ಳಬೇಕು ಇಲ್ಲಾ ಹೊಸ ಕಂಪನಿ ಸ್ಥಾಪನೆ ಮಾಡಬೇಕು. ಈ ಸಂದಿಗ್ಧ ಸಂದರ್ಭದಲ್ಲಿ ಹೆನ್ರಿ ಕಿರ್ಕ್ ಗೂಗಲ್ನ ಕೆಲ ಆಯ್ದ 6 ಟೆಕ್ಕಿಗಳನ್ನು ಜೊತೆಗೆ ಹಾಕಿಕೊಂಡು ಹೊಸ ಕಂಪನಿಯನ್ನೇ ಹುಟ್ಟುಹಾಕಲು ನಿರ್ಧರಿಸಿದ್ದಾರೆ.

