ಗಾಂಧಿನಗರದಲ್ಲಿ ಶುಕ್ರವಾರ ಬಂತಂದ್ರೆ ಸಿನಿಪ್ರೇಕ್ಷಕನಿಗೆ ಭರ್ಜರಿ ರಸದೌತಣ ಸಿಕ್ತಿತ್ತು.. ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾಗಳನ್ನು ನೋಡಿ ಪ್ರೇಕ್ಷಕಪ್ರಭು ಥ್ರಿಲ್ ಆಗ್ತಿದ್ದ. ಬಟ್ ಈ ಕೊರೋನಾ ಬದ್ಮೇಲೆ ಜನ ಥಿಯೇಟರ್ ಅಂಗಳಕ್ಕೆ ಬರ್ತಾರೋ ಇಲ್ವೋ..? ಅನ್ನೋ ಪ್ರಶ್ನೆ ನಡುವೆಯೇ ರಿಲೀಸ್ ಆದ ಆಕ್ಟ್ 1978 ಸಿನಿಮಾಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಇದರ ಬೆನ್ನಲ್ಲೇ ಹೊಸಬರು ಧೈರ್ಯ ಮಾಡಿ ಸಿನಿಮಾ ರಿಲೀಸ್ ಗೆ ಮಾಡ್ತಿದ್ದಾರೆ.
ನಾಲ್ಕು ಸಿನಿಮಾಗಳು ಚಿತ್ರಮಂದಿರಕ್ಕೆ ಲಗ್ಗೆ..
ಇದರ ಪ್ರತಿಫಲವಾಗಿ ಶುಭ ಶುಕ್ರವಾರವಾಗಿರುವ ಇಂದು ಕನ್ನಡ ಬೆಳ್ಳಿಪರದೆಯ ಮೇಲೆ ನಾಲ್ಕು ವಿಭಿನ್ನ ಕಥಾಹಂದರ ಹೊಂದಿರುವ ಹೊಸಬರ ಸಿನಿಮಾಗಳು ರಿಲೀಸ್ ಆಗಿವೆ. ತನಿಖೆ, ಆರ್ ಎಚ್ 100, ಕಿಲಾಡಿಗಳು ಸೇರಿದಂತೆ ನಾನೊಂಥರ ಸಿನಿಮಾಗಳು ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿವೆ.
ಜಿಎಸ್ ಕಲಿಗೌಡ ಆ್ಯಕ್ಷನ್ ಕಟ್ ಹೇಳಿರುವ ತನಿಖೆ, ಎಂಸಿ ಮಹೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ಹರ್ಷ, ಗಣೇಶ್,ಚಿತ್ರ ನಟನೆಯ ಆರ್ ಎಚ್ 100 ಸಿನಿಮಾ, ರಮೇಶ್ ಕಗ್ಗಲು ನಿರ್ದೇಶನದ, ತಾರಖ್ ನಾಯಕ ನಟನಾಗಿ ಅಭಿನಯಿಸಿರುವ ನಾನೊಂಥರ ಸಿನಿಮಾದ ಜೊತೆಗೆ ಕಿಲಾಡಿಗಳು ಸಿನಿಮಾ ಕೂಡ ಇಂದು ರಿಲೀಸ್ ಆಗಿವೆ.