ಬೀದರ್: ಗಾಣಾಪುರದಲ್ಲಿನ ದೇವಾಲಯಕ್ಕೆ ತೆರಳುತ್ತಿದ್ದಂತ ವೇಳೆಯಲ್ಲಿ, ಕ್ಯಾಂಟರ್ ಒಂದು ಕಾರಿಗೆ ಡಿಕ್ಕಿಯಾದ ಪರಿಣಾಮ, ಕಾರಿನಲ್ಲಿದ್ದಂತ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ 6 ಮಂದಿ ಗಾಯಗೊಂಡಿರೋ ಘಟನೆ ಬೀದರ್ ನ ಬಂಗೂರು ಬಳಿಯಲ್ಲಿ ಇಂದು ನಡೆದಿದೆ.
ಹೈದರಾಬಾದ್ ನ ಬೇಗಂ ಪೇಟೆ ನಿವಾಸಿಗಳೆಂದು ಹೇಳಲಾಗುವಂತವರು, ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದಲ್ಲಿನ ದೇವಸ್ಥಾನಕ್ಕೆ ಎರಿಟಿಗ ಕಾರಿನಲ್ಲಿ ಇಂದು ತೆರಳುತ್ತಿದ್ದರು. ಈ ಕಾರಿಗೆ ಬೀದರ್ ತಾಲೂಕಿನ ಬಂಗೂರು ಬಳಿಯಲ್ಲಿ ಕ್ಯಾಂಟರ್ ಒಂದು ಡಿಕ್ಕಿಯಾಗಿದೆ.
ಕ್ಯಾಂಟರ್ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದಂತ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೂ 6 ಮಂದಿ ಗಾಯಗೊಂಡಿದ್ದು, ಅವರನ್ನು ಮನ್ನಾಖೇಳಿಯಲ್ಲಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈ ಸಂಬಂಧ ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




