ಕಾಬೂಲ್: ಇಲ್ಲಿನ ಶಾಲೆಯೊಂದರ ಬಳಿಯಲ್ಲಿ ಸರಣಿ ಬಾಂಬ್ ಸ್ಪೋಟಗೊಂಡ ಪರಿಣಾಮ, ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೇ 14ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರೋ ಘಟನೆ ಇಂದು ನಡೆದಿದೆ.
ಈ ದಾಳಿಯನ್ನು ಶಿಯಾ ಸಮುದಾಯದವರನ್ನು ಗುರಿಯಾಗಿಸಿಕೊಂಡು ನಡೆದಿದ್ದು ಎನ್ನಲಾಗಿದೆ. ಐಎಸ್ ಉಗ್ರರಿಂದ ದಾಳಿ ನಡೆದಿರಬಹುದು ಎಂಬುದಾಗಿ ಪೊಲೀಸ್ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.
ಕಾಬೂಲ್ ನ ಅಬ್ದುಲ್ ರಹೀಮ್ ಹೈ ಸ್ಕೂಲ್ ಸುತ್ತಾಮುತ್ತಾ ಶಿಯಾ ಸಮುದಾಯದವೇ ಹೆಚ್ಚಿನ ಸಂಖ್ಯೆಯಲ್ಲಿ ಇರೋ ಕಾರಣ, ಈ ಪ್ರದೇಶವನ್ನೇ ಗುರಿಯಾಗಿಟ್ಟುಕೊಂಡು ಎರಡು ಕಡೆ ಬಾಂಬ್ ಸ್ಪೋಟಿಸಲಾಗಿದೆ.




