- Advertisement -
ಬರುಡುಗುಂಟೆ ಬಳಿ ನಡೆದ ಶಾಲಾ ಬಸ್ ಹಾಗೂ ಬೈಕ್ ಅಪಘಾತದಲ್ಲಿ, ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದಾರೆ. ಮತ್ತೊಂದು ಸಂಕಟ ಅಂದ್ರೆ, ಮಹಿಳೆಯೊಬ್ರು ತನ್ನ ಇಡೀ ಕುಟುಂಬವನ್ನೇ ಕಳೆದುಕೊಂಡು ಅನಾಥವಾಗಿದ್ದಾರೆ. ಆ ಅಪಘಾತದಲ್ಲಿ ಬಲಿಯಾದವರು ಆ ಮಹಿಳೆಯ ತಂದೆ, ಗಂಡ, ಮಗ ಹಾಗೂ ತಮ್ಮ. ತನ್ನವರನ್ನೆಲ್ಲಾ ಕಳೆದುಕೊಂಡು ಆ ಮಹಿಳೆಯ ಆಕ್ರಂದನ ಮುಗಿಲುಮುಟ್ಟಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಬರುಡುಗುಂಟೆ ಗ್ರಾಮದ ಬಳಿ, ಅಕ್ಟೋಬರ್ 23ರಂದು ರಾತ್ರಿ ಅಪಘಾತ ಸಂಭವಿಸಿತ್ತು. ಸ್ವಾತಿ ಎನ್ನುವ ಮಹಿಳೆ ಕುಟುಂಬಕ್ಕೆ ಆಧಾರವಾಗಿದ್ದ ಗಂಡ ಬಾಲಾಜಿ, ತನ್ನ ತಂದೆ ವೆಂಕಟೇಶಪ್ಪ, ಮಗ ಆರ್ಯ, ತಮ್ಮ ಹರ್ಷ ನ್ನ ಕಳೆದುಕೊಂಡು ಕಣ್ಣೀರಾಕುವಂತಾಗಿದೆ. ಸಂಬಂಧಿಕರ ಮದುವೆಗೆ ಹೋಗುತ್ತಿದ್ದವರು ಬಾರದ ಲೋಕಕ್ಕೆ ತೆರಳಿದ್ದಾರೆ. ದುರ್ಘಟನೆಯಲ್ಲಿ ಮಗು ಪವಾಡ ಸದೃಶ್ಯದಂತೆ ಬದುಕುಳಿದಿದೆ.
- Advertisement -

