Facebook Instagram Twitter Youtube
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
Search
Sign in
Welcome! Log into your account
Forgot your password? Get help
Privacy Policy
Password recovery
Recover your password
A password will be e-mailed to you.
Karnataka TVKarnataka Tv
Sign in / Join
Tuesday, December 23, 2025
Sign in / Join
Facebook
Instagram
Twitter
Youtube
Karnataka TVKarnataka Tv
  • Home
  • ರಾಜಕೀಯ
  • ಜಿಲ್ಲಾ ಸುದ್ದಿಗಳು
  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ಸಿನಿಮಾ
    • ಬ್ಯೂಟಿ ಟಿಪ್ಸ್
  • ಕ್ರೀಡೆ
  • ಆಧ್ಯಾತ್ಮ
  • ತಂತ್ರಜ್ಞಾನ
  • ವೆಬ್ ಸ್ಟೋರಿ
type here...
  • Best MLA
    • old ಮೈಸೂರು
Home ರಾಜ್ಯ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ‘ಬ್ಯಾಂಕ್’ ಖಾತೆ
  • ರಾಜ್ಯ

ಶಾಲೆ ವಿದ್ಯಾರ್ಥಿಗಳಿಗೆ ಉಚಿತ ‘ಬ್ಯಾಂಕ್’ ಖಾತೆ

December 14, 2025
WhatsApp
Twitter
Facebook
Linkedin
Telegram

    ಕೆಲವು ಕನ್ನಡ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರುವ ಹಿನ್ನೆಲೆಯಲ್ಲಿ, ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿರುವುದು ಗಮನಾರ್ಹವಾಗಿದೆ. ಆದರೆ ಮಂಗಳೂರಿನ ಅಶೋಕನಗರದ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ವಿಶೇಷ, ವಿನೂತನ ಯೋಜನೆಯನ್ನು ಆರಂಭಿಸಿದೆ.

    2025-26ನೇ ಶೈಕ್ಷಣಿಕ ವರ್ಷದಲ್ಲಿ ದಾಖಲಾದ 1ರಿಂದ 3ನೇ ತರಗತಿಯ 17 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯನ್ನು ಇಲ್ಲಿ ತೆರೆಯಲಾಗಿದೆ. ವಿಶೇಷವೆಂದರೆ 5 ವರ್ಷದವರೆಗೆ ಅನ್ವಯವಾಗುವಂತೆ ಪ್ರತೀ ವಿದ್ಯಾರ್ಥಿಯ ಹೆಸರಿನಲ್ಲಿ ತಲಾ 5 ಸಾವಿರ ರೂಪಾಯಿಗಳನ್ನು ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ. 17 ವಿದ್ಯಾರ್ಥಿ ಗಳ ಠೇವಣಿಯ ಮೊತ್ತವನ್ನು ಉದ್ಯಮಿ ದಿನಕರ ರಾವ್ ಅವರು ಪಾವತಿಸಿದ್ದಾರೆ. 5 ವರ್ಷದ ನಂತರ ಇದು 6690 ರೂ ಆಗಿರುತ್ತದೆ.

    ಆ ವಿದ್ಯಾರ್ಥಿಯಿ 5 ವರ್ಷ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದಿದ್ದರೆ 5 ವರ್ಷದ ಬಳಿಕ ವಿದ್ಯಾರ್ಥಿ ಆ ಹಣವನ್ನು ಖಾತೆಯಿಂದ ಪಡೆಯಬಹುದಾಗಿದೆ. ಈ ಮೂಲಕ ಕನ್ನಡ ಮಾಧ್ಯಮ ಶಾಲೆಯತ್ತ ಆಕರ್ಷಿಸುವ ಪ್ರಯತ್ನ ಇಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಶಾಲೆಗೆ ಸರ್ಕಾರದ ಪೂರ್ಣಕಾಲಿಕ ಶಿಕ್ಷಕರ ಸೇವೆ ಸಿಗದಿದ್ದರೂ, ಸ್ಥಳೀಯ ಸಂಘ ಸಂಸ್ಥೆಗಳ ಮತ್ತು ದಾನಿಗಳ ನೆರವಿನಿಂದ ಶಾಲೆಯ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ.

    ಈ ಕ್ರಮದಿಂದ ಶತಮಾನದ ಹಳೆಯ ಈ ಶಾಲೆಗೆ ಹೊಸ ಬೆಳಕು ಮೂಡುತ್ತಿದೆ. ಪ್ರಸ್ತುತ ಶಾಲೆಯಲ್ಲಿ ಸುಮಾರು 100 ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ನಿರ್ವಹಿಸುತ್ತಿದ್ದಾರೆ. ಇಂತಹ ನೂತನ ಮತ್ತು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳು ಕನ್ನಡ ಮಾಧ್ಯಮ ಶಾಲೆಗಳತ್ತ ಮಕ್ಕಳನ್ನು ಆಕರ್ಷಿಸುವಲ್ಲಿ ಮಹತ್ವಪೂರ್ಣ ಸಾಧನವಾಗಲಿದೆ ಎಂದು ಶಾಲಾ ಆಡಳಿತವು ತಿಳಿಸಿದೆ.

    ವರದಿ : ಲಾವಣ್ಯ ಅನಿಗೋಳ

    About The Author

    Karnataka Tv

    See author's posts

    • TAGS
    • Educational Incentives India
    • Innovative Education Program
    • Kannada medium school
    • Mangalore Ashokanagar School
    • Student Bank Account Scheme
    • Student Enrollment Initiative
    Share
    WhatsApp
    Twitter
    Facebook
    Linkedin
    Telegram
      Previous articleಬಿಜೆಪಿ ಗೆಲುವಿಗೆ IPS ಸ್ಪರ್ಶ: ರಾಜಕೀಯದಲ್ಲಿ ಹೊಸ ಅಧ್ಯಾಯ
      Next articleರಾಜ್ಯ ಪ್ರಶಸ್ತಿ ನಟಿಗೆ ಶಾಕ್! ಪೈಂಟ್ ನೆಪದಲ್ಲಿ ಕಳ್ಳತನ
      Karnataka Tv

      RELATED ARTICLESMORE FROM AUTHOR

      ಶಿಕ್ಷಣ ಸಚಿವ ಮಧು ನೀಡಿದ್ರು PUC ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ !

      ಫ್ಯಾಟ್‌ ಪೊಲೀಸ್‌ ಅಲ್ಲ : ಇನ್ಮೇಲೆ ಫಿಟ್‌ ಪೊಲೀಸ್‌!

      Tumakuru News: ಎರಡು ಗುಂಪುಗಳ ನಡುವೆ ಮಾರಾಮಾರಿ: ಓರ್ವ ವ್ಯಕ್ತಿಗೆ ಗಂಭೀರ ಗಾಯ

      Stay connected

      Facebook
      Instagram
      Twitter
      Youtube

      © 2025 Karnataka TV - All Rights Reserved | Powered by Kalahamsa Infotech Pvt. ltd.