ಬೆಂಗಳೂರು: ರಾಜ್ಯ ಸರ್ಕಾರದ ಐದು ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಸಾಕಷ್ಟು ಮಹಿಳೆಯರು ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸುತ್ತಿದ್ಧಾರೆ ಇದರಿಂದಾಗಿ ಸಾರಿಗೆ ಬಸ್ ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ ಆಸನಗಳಿಗಾಗಿ ಜಗಳಗಳೂ ನಡೆಯುತ್ತಿವೆ.
ಶಾಲಾ ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಸ್ಥಳಾವಕಾಶದ ಕೊರತೆ ಉಂಟಾಗಿದೆ ಒಂದೊಂದು ಬಾರಿ ಹತ್ತುವಾಗ ಇಳಿಯುವಾಗಿ ಜಾರಿ ಕೆಳಗೆ ಬಿದ್ದಿರುವುದು ಉಂಟು ಇದರಿಂದ ಹೈರಾಣಾದ ಕೆಲವು ಕಾನೂನು ವಿದ್ಯಾರ್ಥಿ ಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದಾರೆ.ದೂರ ಊರಿಗೆ ನಿಂತು ಪ್ರಯಾಣ ಮಾಡಲು ಅವಕಾಶ ಕೊಡಬಾರದು. ಜೊತೆಗೆ ಟಿಕೆಟ್ ಖರೀದಿಸಿದವರಿಗೆ ಶೇ.50 ರಷ್ಟು ಸೀಟ್ ಮೀಸಲಿಡಬೇಕು ಜೊತೆಗೆ ಸಾರಿಗೆ ಬಸ್ನಲ್ಲಿ ಮಕ್ಕಳು, ವೃದ್ಧರ ಬಸ್ ಪ್ರವೇಶಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಪಿಐಎಲ್ ಮೂಲಕ ಹೈಕೋರ್ಟ್ಗೆ ಕಾನೂನು ವಿದ್ಯಾರ್ಥಿಗಳ ಎಂದು ಪಿಐಎಲ್ನಲ್ಲಿ ಕೋರಿ ಮನವಿ ಮಾಡಿದ್ದಾರೆ.
ನೋಡೋಣ ಸರ್ಕಾರ ಇದಕ್ಕೆ ಯಾವ ರೀತಿ ಸ್ಪಂದಿಸುತ್ತದೆ. ಅಥವಾ ಪರಿಹಾರವಾಗಿ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡುತ್ತಾ ಅಂತ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
Kaira adwani: ತಾಯಿಯಾಗುವ ಬಯಕೆ ವ್ಯಕ್ತಪಡಿಸಿದ ಬಾಲಿವುಡ್ ನಟಿ ಕಿಯಾರಾ ಅದ್ವಾನಿ