ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಶಕ್ತಿ ಯೋಜನೆ ಆರಂಭವಾಗುತ್ತಿದ್ದಂತೆ ನಗರ ಸಾರಿಗೆಗೆ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಬಸ್ ಬಾಗಿಲಿನಲ್ಲಿ ನಿಂತು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಸ್ಥಳೀಯರು ಎಷ್ಟೇ ಹೇಳಿದರೂ ನಮ್ಮ ಜನರು ಮಾತ್ರ ಕೇಳುವ ಪರಿಸ್ಥಿತಿಯಲ್ಲಿಲ್ಲ.
ಹೌದು.. ಹುಬ್ಬಳ್ಳಿಯ ಚನ್ನಮ್ಮ ವೃತ್ತದ ಬಳಿಯಲ್ಲಿ ನೇಕಾರನಗರದ ಬಸ್ಸಿನಲ್ಲಿ ಇಂತಹದೊಂದು ಘಟನೆ ಸಂಭವಿಸಿದ್ದು, ಮಹಿಳಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಬಸ್ಸಿನಲ್ಲಿ ಪ್ರಯಾಣ ಮಾಡಲು ಸರ್ಕಸ್ ಮಾಡುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಇಲ್ಲಿ ಅಷ್ಟೇ ಅಲ್ಲದೆ ರಾಜ್ಯದ ನಾನಾ ಕಡೆ ಬಸ್ ಗಳ ಬೇಡಿಕೆ ಜಾಸ್ತಿ ಇದೆ. ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಪರದಾಡುತಿದ್ದಾರೆ.
ಇನ್ನೂ ಒಂದು ಬಸ್ ಹೋದರೇ ಮತ್ತೊಂದು ಬಸ್ ಬರುತ್ತೇ. ಆದರೆ ಅಪ್ಪಿತಪ್ಪಿ ಜೀವ ಹೋದರೇ ಏನು ಮಾಡೋದು ಎಂಬುವಂತ ಸಾಮಾನ್ಯ ಜ್ಞಾನವೂ ಜನರಿಗೆ ಇಲ್ಲದಂತಾಗಿದೆ.ಆದರೆ ಶಾಲಾ ಕಾಲೆಜು ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಹೋಗದಿದ್ದರೆ ಅವರ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀಳುವ ಪರಿಸ್ಥಿತಿಯಿಂದಾಗೆ ಬಾಗಿಲಲ್ಲಿ ಜೋತು ಬಿದ್ದು ಕಾಲೇಜುಗಳಿಗೆ ತೆರಳುತಿದ್ದಾರೆ.
Veerappa Moily : ಬಿಜೆಪಿಯು ಸೇಡಿನ ರಾಜಕೀಯ ಮಾಡುತ್ತಿದೆ : ಎಂ.ವೀರಪ್ಪ ಮೊಯ್ಲಿ
Shivaraj kumar- “ಕರಟಕ ದಮನಕ”ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ