Wednesday, April 23, 2025

Latest Posts

ಕಿಮ್ಸ್ ನಲ್ಲಿ ಉಚಿತ ಕೋವಿಡ್ ಕಿಟ್ ವಿತರಣೆ- ಲಸಿಕೆಗೆ ಬಂದ ಜನಸಾಗರ

- Advertisement -

www.karnatakatv.net: ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಬೃಹತ್ ಕೋವಿಡ್ ಲಸಿಕಾ ಅಭಿಯಾನ ನಡೆಯುತ್ತಿದ್ದು ಲಸಿಕೆಯೊಂದಿಗೆ ಉಚಿತವಾಗಿ ಕೋವಿಡ್ ಕಿಟ್ ವಿತರಣೆ ಮಾಡಲಾಗ್ತಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೀತಿರೋ ಲಸಿಕಾ ಅಭಿಯಾನದಲ್ಲಿ 85 ಸಾವಿರ ಮಂದಿಗೆ ಲಸಿಕೆ ನೀಡೋ ಗುರಿ ಹೊಂದಲಾಗಿದೆ. ಹೀಗಾಗಿ ಸಮರೋಪಾದಿಯಲ್ಲಿ ಜನರು ಲಸಿಕಾ ಕೇಂದ್ರಕ್ಕೆ ಆಗಮಿಸಿ ಲಸಿಕೆ ಪಡೆಯುತ್ತಿದ್ದಾರೆ. ಇನ್ನು ಹುಬ್ಬಳ್ಳಿಯಾದ್ಯಂತ 420ಕ್ಕೂ ಹೆಚ್ಚು ಲಸಿಕಾ ತಂಡಗಳನ್ನು ರಚಿಸಲಾಗಿದೆ. ಇನ್ನು ಕಿಮ್ಸ್ ಆಸ್ಪತ್ರೆಯಿಂದಲೇ 150 ಲಸಿಕಾ ತಂಡಗಳು ಜಿಲ್ಲೆಯಾದ್ಯಂತ ತೆರಳಿ ಲಸಿಕೆ ನೀಡುವಲ್ಲಿ ನಿರತವಾಗಿವೆ.

ಇ‌ನ್ನೂ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿನಿಂದ ಪತ್ರಿ ದಿನ 10 ಸಾವಿರಕ್ಕೂ ಅಧಿಕ ಲಸಿಕೆ ನೀಡಲಾಗುತ್ತಿದೆ. ಅಭಿಯಾನದ ನಂತರವೂ ಪತ್ರಿ ದಿನ 10 ಸಾವಿರ ಲಸಿಕೆ ನೀಡಲಾಗುತ್ತೆ ಅಂತ ಜಿಲ್ಲಾಡಳಿತ ಮಾಹಿತಿ ನೀಡಿದೆ.

ಕರ್ನಾಟಕ ಟಿವಿ- ಹುಬ್ಬಳ್ಳಿ

- Advertisement -

Latest Posts

Don't Miss