www.karnatakatv.net : ಹುಬ್ಬಳ್ಳಿ: ದಟ್ಟವಾದ ಮೋಡ, ಭಾರೀ ಮಳೆ, ಮಂಜು ಮುಸುಕಿದ ವಾತಾವರಣವಿದ್ದರೂ ಇನ್ನು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಸುಲಭವಾಗಿ, ಸುರಕ್ಷಿತವಾಗಿ ಇಳಿಸಬಹುದು. ಹೌದು.. ಇನ್‌ಸ್ಟ್ರುಮೆಂಟಲ್ ಲ್ಯಾಂಡಿಂಗ್ ಸಿಸ್ಟಂ ( ಐಎಲ್‌ಎಸ್ ) ಕಾರ್ಯಾರಂಭ ಮಾಡಿದೆ.
ಹೌದು.. ಇತ್ತೀಚಿಗೆ ಮೂರು ನಾಲ್ಕು ಬಾರಿ ಹವಾಮಾನ ವೈಪರೀತ್ಯದಿಂದ ಇಲ್ಲಿ ಇಳಿಯಬೇಕಾಗಿದ್ದ ವಿಮಾನವನ್ನು ಮಂಗಳೂರು, ಬೆಂಗಳೂರು ಸೇರಿದಂತೆ ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ಕಳುಹಿಸಿ ನಾಲ್ಕಾರು ಗಂಟೆಗಳ ಬಳಿಕ ವಾಪಸ್ ಇಲ್ಲಿ ಬಂದಿತ್ತು. ಇನ್ನೂ ಕೆಲವೊಂದು ವಿಮಾನ ಆಗಸದಲ್ಲೇ ಅರ್ಧ ಗಂಟೆ, ಗಂಟೆಗಳ ಕಾಲ ಸುತ್ತು ಹೊಡೆದು ಬಳಿಕ ಸುರಕ್ಷಿತವಾಗಿ ಇಳಿಸಲಾಗಿತ್ತು. ಆದರೆ ಇನ್ನುಮುಂದೆ ಇಂತಹ ಯಾವುದೇ ಸಮಸ್ಯೆಗಳು ಕೂಡ ಎದುರಾಗದು. ಈಗಾಗಲೇ ಐಎಲ್‌ಎಸ್ ವ್ಯವಸ್ಥೆ ಕಾಮಗಾರಿ ಪೂರ್ಣಗೊಂಡಿದ್ದು, ಇಂದು ಸಾಂಕೇತಿಕವಾಗಿ ಚಾಲನೇ ನೀಡಲಾಗಿದೆ. ಇನ್ನುಮುಂದೆ ಲ್ಯಾಂಡಿಂಗ್ ಸಮಸ್ಯೆ ಎದುರಾಗದು.
2020ರ ಜನವರಿಯಿಂದ, ರೆಡ್, ಟವರ್ ಅಳವಡಿಕೆ ಕಾಮಗಾರಿ ನಡೆದಿತ್ತು. ನವೆಂಬರ್‌ನಲ್ಲಿಯೇ ಇದರ ಕಾರ್ಯ ಬಹುತೇಕ ಪೂರ್ಣಗೊಂಡಿತ್ತು. ಆದರೆ, ಕೊರೋನಾ ಸೇರಿ ಇತರ ಕಾರಣದಿಂದ ಪರಿಶೀಲನಾ ಕಾರ್ಯ ಈ ವರ್ಷ ನಡೆಸಲು ನಿಶ್ಚಯಿಸಲಾಯಿತು. ಹೀಗಾಗಿ ವಿಳಂಬವಾಗಿದೆ. ಈಗಾಗಲೇ ಮೂರು ಹಂತದ ಪ್ರಾಯೋಗಿಕತೆ ಪೂರ್ಣಗೊಂಡಿದ್ದು, ಇಂದಿನಿಂದ ಐಎಲ್ಎಸ್ ಲ್ಯಾಂಡಿಂಗ್ ಕಾರ್ಯನಿರ್ವಹಿಸಲಿದೆ.
ಕರ್ನಾಟಕ ಟಿವಿ ಹುಬ್ಬಳ್ಳಿ