ಹಾಸನ:
ಮನುಷ್ಯನಲ್ಲಿ ಆರೋಗ್ಯ ಸರಿಯಾಗಿಲ್ಲದಿದ್ದರೇ ಎಷ್ಟೆ ಕೋಟಿ ಹಣ ಸಂಪಾದನೆ ಮಾಡಿದ್ದರೂ ಪ್ರಯೋಜನಕ್ಕೆ ಬರುವುದಿಲ್ಲ. ಮೊದಲು ಆರೋಗ್ಯದ ಕಡೆ ಗಮನ ನೀಡಿದರೇ ಬದುಕು ಸುಂದರವಾಗಿರುತ್ತದೆ ಎಂದು ಮಧುಮೇಹ ತಜ್ಞರು ಮತ್ತು ಹಿಮ್ಸ್ ಸಹ ಪ್ರಾಧ್ಯಾಪಕರಾದ ಡಾ|| ಬಿ.ಆರ್. ಹಾಲೇಶ್ ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ತಾಲೂಕು ಅಧಿಕಾರಿ ಡಾ. ವಿಜಯ್ ತಿಳಿಸಿದರು.
ನಗರದ ಹಾಸನಾಂಬ ದೇವಾಲಯದ ಬಳಿ, ಶ್ರೀ ಚೌಡೇಶ್ವರಿ ದೇವಾಲಯದ ಮುಂಬಾಗ ಇರುವ ಶ್ರೀರಾಮ ಮಂದಿರದ ಆವರಣದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿರುವ ಎಲ್ಲಾ ದೇವಾಂಗ ಸಂಘಗಳ ಸಹಯೋಗದಲ್ಲಿ ಹಾಸನ ಜಿಲ್ಲಾ ನೌಕರರ ಸಂಘದವತಿಯಿಂದ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ದೇವಾಂಗ ಕುಲಬಾಂಧವರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯ ಇಲ್ಲದಿದ್ದರೇ ಮನುಷ್ಯನಲ್ಲಿ ಎಷ್ಟೆ ಕೋಟಿ ಹಣ ಸಂಪಾದನೆ ಮಾಡಲಾಗಿದ್ದರೂ ಯಾವ ಪ್ರಯೋಜನಕ್ಕೆ ಬರುವುದಿಲ್ಲ. ಮೊದಲು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಕೊಡಬೇಕು. ದೇಹದಲ್ಲಿ ಅನೇಕ ಖಾಯಿಲೆಗಳು ಬರಬಹುದು. ಮುಂಜಾಗ್ರತೆಯಿಂದ ಕಾಲಕಾಲಕ್ಕೆ ಶುಗರ್, ಬಿಪಿ, ರಕ್ತ ಪರೀಕ್ಷೆ, ಇಸಿಜಿ, ಕೊಲೆಸ್ಟ್ರಾ ಇತರೆ ತಪಾಸಣೆಯನ್ನು ಮಾಡಿಸಿಕೊಂಡರೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಯಾರು ಕೂಡ ಆರೋಗ್ಯಕರವಾದ ಉತ್ತಮ ಆಹಾರವನ್ನು ಸೇವಿಸುತ್ತಿಲ್ಲ. ಜಂಕ್ ಫುಡ್ ನ್ನು ಹೆಚ್ಚಿನ ರೀತಿ ಸೇವಿಸಿ ಅನೇಕ ಖಾಯಿಲೆಗಳನ್ನು ನಾವುಗಳೆ ಕರೆದುಕೊಳ್ಳುತ್ತಿದ್ದೇವೆ. ಆಹಾರ ಪದ್ಧತಿಯಲ್ಲೂ ಕೂಡ ವೈದ್ಯರ ಸಲಹೆ ಪಡೆದು ಸೇವಿಸಿದರೇ ಉತ್ತಮ ಎಂದರು. ಪ್ರತಿನಿತ್ಯ ಕೆಲ ಸಮಯಗಳ ಕಾಲ ವ್ಯಾಯಾಮ ಮತ್ತು ಧ್ಯಾನ ಮಾಡಿದರೇ ಖಾಯಲೆಯಿಂದ ದೂರವಿದ್ದು, ಆರೋಗ್ಯವನ್ನು ಸಮತೋಲನದಲ್ಲಿಟ್ಟುಕೊಳ್ಳಬಹುದಾಗಿದೆ ಎಂದು ಕಿವಿಮಾತು ಹೇಳಿದರು. ಯಾವುದೇ ಖಾಯಿಲೆ ಇದ್ದರೂ ಪ್ರಾರಂಭದಲ್ಲೆ ತಪಾಸಣೆಗೆ ಒಳಪಡಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು. ಇಂತಹ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ನೌಕರರ ಸಂಘದ ರಾಜ್ಯ ಉಪಾಧ್ಯಕ್ಷರಾದ ನಾಗೇಶ್ ಕುಮಾರ್ ಮಾತನಾಡಿ, ಹಾಸನ ಜಿಲ್ಲಾ ನೌಕರರ ಸಂಘದವತಿಯಿಂದ ನಗರದ ಶ್ರೀರಾಮ ಮಂದಿರದಲ್ಲಿ ದೇವಾಂಗ ಜನಾಂಗದ ಕುಲಬಾಂಧವರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಸ್ತುತದ ಜೀವನಶೈಲಿಯಲ್ಲಿ ಹೆಚ್ಚಿನ ರೀತಿ ಹೃದಯ ಸಂಬಧಿಸಿದ ಖಾಯಿಲೆಗಳು ಕಾಣಿಸಿಕೊಳ್ಳುತ್ತಿದೆ. ಎಲ್ಲಾ ಖಾಯಿಲೆಗಳಿಗೆ ಆರೋಗ್ಯ ತಪಾಸಣೆ ಮಾಡಲು ಹೆಚ್ಚಿನ ವೈದ್ಯರು ಬಂದಿರುವುದು ನಮಗೆ ಸಂತೋಷ ತಂದಿದೆ. ಈ ಶಿಬಿರಕ್ಕೆ ಬಂದವರಿಗೆ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಅನೇಕ ಮಾಹಿತಿಯನ್ನು ಕೊಡಲಾಗಿದೆ ಎಂದರು.
ಉಚಿತ ಆರೋಗ್ಯ ಶಿಬಿರದಲ್ಲಿ ಹಿರಿಯ ತಜ್ಞ ವೈದ್ಯರಾದ ಡಾ|| ಹೆಚ್.ಎನ್. ರಾಜೇಶ್, ನೇತ್ರ ತಜ್ಞರಾದ ಡಾ|| ಕೆ. ಸಂದೀಪ್, ತುರ್ತು ಚಿಕಿತ್ಸಾ ತಜ್ಞರಾದ ಡಾ|| ಬಿ.ಎಂ. ಸುಹಾಸ್, ಸರ್ಜನ್ ಡಾ|| ಸಚೀನ್, ಸ್ತ್ರೀರೋಗ ತಜ್ಷರಾದ ಡಾ|| ಪೂಜಾ, ಶಸ್ತ್ರ ಚಿಕಿತ್ಸ ತಜ್ಞರಾದ ಡಾ|| ಆನಂದ್, ಆಹಾರ ತಜ್ಞರಾದ ಡಾ|| ಧನುಶ್ರೀ, ಶಿವರಾಜು, ಲೋಕೆಶ್, ಮಾರುತಿ, ರಾಘವೇಂದ್ರ, ಸವಿತಾ, ಗೀತಾ ಹಾಗೂ ಶಾಂತಿಗ್ರಾಮದ ಮಂಜೇಶ್, ದೇವಾಂಗ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ್, ಶ್ರೀರಾಮ ಮಂದಿರದ ಅಧ್ಯಕ್ಷ ಜ್ಞಾನೇಶ್ ಇತರರು ಉಪಸ್ಥಿತರಿದ್ರು.