ಮಂಡ್ಯ : ಕೊರೊನಾ ಹಿನ್ನೆಲೆ ಇಡೀ ದೇಶ ಲಾಕ್ ಡೌನ್ ಆಗಿದೆ.. ಜನ ಅಗತ್ಯ ವಸ್ತುಗಳನ್ನ ಬಿಟ್ಟರೆ ಬೇರೆ ವಸ್ತುಗಳ ಖರೀದಿ ಸಾಧ್ಯವಾಗ್ತಿಲ್ಲ.. ಇತ್ತ ಬೆಂಗಳೂರಿನಲ್ಲಾದ್ರೆ ಒಂದೇ ಏರಿಯಾದಲ್ಲಿ ಎಲ್ಲಾ ವಸ್ತುಗಳು ದೊರಕುತ್ವೆ. ಆದ್ರೆ ಗ್ರಾಮೀಣ ಪ್ರದೇಶದಲ್ಲಿ ಮೆಡಿಸನ್ ವಿಚಾರಕ್ಕೆ ಬಂದ್ರೆ ಜಿಲ್ಲಾ ಕೇಂದ್ರ ಅಥವಾ ತಾಲೂಕು ಕೇಂದ್ರಗಳಿಗೆ ಜನ ಹೋಗಬೇಕು. ಆದ್ರೆ ಬಸ್ ವ್ಯವಸ್ಥೆ ಇಲ್ಲ. ಸ್ಕೂಟರ್ ನಲ್ಲಿ ಪೊಲೀಸರ ಕಾಟ. ಹೀಗಾಗಿ ಮಂಡ್ಯ ಜಿಲ್ಲೆಯ ಮದ್ದೂರು ಭಾಗದಲ್ಲಿ ಬಹುತೇಕ ಗ್ರಾಮಗಳಿಗೆ ಆರ್ ಎಸ್ ಎಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಅಗತ್ಯ ಔಷಧಿಯನ್ನ ಉಚಿತವಾಗಿ ತಲುಪಿಸುವ ಕೆಲಸ ಮಾಡ್ತಿದ್ದಾರೆ. ಔಷಧಿಯ ವೆಚ್ಚವನ್ನ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ವೈ ವಿಜಯೇಂದ್ರ ಭರಿಸುತ್ತಿದ್ದು ಕಾರ್ಯಕರ್ತರು ಔಷಧಿ ತಲುಪಿಸುವ ಕೆಲಸ ಮಾಡ್ತಿದ್ದಾರೆ..
ಚುನಾವಣೆ ಸಂದರ್ಭದಲ್ಲಿ ಮಾತ್ರ ಅಲ್ಲ ಜನರು ಕಷ್ಟದಲ್ಲಿದ್ದಾಗ ನೆರವಿಗೆ ಬರುವುದೇ ನಿಜವಾದ ಜನಸೇವೆ. ಹೀಗಾಗಿ ನಾವು ಲಾಕ್ ಡೌನ್ ಮುಗಿಯುವ ವರೆಗೆ ಬಡವರು, ರೈತರಿಗೆ ಉಚಿತ ಔಷಧಿ ವಿತರಿಸುತ್ತೇವೆ ಅಂತಾರೆ ಬಿಜೆಪಿ ಮುಖಂಡ ಶಶಿಧರ್ ಗೌಡಅಜ್ಜಹಳ್ಳಿ..
ಇನ್ನು ಮದ್ದೂರು ತಾಲೂಕು ವ್ಯಾಪ್ತಿಯ ಗ್ರಾಮಸ್ಥರು ಔಷಧಿಯ ಅಗತ್ಯವಿದ್ದರೆ ಇವರನ್ನ ಸಂಪರ್ಕಿಸಿ. ಉಚಿತವಾಗಿ ನಿಮ್ಮಮನೆ ಬಾಗಿಲಿಗೆ ಔಷಧಿ ತಲುಪಿಸುತ್ತಾರೆ.
ಮದ್ದೂರು ತಾಲ್ಲೂಕು ಔಷದೋಪಚಾರ ಉಸ್ತುವಾರಿ ಶಶಿಧರ್ ಗೌಡ ಅಜ್ಜಹಳ್ಳಿ
ಶಶಿಧರ್ ಗೌಡ ಅಜ್ಜಹಳ್ಳಿ -9916448878
ಎಮ್ ಸಿ ಸಿದ್ದು-9739253656
ಜಿ ಸಿ ಮಹೇಂದ್ರ-9686484929
ಅರವಿಂದ್-9620373174
ಆತ್ಮತೈಲೂರು-9538055200
ಸಂತೋಷ್ ಗೌಡ ಮಣಿಗೆರೆ-9964903525
ರಾಜೇಶ್ ಬೆಸಗರಹಳ್ಳಿ- 8217498811
ಆಲಂಶೆಟ್ಟಹಳ್ಳಿ ಸುದೀಪ್-9964551399
ಅಭಿ ಪಾಂಡು-8095128073
ದರ್ಶನ ಗೆಜ್ಜಲಗೆರೆ-8892900337
ಅಭಿ ವಳೆಗೆರೆಹಳ್ಳಿ-7259796468
ಅವಿನಾಶ್ ಅಡಗನಹಳ್ಳಿ-8317390886
ಪುನಿ ಮಾಲಗಾರನಹಳ್ಳಿ-8095956467
ಸುರೇಶ್ ಕದಲೂರು-9980680205