www.karnatakatv.net: ಅರವಿಂದ್ ಕೇಜ್ರಿವಾಲ್ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಒಳಒಪ್ಪಂದವಿದ್ದು, ಗೋವಾ ಚುನಾವಣೆಯ ಸಲುವಾಗಿ ಭೇಟಿ ನೀಡಿದ್ದ ಕೇಜ್ರಿವಾಲ್. ಯಾವುದೇ ಪಕ್ಷಗಳು ಅಧಿಕಾರಕ್ಕೆ ಬಂದರೂ ಮತ್ತೊಂದು ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂಬ ನಿರ್ಣಯ ತೆಗೆದುಕೊಂಡಿವೆ ಎಂದು ಹೇಳಿದರು.
ಗೋವಾದಲ್ಲಿ ಮಾತನಾಡಿದ ಅರವಿಂದ್, ತಾವು ಗೋವಾ ಚುನಾವಣೆಯಲ್ಲಿ ಹೆದ್ದು, ಸರ್ಕಾರ ರಚನೆ ಮಾಡಿದರೆ ಹಿಂದುಗಳಿಗೆ ಅಯೋಧ್ಯೆಗೆ, ಕ್ರಿರ್ಶಚಿಯನ್ ರನ್ನ ವೆಲಕಣ್ಣಿ ಚರ್ಚ್ ಗೆ ಮತ್ತು ಮುಂಸ್ಲಿo ರನ್ನು ಅಜ್ಮೇರ್ ಶರೀಫ್ ಗೆ ಉಚಿತ ಯಾತ್ರೆ ನಡೆಸುತ್ತೇವೆ. ಅಲ್ಲದೆ ಸಾಯಿಬಾಬಾ ಅನುಯಾಯಿಗಳಿಗೆ ಶಿರಡಿ ದೇವಸ್ಥಾನಕ್ಕೆ ಪ್ರವಾಸವನ್ನೂ ಉಚಿತವಾಗಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮುಂಚೆ ಗೋವಾಕ್ಕೆ ಆಗಮಿಸಿದ್ದ ಕೇಜ್ರಿವಾಲ್ 2022ರ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ಹೇಳಿದ್ದರು. ಹಾಗೇ, ತಾವು ಸರ್ಕಾರ ರಚನೆ ಮಾಡಿದರೆ ಇಲ್ಲಿನ ಜನರಿಗೆ ಉಚಿತ ವಿದ್ಯುತ್ ನೀಡಲಾಗುವುದು. ಪ್ರತಿಯೊಬ್ಬ ಯುವಕನಿಗೂ ಉದ್ಯೋಗ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದರು.

