www.karnatakatv.net: ಮುಂದಿನ ವರ್ಷ ನಡೆಯುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಈಗಾಗಲೇ ಭರ್ಜರಿ ತಯಾರಿ ನಡೆಸ್ತಿದೆ. ಹೇಗಾದ್ರೂ ಮಾಡಿ ಅಧಿಕಾರದ ಗದ್ದುಗೆ ಏರಬೇಕು ಅನ್ನೋ ಲೆಕ್ಕಾಚಾರದಲ್ಲಿರೋ ಕಾಂಗ್ರೆಸ್ ಈ ಬಾರಿ ಮಹಿಳೆಯರಿಗೆ ಹೆಚ್ಚು ಪ್ರಾಧಾನ್ಯತೆ ನೀಡ್ತಿದೆ. ಈ ನಡುವೆಯೇ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಉತ್ತರ ಪ್ರದೇಶದ ಯುವತಿಯರಿಗೆ ಭರ್ಜರಿ ಆಫರ್ ನೀಡಿದ್ದಾರೆ.
ಹೌದು, ಚಾನ್ಸ್ ಸಿಕ್ಕಾಗಲೆಲ್ಲಾ ಉತ್ತರಪ್ರದೇಶಕ್ಕೆ ಹೋಗೋದಕ್ಕೆ ತುದಿಗಾಲಲ್ಲಿ ನಿಂತುಕೊಳ್ಳೋ ಕಾಂಗ್ರೆಸ್ ನಾಯಕರು, ಮುಂದಿನ ಬಾರಿ ಚುನಾವಣೆಯಲ್ಲಿ ರಾಜ್ಯವನ್ನು ತಮ್ಮ ಕೈವಶ ಮಾಡಿಕೊಳ್ಳಬೇಕು ಅಂತ ಈಗಿನಿಂದಲೇ ತಯಾರಿ ನಡೆಸ್ತಿದ್ದಾರೆ. ತನ್ನ ಸಾಂಪ್ರದಾಯಿಕ ಕ್ಷೇತ್ರ ಉತ್ತರ ಪ್ರದೇಶದಲ್ಲಿ ಈ ಬಾರಿಯಾದ್ರೂ ಗೆಲುವಿನ ಪತಾಕೆ ಹಾರಿಸಬೇಕು ಅಂತ ಕಾಯ್ತಾ ಇರೋ ಕಾಂಗ್ರೆಸ್ ಸದ್ಯ ಭರ್ಜರಿ ರಣತಂತ್ರ ರೂಪಿಸ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಇದೇ ಉತ್ತರಪ್ರದೇಶದ ಅಮೇಥಿಯಿಂದ ಸ್ಪರ್ಧೆಗಿಳಿದಿದ್ದ ರಾಹುಲ್ ಗಾಂಧಿಗೆ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಸೋಲಿನ ರುಚಿ ತೋರಿದ್ರು. ಇದು ಸಹಜವಾಗಿಯೇ ಕಾಂಗ್ರೆಸ್ ಪ್ರತಿಷ್ಟೆಗೆ ಧಕ್ಕೆ ಉಂಟುಮಾಡಿತ್ತು. ಹೀಗಾಗಿ ಈ ಬಾರಿಯ ಎಲೆಕ್ಷನ್ ನಲ್ಲಿ ಗೆದ್ದು ಬೀಗಲೇಬೇಕೆನ್ನೋ ಛಲದಲ್ಲಿರೋ ಕಾಂಗ್ರೆಸ್ ಸದ್ಯ ನಾರಿ ಬಲವನ್ನು ಮುಂದಿಟ್ಟುಕೊAಡು ಸ್ಪರ್ಧೆಗಿಳಿಯೋದಕ್ಕೆ ಸಜ್ಜಾಗಿದೆ.
ಹೌದು,ಉತ್ತರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಶೇ.40ರಷ್ಟು ಟಿಕೆಟ್ ನೀಡೋದಾಗಿ ಘೋಷಣೆ ಮಾಡಿದೆ. ಈ ಮೂಲಕ ಮಹಿಳೆಯರ ಬಲದಿಂದ ಯೋಗಿ ಸರ್ಕಾರವನ್ನು ಮಣಿಸೋದಕ್ಕೆ ಮುಂದಾಗಿದೆ. ಇದರ ಬೆನ್ನಲ್ಲೇ ಸದ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ.
ಅದೇನಪ್ಪಾ ಅಂದ್ರೆ, ಮುಂದಿನ ವರ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ 12ನೇ ತರಗತಿ ಪಾಸ್ ಆದ ಹುಡುಗಿಯರಿಗೆ ಸ್ಮಾಟ್ಫೋðನ್ ಮತ್ತು ಪದವೀಧರ ಯುವತಿಯರಿಗೆ ಎಲೆಕ್ಟ್ರಿಕ್ ಸ್ಕೂಟರ್ ನೀಡುವುದಾಗಿ ಹೇಳಿದ್ದಾರೆ.
ಇನ್ನು ಪ್ರಿಯಾಂಕಾ ಗಾಂಧಿ ಹೀಗೆ ಹೇಳಿರೋದಕ್ಕೂ ಒಂದು ಕಾರಣವಿದೆ, ಅದೇನಪ್ಪಾ ಅಂದ್ರೆ, ತಾವು ಉತ್ತರಪ್ರದೇಶದಲ್ಲಿ ಹಲವು ವಿದ್ಯಾರ್ಥಿಗಳನ್ನು ಭೇಟಿಯಾಗಿದ್ದು. ಅದರಲ್ಲಿ ಅನೇಕರು ತಮಗೆ ವಿದ್ಯಾಭ್ಯಾಸಕ್ಕೆ ಮತ್ತು ನಮ್ಮ ಸುರಕ್ಷತೆ ದೃಷ್ಟಿಯಿಂದಲೂ ಸ್ಮಾಟ್ಫೋðನ್ ಬೇಕು ಅಂತ ಕೇಳಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಂಟರ್ಮೀಡಿಯಟ್ ಮುಗಿಸಿದ ಹುಡುಗಿಯರಿಗೆ ಸ್ಮಾಟ್ಫೋðನ್ ಮತ್ತು ಪದವಿ ಮುಗಿಸಿದ ಯುವತಿಯರಿಗೆ ಸ್ಕೂಟಿ ನೀಡಲಿದ್ದೇವೆ. ಇದಕ್ಕೆ ನಮ್ಮ ಪ್ರಣಾಳಿಕೆ ಸಮಿತಿ ಒಪ್ಪಿಗೆ ನೀಡಿದೆ ಅಂತ ಪ್ರಿಯಾಂಕಾ ಹೇಳಿದ್ದಾರೆ.
ನಮ್ಮ ದೇಶದಲ್ಲಿ ರಾಜಕೀಯ ದ್ವೇಷವಿದೆ. ಅದನ್ನು ಮಹಿಳೆಯರು ಮಾತ್ರ ಕೊನೆಗೊಳಿಸಬಹುದು. ಅಷ್ಟೇ ಅಲ್ಲ, ಇಲ್ಲಿ ಧರ್ಮರಾಜಕೀಯವಿದೆ. ಅದರಿಂದಲೂ ದೇಶವನ್ನು ಹೊರತರುವ ಶಕ್ತಿ ಸ್ತ್ರೀಯರಿಗೇ ಇದೆ. ರಾಜಕೀಯದಲ್ಲಿ ನನ್ನೊಂದಿಗೆ ಹೆಚ್ಚಿನ ಸ್ತ್ರೀಯರು ಹೆಗಲುಕೊಡಿ ಅಂತ ಪ್ರಿಯಾಂಕಾ ಗಾಂಧಿ ಕರೆ ನೀಡಿದ್ರು. ಇನ್ನು ಕಾಂಗ್ರೆಸ್ ನಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಇರುವ ಮಹಿಳೆಯರು ನವೆಂಬರ್ 15ರೊಳಗೆ ಅರ್ಜಿ ಸಲ್ಲಿಸಬಹುದು ಅಂತಲೂ ಪ್ರಿಯಾಂಕಾ ಹೇಳಿದ್ರು. ಇನ್ನು 1989ರಿಂದ ಈವರೆಗೂ ಉತ್ತರಪ್ರದೇಶದಲ್ಲಿ ಅಧಿಕಾರ ಹಿಡಿಯೋದಕ್ಕೆ ಸಾಧ್ಯವಾಗಿಲ್ಲ. ಹೀಗಾಗಿ ಅಧಿಕಾರಕ್ಕೆ ಬರಲು ಹವಣಿಸುತ್ತಿರುವ ಕಾಂಗ್ರೆಸ್ , ಈ ರೀತಿಯ ಭರವಸೆಗಳೊಂದಿಗೆ ಜನರನ್ನು ಸೆಳೆಯುವ ಪ್ರಯತ್ನಗಳು ನಡೆಸ್ತಿದೆ.