www.karnatakatv.net- ರಾಜ್ಯ:ಕರ್ನಾಟಕದಲ್ಲಿ ಜುಲೈ 5ರಿಂದ ಅನ್ ಲಾಕ್ 3.0 ಜಾರಿಯಾಗುವ ಸಾಧ್ಯತೆ ಇದೆ. ಕೊರೊನಾ ಪಾಸಿಟಿವ್ ರೇಟ್ ಕಡಿಮೆಯಾಗುತ್ತಿರುವ ಹಿನ್ನೆಲೆ, ಅನ್ ಲಾಕ್ 3.0 ಜಾರಿಗೆ ತರಲು ತಜ್ಞರು ಸಲಹೆ ನೀಡಿದ್ದಾರೆ. ಇದರಲ್ಲಿ ರಾಜ್ಯ ಸರ್ಕಾರ ಥಿಯೇಟರ್, ಮಾಲ್, ಪಬ್, ಕ್ಲಬ್, ಬಾರ್, ಸ್ವಿಮ್ಮಿಂಗ್ ಪೂಲ್ಗೆ ರಿಲೀಫ್ ನೀಡುವ ಸಾಧ್ಯತೆ ಹೆಚ್ಚಾಗಿದೆ. ಬೆಳಗ್ಗೆಯಿಂದ ಸಂಜೆವರೆಗೂ ಮಾಲ್ ತೆರೆಯಲು ಅನುಮತಿ ಸಿಗುವ ಸಾಧ್ಯತೆಯಿದ್ದು, ಶೇ.50ರಷ್ಟು ಗ್ರಾಹಕರಿಗೆ ಅವಕಾಶ ನೀಡಬಹುದು ಎನ್ನಲಾಗಿದೆ. ಆದ್ರೆ, 5 ವರ್ಷದೊಳಗಿನ ಮಕ್ಕಳಿಗೆ ಮಾಲ್ನೊಳಗೆ ನಿರ್ಬಂಧ ಹೇರುವ ಸಾಧ್ಯತೆಯಿದೆ.ಇನ್ನು, ಪಬ್ ಗಳಿಗೆ ಬಹುತೇಕ ರಿಲೀಫ್ ಸಿಗುವ ಸಾಧ್ಯತೆಯಿದ್ದು, ಡ್ಯಾನ್ಸ್ ಫ್ಲೋರ್ಗಳಿಗೆ ನಿರ್ಬಂಧ ಹೇರುವ ಮೂಲಕ ಪಬ್ಗೆ ಅವಕಾಶ ನೀಡಬಹುದು. ಬಾರ್ಗಳಲ್ಲಿ ಟೇಬಲ್ ಸರ್ವಿಸ್ಗೆ ಅವಕಾಶ ನೀಡಬಹುದು. ಜುಲೈ 5ರಿಂದ ಬಾರ್ನಲ್ಲಿ ಕೂತು ಕುಡಿಯಲು ಅವಕಾಶ ನೀಡಬಹುದು ಎಂದು ಹೇಳಲಾಗ್ತಿದೆ. ಮತ್ತೊಂದು ಸಂಗತಿ ಎಂದ್ರೆ, ಥಿಯೇಟರ್ ಗಳಿಗೆ ರಿಲೀಫ್ ಸಿಗುವುದು ಅನುಮಾನವಾಗಿದೆ.




