www.karnatakatv.net: ರಾಷ್ಟ್ರೀಯ- ನವದೆಹಲಿ- ಜುಲೈ 1ರಿಂದ ದೇಶಾದ್ಯಂತ ಅಮೂಲ್ ಹಾಲಿನ ದರ ಹೆಚ್ಚಳವಾಗಿದೆ. ಲೀಟರ್‍ಗೆ 2 ರೂಪಾಯಿ ಏರಿಕೆಯಾಗಲಿದೆ. ಗುಜರಾತ್ ಮತ್ತು ಪಂಜಾಬ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಅಮೂಲ್ ಹಾಲಿನ ಹೊಸ ಬೆಲೆ ಹೆಚ್ಚಳವಾಗಲಿದೆ. ಗುಜರಾತ್ ಕೋ ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್(GCMMF) ಈ ಬಗ್ಗೆ ಮಾಹಿತಿ ನೀಡಿದ್ದು, ತಾಜಾ, ಗೋಲ್ಡ್, ಶಕ್ತಿ ಟೀ ಸ್ಪೆಷಲ್ ಸೇರಿದಂತೆ ಅಮೂಲ್ ಹಾಲಿನ ಎಲ್ಲಾ ಪ್ರಾಡೆಕ್ಟ್ ಗಳ ಬೆಲೆ ಏರಿಕೆಯಾಗಲಿದೆ. ಒಂದು ವರ್ಷ 7 ತಿಂಗಳ ನಂತರ ಅಮಬಲ್ ಹಾಲಿನ ದರವನ್ನು ಹೆಚ್ಚಳ ಮಾಡಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದ್ದು, ಉತ್ಪಾದನಾ ವೆಚ್ಚದಲ್ಲಿನ ಹೆಚ್ಚಳದಿಂದ ಬೆಲೆ ಏರಿಕೆ ಅನಿವಾರ್ಯ ಎಂದಿದೆ. ಕೊರೊನಾದಿಂದಾಗಿ ಹಾಲು ವ್ಯಾಪಾರಸ್ಥರ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.




