ಮಾಜಿ ಮುಖ್ಯಮಂತ್ರಿ, ಹಾಲಿ ಕೆಂದ್ರ ಸಚಿವ ಕುಮಾರಸ್ವಾಮಿ ಅವರು ಯಾವ ಪಾರ್ಟಿಯಿಂದ ಅವರು ರಾಜ್ಯ ರಾಜಕಾರಣಕ್ಕೆ ಬರುತ್ತಾರೆ? ಅವರ ಪ್ಲಾಟ್ ನಲ್ಲಿ ಈಗಾಗಲೇ BJP ಬಹುಮಹಡಿ ಎತ್ತರದ ಕಟ್ಟಡ ಕಟ್ಟಿಕೊಂಡಿದ್ದಾರೆ. JDS ಇನ್ನೂ ಉಳಿದಿದೆಯಾ ಎಂದು ಗ್ರಾಮೀಣಾಭಿದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಛೇಡಿಸಿ ವ್ಯಂಗವಾಡಿದರು.
ಅವರ ಸಂಬಂಧಿಕರೇ ಬಿಜೆಪಿ ಟಿಕೆಟ್ ನಲ್ಲಿ ನಿಲ್ಲುತ್ತಾರೆಂದರೆ ಆ ಪಾರ್ಟಿ ಏಷ್ಟು ಪ್ರಬಲವಾಗಿದೆ ಹೇಳಿ? ಈ ಮೊದಲು ಸಹ ಎಚ್.ಡಿಕೆ ರಾಜ್ಯ ರಾಜಕಾರಣದಲ್ಲಿದ್ದರು ಏನಾಯ್ತು? ಬಿಜೆಪಿ, ಜೆಡಿಎಸ್ ಪಕ್ಷ ಎಂದಾದರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿದ್ದಾರಾ? ಬಿಜೆಪಿಯೇ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲವೆಂದ ಮೇಲೆ ಜೆಡಿಎಸ್ ಬರುತ್ತಾ ಎಂದು ಪ್ರಶ್ನಿಸಿದರು.
ಬಳ್ಳಾರಿ ಪಾದಯಾತ್ರೆ ವಿಚಾರದಲ್ಲಿ ಅವರು ಹೇಳಿದ್ದಾರೆ. ಪಾದಯಾತ್ರೆ ಮಾಡಿದರೆ ಜನರು ಒಪ್ಪಬೇಕು. ನಾವು ಹಿಂದೆ ಮೇಕೆದಾಟು, ಕೃಷ್ಣಾ, UKP, ಕಾವೇರಿ ಹಾಗೂ ರಿಪಬ್ಲಿಕ್ ಬಳ್ಳಾರಿ ಪಾದಯಾತ್ರೆ ಮಾಡಿದ್ದಾಗ ಜನ ಬೆಂಬಲ ನೀಡಿದ್ದಾರೆ. ಆದರೆ BJP ಪಾದಯಾತ್ರೆ ಇಶ್ಯೂ ಲೇಸ್ ಮಟ್ಟದದ್ದೇ. ಅವರು ಪಾದಯಾತ್ರೆ ಮಾಡಲಿ, ಆದರೆ ರಾಜಕೀಯವಾಗಿ ಜನರ ಬೆಂಬಲ ಕಡಿಮೆ. ಈ ಪಾದಯಾತ್ರೆಗೆ ನಾಲ್ಕು ಜನ ಮಾತ್ರ ಬರುತ್ತಾರೆ ಅಷ್ಟೇ.
ಸ್ಥಳೀಯ ಚುನಾವಣೆಯಲ್ಲಿ BJP–JDS ಒಪ್ಪಂದ ಕುರಿತು ಅವರು ಟೀಕಿಸಿದರು, ಕೈ–ಕಾಲು ಬಿದ್ದು ಒಪ್ಪಂದ ಮಾಡಿಕೊಳ್ಳುವ ರೀತಿಯಾಗಿದೆ. BJP–JDS ನಡುವೆ ಗೊಂದಲವಿದೆ. BJP, JDS ಪಾರ್ಟಿಯನ್ನು ಅಕ್ರಮವಾಗಿ ಸಕ್ರಮ ಮಾಡಿಕೊಂಡಿದ್ದಾರೆ. ಇನ್ನೂ JDS ತಾವು ಉಳಿದಿದ್ದೇವೆ ಎಂದು ತೋರಿಸಿಕೊಳ್ಳಲು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ವರದಿ : ಲಾವಣ್ಯ ಅನಿಗೋಳ




