Saturday, October 19, 2024

Latest Posts

ಇಂದು ಮತ್ತೆ ಇಂಧನ ಬೆಲೆ ಏರಿಕೆ..!

- Advertisement -

www.karnatakatv.net: ದಿನದಿಂದ ದಿನಕ್ಕೆ ಇಂಧನ ಬೆಲೆ ಏರಿಕೆಯಾಗುತ್ತಲೇ ಇದ್ದು ಜನರಿಗೆ ಗಾಯದ ಮೇಲೆ ಬರೆ ಏಳೆದಂತಾಗಿದೆ, ಇಂದು ಮತ್ತೆ ಇಂಧನ ಬೆಲೆ ಏರಿಕೆ ಕಂಡಿದೆ.

2 ದಿನಗಳಿಂದ ಇಂಧನ ದರ ತನ್ನ ಸ್ಥಿರತೆ ಕಾಯ್ದುಕೊಂಡಿತ್ತು, ಪೈಸೆಗಳ ಲೆಕ್ಕದಲ್ಲಿ ದರ ಏರಿಕೆಯಾಗುತ್ತಲೇ ಇದ್ದು, ಇಂದು ಲೀಟರ್ ಪೆಟ್ರೋಲ್ ದರದಲ್ಲಿ 35 ಪೈಸೆ ಹೆಚ್ಚಾಗಿದೆ. ಹಾಗೇ ಡೀಸೆಲ್ ಕೂಡಾ 35 ಪೈಸೆ ಹೆಚ್ಚಾಗಿದೆ. ದಿನೇ ದಿನೇ ಏರುತ್ತಿರುವ ಇಂಧನ ಬೆಲೆಗೆ ಜನರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ಮೇಲೆ ಶಾಪವನ್ನು ಹಾಕುತಿದ್ದಾರೆ. ದೇಶದ ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಇಂಧನ ಬೆಲೆ ಏರಿಕೆ ಮಾಡಿದೆ. ಪೆಟ್ರೋಲ್ ದರ ಅಷ್ಟೇ ಅಲ್ಲದೇ ಡೀಸೆಲ್ ದರವು ಕೂಡಾ 100 ರ ಗಡಿ ದಾಟಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 106.19 ರೂಪಾಯಿಗೆ ಏರಿಕೆ ಆಗಿದೆ. ಹಾಗೇ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 112.11 ರೂಪಾಯಿ ಇದೆ. ತಮಿಳುನಾಡಿನ ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 103.31 ರೂಪಾಯಿ, ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 106.78 ರೂಪಾಯಿ ನಿಗದಿಯಾಗಿದೆ. ಇನ್ನು ಪ್ರಮುಖ ನಗರಗಳಲ್ಲಿನ ಡೀಸೆಲ್ ದರ ನೋಡುವುದಾದರೆ, ದೆಹಲಿಯಲ್ಲಿ ಲೀಟರ್ ಡೀಸೆಲ್ ದರ 94.92 ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಡೀಸೆಲ್ ದರ 102.89 ರೂಪಾಯಿ ಇದೆ. ಇನ್ನು, ಚೆನ್ನೈನಲ್ಲಿ ಲೀಟರ್ ಡೀಸೆಲ್ ದರ 99.26 ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ ಲೀಟರ್ ಡೀಸೆಲ್ ದರ 98.03 ರೂಪಾಯಿ ಇದೆ.

- Advertisement -

Latest Posts

Don't Miss