ಬಿಜೆಪಿ ಪಕ್ಷದಿಂದ ಉಚ್ಚಾಟನೆ ಬಳಿಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಖತ್ ಆಕ್ಟೀವ್ ಆಗಿದ್ದಾರೆ. ಇಷ್ಟು ದಿನ ಉತ್ತರ ಕರ್ನಾಟಕಕ್ಕೆ ಸೀಮಿತವಾಗಿದ್ದ ಪ್ರವಾಸ, ಮದ್ದೂರು ಘಟನೆ ಬಳಿಕ ದಕ್ಷಿಣ ಕರ್ನಾಟಕಕ್ಕೂ ವಿಸ್ತರಿಸಿದೆ. ಹಿಂದೂ ಫೈರ್ ಬ್ರ್ಯಾಂಡ್ ಎಂದೇ ಹೆಸರುವಾಸಿಯಾಗಿರುವ ಯತ್ನಾಳ್, ಹಿಂದೂ ಸಂಘಟನೆಗಳು ಕರೆದಲ್ಲೆಲ್ಲಾ ಹಾಜರ್ ಆಗ್ತಿದ್ದಾರೆ.
ಆಗಸ್ಟ್ 27ರ ಬಳಿಕ ಕರ್ನಾಟಕ ರಾಜ್ಯದ ಹಲವೆಡೆ, ಒಟ್ಟು 15 ಗಣೇಶೋತ್ಸವಗಳಲ್ಲಿ ಯತ್ನಾಳ್ ಭಾಗಿಯಾಗಿದ್ದಾರೆ. ಬಿಎಸ್‌ವೈ ಕುಟುಂಬದ ವಿರುದ್ಧ ಬಂಡೆದಿದ್ದಕ್ಕೆ, ಹೈಕಮಾಂಡ್ ಪಕ್ಷದಿಂದ ಹೊರ ಹಾಕಿದ್ರೂ, ಎದೆಗುಂದದೆ ತಮ್ಮ ಖ್ಯಾತಿಯನ್ನ ಕಾಪಾಡಿಕೊಂಡಿದ್ದಾರೆ. ಇಷ್ಟೇ ಅಲ್ಲ.. ತಮ್ಮ ಖ್ಯಾತಿ, ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ.
ಹಿಂದುತ್ವ ಹೆಸರು ತೆಗೆದಾಗ ಬರುವ ಮೊದಲ ಹೆಸರು ಯತ್ನಾಳ್ ಎನ್ನುವಂತಾಗಿದೆ. ಮದ್ದೂರು ಕಲ್ಲು ತೂರಾಟದ ಬಳಿಕ ಯತ್ನಾಳ್‌ಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಬಿಜೆಪಿಗರು ಒಂದು ತೂಕವಾದ್ರೆ, ಯತ್ನಾಳ್ ಮತ್ತೊಂದು ತೂಕ. ಇದಕ್ಕೆ ಸೆಪ್ಟೆಂಬರ್ 11ರಂದು ಮದ್ದೂರಿನಲ್ಲಿ ಯತ್ನಾಳ್‌ಗಾಗಿ ಸೇರಿದ್ದ ಜನಸ್ತೋಮವೇ ಸಾಕ್ಷಿ.
ತಮಗೆ ಡಿಮ್ಯಾಂಡ್ ಹೆಚ್ಚಿಸಿಕೊಳ್ಳುವ ಮೂಲಕ, ಬಿಜೆಪಿ ಪಕ್ಷಕ್ಕೆ ಯತ್ನಾಳ್ ಅನಿವಾರ್ಯ ಅನ್ನೋ ಭಾವನೆ ಕ್ರಿಯೇಟ್ ಮಾಡುವಲ್ಲಿ, ಒಂದು ಮಟ್ಟಿಗೆ ಸಕ್ಸಸ್ ಆಗಿದ್ದಾರೆ ಎನ್ನಬಹುದು. ತಮ್ಮ ಕೆಲವು ಬೇಡಿಕೆ ಈಡೇರಿಸಿ, ತಮ್ಮನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳದಿದ್ರೆ, ಹೊಸ ಪಕ್ಷ ಕಟ್ಟುವುದಾಗಿ ವಾರ್ನ್ ಮಾಡಿದ್ರು. ಇದಕ್ಕೆ ಮೌಖಿಕವಾಗಿ ಬುನಾದಿಯನ್ನೂ ಹಾಕಿದ್ದಾರೆ. ಮದ್ದೂರಿನಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರ ಎದುರೇ ಕರ್ನಾಟಕ ಹಿಂದೂ ಪಾರ್ಟಿ ಮತ್ತು ಜೆಸಿಬಿ ಚಿಹ್ನೆ ಘೋಷಣೆ ಮಾಡಿದ್ದಾರೆ.
ಇದೆಲ್ಲವನ್ನು ನೋಡ್ತಿದ್ರೆ, ಯತ್ನಾಳ್ ಭವಿಷ್ಯ ನುಡಿದಂತೆ, 2028ಕ್ಕೆ ಸಿಎಂ ಅಗ್ತಾರೆ ಅನ್ನುವ ಕುತೂಹಲ ಶುರುವಾಗಿದೆ. ಕಳೆದ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ಎದುರು ನಿಂತುಕೊಂಡು, ಉಚ್ಚಾಟನೆಯಾದವರೆಲ್ಲಾ ಸಿಎಂ ಆಗ್ತಾರೆ. ನಾನು ಉಚ್ಚಾಟನೆ ಆಗಿದ್ದೀನಿ. 2028ಕ್ಕೆ ಸಿಎಂ ಆಗ್ತೀನಿ ಅಂತಾ ಗುಟುರು ಹಾಕಿದ್ರು. ಸದ್ಯ, ಯತ್ನಾಳ್ ಪ್ರಖ್ಯಾತಿಯ ವೇಗ ನೋಡಿದ್ರೆ, ನಿಜ ಆಗಬಹುದು ಅನ್ನಿಸುತ್ತಿದೆ.