ಒಂದು ರೊಟ್ಟಿ , ಒಂದು ರೂಪಾಯಿ ನಾಣ್ಯ ಪಡೆದುಕೊಳ್ಳುತ್ತಿರುವ ಮೆಣಸಿನಕಾಯಿ ಅನಿಲ್

political news

ಪ್ರತಿ ಕ್ಷೇತ್ರದಲ್ಲಿ ಹಲವಾರು ರೀತಿಯ ತಂತ್ರಗಾರಿಕೆ ಮೂಲಕ ಚುನಾವಣೆಯಲ್ಲಿ ಅಭ್ಯರ್ಥಿಗಳು ಗೆಲ್ಲಲು ಹೊರಟಿದ್ದಾರೆ. ಮಹಿಳೆಯರಿಗೆ ಸೀರೆ, ಯುವಕರಿಗೆ ದ್ವಿಚಕ್ರ ವಾಹನ. ದೇವಸ್ಥಾನಗಳ ಬೇಟಿ ಮಾಡುವುದು ಹೀಗೆ ಹಲವಾರು ರೀತಿಯಲ್ಲಿ ಸೆಣಸಾಡುತಿದ್ದಾರೆ. ಆದರೆ ಗದಗ ವಿಧಾನಸಭಾ ಕ್ಷೇತ್ರದ  ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಅನಿಲ್ ಕುಮಾರ್ ಮೆಣಸಿನಕಾಯಿಯವರು ವಿಭೀನ್ನವಾಗಿ ಪ್ರಚಾರವನ್ನು ಮಾಡುತಿದ್ದಾರೆ.

ಎಲ್ಲಾ ಅಭ್ಯರ್ಥಿಗಳು ಎಲ್ಲವನ್ನು ಹಂಚುವ ಮೂಲಕ ಜನರ ಮನವೊಲಿಸಲು ಮುಂದಾದರೆ. ಇವರು ಜನರಿಂದ ತೆಗೆದುಕೊಳ್ಳುತಿದ್ದಾರೆ. ಅದು ಹೇಗೆ ಅಂತೀರಾ ಇಲ್ಲಿದೆ ನೋಡಿ.

ಗಡಗ ಟಿಕೆಟ್ ಆಕಾಂಕ್ಷಿ ಅನಿಲ್ ಮೆಣಸಿನಕಾಯಿ ಹಳ್ಳಿಗಳಲ್ಲಿರುವ ಪ್ರತಿಯೊಂದು ಮನೆಗಳಿಗೆ ಬೇಟಿ ನೀಡಿ ಗ್ರಾಮದಲ್ಲಿರುವ ಮಹಿಳೆಯರಿಂದ ಒಂದು ರೊಟ್ಟಿ ಮತ್ತು ಒಂದು ರೂಪಾಯಿ ಹಣ ಪಡೆದುಕೊಳ್ಳುವ ಮೂಲಕ ಪ್ರಚಾರ ಮಾಡುತಿದ್ದಾರೆ. ಈ ರೀತಿ ಏಕೆ ಮಾಡುತಿದ್ದೀರಿ ಎಂದು ಕೇಳಿದರೆ ಒಂದು ರೊಟ್ಟಿ ಪಡೆದುಕೊಳ್ಳುವ ಮೂಲಕ ಜನರಿಂದ ಆಶಿರ್ವಾದ ಪಡೆದುಕೊಳ್​ಳುತಿದ್ದೇನೆ . ಜನರಿಂದ ನಾವು ನಾವು ನಅಯಕರಲ್ಲ ನಾವು ಪ್ರಜೆಗಳ ಸೇವಕರು ಹಾಗಾಗಿ ಈ ರೀತಿ ಜನರಿಂದ ಆಶಿರ್ವಾದ ಪಡೆದುಕೊಳ್ಳುತಿದ್ದೇನೆ. ಅವರು ನೀಡಿರುವ ಹಣದಿಂದಲೆ ನಾನು ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.

ಗದಗ ಜಿಲ್ಲೆಯಿಂದ 14 ಕಿಲೋ ಮೀಟರ್ ದೂರದಲ್ಲಿರುವ ಸುರಟೂರು ಗ್ರಾಮದಿಂದ ಪ್ರಚಾರಕ್ಕೆ ಚಾಲನೆ ನೀಡಿದರು.

ಮುಖ್ಯಮಂತ್ರಿಗಳನ್ನು ಬಹಿರಂಗ ಸಭೆಗೆ ಆಹ್ವಾನಿಸಿದ ಡಿಕೆಶಿ

ಕಾಲ್ಪನಿಕ ಕೈಲಾಸಕ್ಕೆ ರಾಷ್ಟ್ರವೆಂದು ಘೋಷಿಸಿ ಮೂಲ ಸೌಕರ್ಯ ಒದಗಿಸಲು ಮನವಿ-ಸ್ವಾಮಿ ಸಿತ್ಯಾನಂದ

ಕ್ಷುಲಕ ಕಾರಣಕ್ಕೆ ಹೆಂಡತಿಯ ಎರಡು ಕೈಗಳನ್ನು ಕತ್ತರಿಸಿದ ಗಂಡ

 

About The Author