Gadaga News: ಗದಗ: ಮನೆಯಲ್ಲಿ ಸೇರಿಕೊಂಡಿದ್ದ ನಾಗರಹಾವುಗಳಿಂದ ಬೆಕ್ಕು ಮಾಲೀಕರನ್ನು ಬಚಾವ್ ಮಾಡಿದೆ. ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ನಾಗರ ಹಾವು ಲಕ್ಷ್ಮಣ ಚಲವಾದಿ ಮನೆಯಲ್ಲಿ ಅಡುಗೆ ಮನೆ ಸೇರಿಕೊಂಡಿತ್ತು. ಅಡುಗೆ ಮನೆ ಸೇರಿದ ನಾಗರಹಾವನ್ನು ಬೆಕ್ಕುಗಳು ಗಮನಿಸಿದ್ದು, ಮನೆ ಮಾಲೀಕರು ಬರುತ್ತಿದ್ದಂತೆ ಅಡುಗೆ ಕೋಣೆಯ ಬಳಿ ನಿಂತಿದ್ದ ಬೆಕ್ಕುಗಳು ಕೂಗಾಡಿವೆ.
ಬೆಕ್ಕುಗಳ ವರ್ತನೆಯಿಂದ ಅಡುಗೆ ಮನೆ ಗಮನಿಸಿದಾಗ ಹಾವು ಕಂಡುಬಂದಿದೆ. ನಂತರ, ಉರಗ ರಕ್ಷಕ ಬಿ ಆರ್ ಸುರೇಬಾನ ಅವರನ್ನು ಕುಟುಂಬಸ್ಥರು ಕರೆಸಿ ಬಳಿಕ ಉರಗ ರಕ್ಷಕ ಹಾವನ್ನು ರಕ್ಷಿಸಿದ್ದು ಅದನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈ ಹಿನ್ನೆಲೆ ಬೆಕ್ಕುಗಳು ನಮ್ಮ ಜೀವ ಉಳಿಸಿದವು ಎಂದು ಕುಟುಂಬಸ್ಥರು ಈ ಜೋಡಿ ಬೆಕ್ಕುಗಳ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ್ದಾರೆ.
ದೈವಕೋಲ ಮನೋರಂಜನಾ ಕಾರ್ಯಕ್ರಮವಾಯಿತೇ..?! ಬಿಜೆಪಿ ಶಾಸಕನ ಆಕ್ರೋಶವೇಕೆ..?!
ಪುಂಡ ಯುವಕರ ಗುಂಪೊಂದು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ