Wednesday, May 29, 2024

Latest Posts

ಗಾಲಿ ಜನಾರ್ಧನ ರೆಡ್ಡಿ ಮರಳಿ ಬಿಜೆಪಿಗೆ ಬಂದಿದ್ದು, ಬಾಹುಬಲಿ ರೀತಿಯಲ್ಲಿ ದೊಡ್ಡ ಶಕ್ತಿ ಬಂದಿದೆ: ಶ್ರೀರಾಮುಲು

- Advertisement -

Political News: ಇಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ, ಗಾಲಿ ಜನಾರ್ಧನ ರೆಡ್ಡಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿ,ವೈ. ವಿಜಯೇಂದ್ರ, ಸಿ.ಟಿ.ರವಿ, ಶ್ರೀರಾಮುಲು ಸೇರಿ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಶ್ರೀರಾಮುಲು, ಜನಾರ್ಧನ ರೆಡ್ಡಿ ಮರಳಿ ವಾಪಸ್ ಬಂದಿದ್ದಾರೆ. ಅವರಿಗೆ ಬಿಜೆಪಿ‌ ತವರು ಮನೆ ಇದ್ದಂತೆ. ಬಾಹುಬಲಿ ರೀತಿಯಲ್ಲಿ ದೊಡ್ಡ ಶಕ್ತಿ ಬಂದಿದೆ. ಹೈದ್ರಾಬಾದ್ ಕರ್ನಾಟಕದಲ್ಲಿ ಶಕ್ತಿ ಬಂದಿದೆ. ಅಗ್ನಿ ಪರೀಕ್ಷೆಯಲ್ಲಿ ಗೆದ್ದು ವಾಪಸ್ ಬಂದಿದ್ದಾರೆ. ಅವರು ಪಕ್ಷ ಕಟ್ಟಿದ್ದಕ್ಕೆ ನಮಗೆ ಬೇಸರ ಇತ್ತು. ಅವರು ಪಕ್ಷವನ್ನ ಕಟ್ಟಿದ್ದಾರೆ. ಜನರ ಪ್ರೀತಿ‌ಗಳಿಸಿ ತವರಿಗೆ ವಾಪಸ್ ಬಂದಿದ್ದಾರೆ ಎಂದು ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ೨೮ ಗೆಲ್ತೇವೆ. ಗೆಲ್ಲಬೇಕಾದರೆ ಎಲ್ಲ ಕಡೆ ಶಕ್ತಿ ತುಂಬಬೇಕು. ಕಾರ್ಯಕರ್ತರಿಗೂ ಸಂತೋಷ ವಾಗಿದೆ. ನಾವೆಲ್ಲ ಸೇರಿ ಪಕ್ಷವನ್ನ ಬಲಗೊಳಿಸುತ್ತೇವೆ. ಮೂರನೇ ಬಾರಿ ಮೋದಿಯವರು ಅಧಿಕಾರಕ್ಕೆ ಬರಬೇಕು. ೪೦೦ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಕೊಪ್ಪಳ ಕ್ಷೇತ್ರವನ್ನೂ ನಾವು ಗೆಲ್ಲಬೇಕು. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮಗೆ ಶಕ್ತಿ ಬಂದಿದೆ ಎಂದು ಶ್ರೀರಾಮುಲು ಹೇಳಿದ್ದಾರೆ.

ಅಚ್ಛೇ ದಿನ್ ತರುವ ಭರವಸೆಯನ್ನು ಹುಸಿಗೊಳಿಸಿದ ಮೋದಿಯವರನ್ನು ಜನರು ಯಾಕೆ ನಂಬುತ್ತಾರೆ?: ಸಿಎಂ

ಬೆಳಗಾವಿಯಲ್ಲಿ ಯಾವುದೇ ವಿರುದ್ಧ ವಾತಾವರಣ ಇದ್ದರೂ ಅದನ್ನು ಶಮನ ಮಾಡುವೆ: ಜಗದೀಶ್ ಶೆಟ್ಟರ್

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ರಾಜ್ಯ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಭೆ

- Advertisement -

Latest Posts

Don't Miss