Saturday, July 27, 2024

Latest Posts

Hubli Ganesh utsava: ಗಣೇಶ ಹಬ್ಬ ಆಚರಣೆ ವೇಳೆ ಕೋಮು ವಿವಾದ ಆಗದಂತೆ ಎಚ್ಚರ ವಹಿಸಲು ಮನವಿ..!

- Advertisement -

ಹುಬ್ಬಳ್ಳಿ; ನಗರದ ‘ಈದ್ಗಾ ಮೈದಾನ’ ದಲ್ಲಿ ಗಣೇಶೋತ್ಸವ ಆಚರಿಸಲು ಮುಂದಾಗಿದ್ದು ಅಂತಹ ಧಾರ್ಮಿಕ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡಲು ಆಗ್ರಹಿಸಿ ಸೆಪ್ಟೆಂಬರ್ ೧೫ ರಂದು ಬೆಳಿಗ್ಗೆ ೧೧.೩೦ ಕ್ಕೆ ಧಾರವಾಡದ ಜಿಲ್ಲಾಧಿಕಾರಿ ಬಳಿ ಪ್ರತಿಭಟನೆ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿವಿಧ ದಲಿತ ಸಂಘ-ಸಂಸ್ಥೆಗಳ ಮಹಾಮಂಡಳಿ ಮುಖಂಡರಾದ ಗುರುನಾಥ ಉಳ್ಳಿಕಾಶಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಕೋಮು ಗಲಭೆಗೆ ಪ್ರಚೋದನೆ ನೀಡುವಂತಹ ಸರ್ಕಾರವಿತ್ತು ಹೀಗಾಗಿ ಅವಕಾಶ ನೀಡಿತ್ತು. ಈ ಬಾರಿ ಸರ್ಕಾರ ಇಂತಹ ಕೋಮುಗಲಭೆ ಉಂಟಾಗುವ ಆಚರಣೆಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.

ಈಗಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯನ್ನು ೩೦೦ ವರ್ಷಗಳಿಂದ ಮಂಜುನಾಥಸ್ವಾಮಿ ದೇವಸ್ಥಾನದ ಜಾಗವಾಗಿದೆ. ಆ ಜಾಗವನ್ನು ಪೊಲೀಸರು ಅತಿಕ್ರಮಣ ಮಾಡಿ ಅಲ್ಲಿ ಪೊಲೀಸ್ ಠಾಣೆ ನಿರ್ಮಿಸಿದ್ದಾರೆ. ಆಗ ಹಿಂದೂಗಳು ಬಂದು ಪ್ರತಿಭಟನೆ ಮಾಡಲಿಲ್ಲ. ಪಾಲಿಕೆ ಜಾಗದಲ್ಲಿ ಮಾತ್ರ (ಈದ್ಗಾ) ಮೈದಾನದಲ್ಲಿ ಗಣೇಶನ ಪ್ರತಿಷ್ಟಾಪನೆಗೆ ಮುಂದಾಗುತ್ತಿದ್ದಾರೆ. ಈ ಹಿಂದೆ ಡಾ. ಅಂಬೇಡ್ಕರ್ ಮೈದಾನದಲ್ಲಿ ಆರ್.ಎಸ್.ಎಸ್ ನವರು ಬೃಹತ್ ಪಥಸಂಚಲನ ಮಾಡಿದ್ದಾರೆ. ಯಾಕೆ ಆ ಜಾಗದಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡುವುದಿಲ್ಲ. ನೀವು ಅಲ್ಲಿ ಗಣೇಶನನ್ನು ಪ್ರತಿಷ್ಟಾಪನೆ ಮಾಡುವುದಾದರೇ ನಾನೇ ಪೆಂಡಾಲ್ ಹಾಕಿಸಿಕೊಡುವುದಾಗಿ ತಿಳಿಸಿದರು ‌

ಈದ್ಗಾ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಮುಂದಾಗುವುದು ಹಿಂದೂ ಧರ್ಮದ ಭಾಗವಲ್ಲವಾದ್ದರಿಂದ ಮತ್ತು ಕೋಮು ಸೌಹಾರ್ದತೆಗೆ ಚ್ಯುತಿವುಂಟಾಗುವ ನಿಟ್ಟಿನಲ್ಲಿ ಜನರಲ್ಲಿ ಆತಂಕದ ವಾತಾವರಣ ಛಾಯೆ ಮೂಡುವುದರಿಂದ ಗಣೇಶನ ಪ್ರತಿಷ್ಠಾಪನೆಗೆ ಅವಕಾಶ ಕಲ್ಪಿಸಬಾರದು ಎಂದು ಆಗ್ರಹಪಡಿಸಿ, ಅಂದು‌ ಜಿಲ್ಲಾಧಿಕಾರಿ, ಹು-ಧಾ ಪೊಲೀಸ್ ಆಯುಕ್ತರಿಗೆ ಮನವಿ ನೀಡಲಾಗುವುದು.

ಪತ್ರಿಕಾಗೋಷ್ಠಿಯಲ್ಲಿ ಹು-ಧಾ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರ, ಮುಖಂಡರಾದ ಶ್ಯಾಮ್ ಜಾಧವ, ರವಿ ಕದಂ, ದೇವೇಂದ್ರಪ್ಪ ಇಟಗಿ, ಪ್ರಭು ಪ್ರಭಾಕರ ಉಪಸ್ಥಿತರಿದ್ದರು.

Krishna Janmashtami: ಮುದ್ದು ಮಕ್ಕಳ ಚಂದದ ಕೃಷ್ಣ, ಆಹಾ! ನೋಡಲು ಎರಡು ಕಣ್ಣು ಸಾಲದು!

Book Publish: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ..!

Paadayatre; ಸಿದ್ದಾರೂಢ ಮಠಕ್ಕೆ” ಪಾದಯಾತ್ರೆ ನಡೆಸಿದ “ಕಿರಣ ಗೆಳೆಯರ ಬಳಗ”…

- Advertisement -

Latest Posts

Don't Miss