Friday, October 18, 2024

Latest Posts

Ganesh Installation ಈದ್ಗಾ ಗಣೇಶನ ಪ್ರತಿಷ್ಠಾಪನೆ; ಶಾಸಕರ ಸಖತ್ ಡ್ಯಾನ್ಸ್;

- Advertisement -

Hubli : ಹಲವು ವಿವಾದಗಳ ನಡುವೆಯೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿಯನ್ನು ಶಾಂತಿಯುತವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಅದ್ಧೂರಿಯಾಗಿ ನಡೆದ ಮೆರವಣಿಗೆಯಲ್ಲಿ ಶಾಸಕರು ಕುಣಿದು ಕುಪ್ಪಳಿಸಿದ್ದಾರೆ. ಇಂದಿನಿಂದ ಮೂರು ದಿನಗಳಕಾಲ ವಿಘ್ನ ನಿವಾರಕ ಗಣಪತಿ ಸಾರ್ವಜನಿಕರಿಗೆ ದರ್ಶನ ನೀಡಲಿದ್ದು ವಾಣಿಜ್ಯ ನಗರಿಯಲ್ಲಿ ಸಂಭ್ರಮ ಮನೆಮಾಡಿದೆ.

ಈ ದೃಶ್ಯಗಳು ಕಂಡುಬಂದಿದ್ದು ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ. ಅಂಜುಮನ್ ಸಂಸ್ಥೆಯ ವಿರೋಧ, ಕಾಂಗ್ರೆಸ್‌ನ ಕೆಲ ಮುಖಂಡರ ಆಕ್ಷೇಪ, ಎಸ್‌ಡಿಪಿಐ ಮತ್ತು ಎಐಎಮ್‌ಐಎಮ್ ಪ್ರತಿಭಟನೆಯಿಂದಾಗಿ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವಿಚಾರ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಹೋರಾಟದಿಂದ ವಿವಾದ ಮತ್ತಷ್ಟು ತುರುಸು ಪಡೆದಿತ್ತು. ಹೈಕೋರ್ಟ್ ಗ್ರೀನ್ ಸಿಗ್ನಲ್ ಕೊಡುತ್ತಿದ್ದಂತೆ ಮಹಾನಗರ ಪಾಲಿಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದೆ.

ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಸಿಗುತ್ತಿದ್ದಂತೆ ರಾಣಿ ಚೆನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿಯವರುವ ಗಣೇಶ ಮೂರ್ತಿಯನ್ನು ಮೂರು ಸಾವಿರ ಮಠದಿಂದ ವಾದ್ಯಘೋಷಗಳೊಂದಿಗೆ ಅದ್ಧೂರಿಯಾಗಿ ಗಣೇಶನ ಮೆರವಣಿಗೆ ಮಾಡಲಾಯಿತು. ಜೊತೆಗೆ ಭಾರತ ಮಾತೆಯ ಭಾವಚಿತ್ರದ ಭವ್ಯ ಮೆರವಣಿಗೆಯೂ ನಡೆಯಿತು. ನಾಶಿಕ್ ಡೋಲ್‌, ಡಿಜೆ ಸೌಂಡ್‌ಗೆ ಹಿಂದೂ ಸಂಘಟನೆಗಳ ಮುಖಂಡರು ಕುಣಿದು ಕುಪ್ಪಳಿಸಿದ್ರು. ಗಣೇಶ ಮೂರ್ತಿಯ ಮೆರವಣಿಗೆಯಲ್ಲಿ ಶಾಸಕ ಅರವಿಂದ ಬೆಲ್ಲದ್, ಮಹೇಶ್ ಟೆಂಗಿನಕಾಯಿ ಡ್ಯಾನ್ಸ್ ಮಾಡಿದ್ರು. ಬನಾಯೇಂಗೆ ಮಂದಿರ್ ಹಾಡಿಗೆ ಕುಣಿದು ಕುಪ್ಪಳಿಸಿದ್ರು. ಭಗವಾದ್ವಜ ಹಿಡಿದು ಸ್ಟೆಪ್ ಹಾಕುವ ಮೂಲಕ ಸಂಭ್ರಮಿಸಿದ್ರು.

ಎರಡು ಗಂಟೆಗಳ ಕಾಲ ಭರ್ಜರಿಯಾಗಿ ಮೆರವಣಿಗೆ ನಡೆಯಿತು. ರಾಣಿ ಚೆನ್ನಮ್ಮ ವೃತ್ತದ ಬಳಿಯ ಈದ್ಗಾ ಮೈದಾನಕ್ಕೆ ಗಣೇಶ ಮೂರ್ತಿಯನ್ನು ತರಲಾಯಿತು. ಶಾಸ್ತ್ರೋಕ್ತವಾಗಿ ಮಂತ್ರಘೋಷಗಳ ಮೂಲಕ ಮೂರ್ತಿ ಪ್ರತಿಷ್ಠಾಪನೆ ನಡೆಯಿತು. ಭಕ್ತರು ಜಯಘೋಷ ಕೂಗಿ ಸಂಭ್ರಮಿಸಿದ್ರು. ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಮಹೇಶ್ ಟೆಂಗಿನಕಾಯಿ, ಭೇದಭಾವ ಮಾಡದೆ ಎಲ್ಲರೂ ಗಣೇಶೋತ್ಸವದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ರು.

ಗಣೇಶೋತ್ಸವದ ನಿಮಿತ್ತ ಹುಬ್ಬಳ್ಳಿಯ ಚೆನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸಂಪೂರ್ಣ ಕೇಸರಿಮಯವಾಗಿದೆ. ಮೈದಾನದ ಸುತ್ತಮುತ್ತ ಕೇಸರಿ ಭಗವಾಧ್ವಜಗಳು ರಾರಾಜಿಸುತ್ತಿವೆ. ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ವಿಘ್ನ ನಿವಾರಕನ ದರ್ಶನಕ್ಕೆ ಭಕ್ತಸಾಗರ ಹರಿದುಬರಲಿದೆ.

ಸಂಗಮೇಶ್ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ.

Ganesh instalation: ಈದ್ಗಾ ಮೈದಾನಕ್ಕೆ ವೈಭವದೊಂದಿಗೆ ಪ್ರವೇಶ ಮೂಷಿಕ ವಾಹನ

Ganesh statue: ಹುಬ್ಬಳ್ಳಿಯ ಬೀದಿಗಳಲ್ಲಿ ಗಣೇಶ ಮೂರ್ತಿ ಭರ್ಜರಿ ಮೆರವಣಿಗೆ..!

Mobile Video: ಬಸ್ ನಲ್ಲಿ ಕಳ್ಳತನ ಮಾಡುತ್ತಿರುವದು ಮೊಬೈಲ್ ನಲ್ಲಿ ವೀಡಿಯೋ ಸೆರೆಯಾಗಿದೆ.

- Advertisement -

Latest Posts

Don't Miss