Sunday, September 8, 2024

Latest Posts

Ganesh :ಮಹಾಶಕ್ತಿ ಗಣಪ: ಹಿಂದೂ ಮುಸ್ಲೀಂ ಭಾವೈಕ್ಯತೆಯ ಸಂಕೇತ;

- Advertisement -

ನಾಯಕನಹಟ್ಟಿ: ಮಹಾಶಕ್ತಿ ಗಣಪ ಈ ಶಕ್ತಿಗಾಗಿ ಮಹಾಶಕ್ತಿ ಗಣಪ ಪ್ರತಿಷ್ಠಾಪನೆಯಾಗಿರುವುದು ನಾಯಕನಹಟ್ಟಿ ಬಿಳೇಕಲ್ ಬಡಾವಣೆಯ ಪುರಾತನ ಐತಿಹಾಸಿಕ ದೇವಸ್ಥಾನವಾದ ಚಿಂತಾಮಣಿಶ್ವರ ದೇವಾಲಯದಲ್ಲಿ ಈ ಮಹಾಶಕ್ತಿ ಗಣಪನನ್ನು ಪ್ರತಿಷ್ಠಾಪನೆ ಮಾಡಿರುವುದು ಈ ಭಾಗದ ಜನರಿಗೆ ಆಯುಷ್ಯ, ಆರೋಗ್ಯ, ಮಳೆ, ಬೆಳೆ, ಉದ್ಯೋಗ, ನೆಮ್ಮದಿ ಎಲ್ಲವನ್ನು ಕರುಣಿಸಲಿ ಎಂಬ ನಂಬಿಕೆಯಿಂದ ಕಳೆದ 31 ವರ್ಷಗಳಿಂದ ಈ ಗಣಪತಿಯನ್ನು ಮಹಾಶಕ್ತಿ ಗಣಪತಿ ಬಳಗ ಪ್ರತಿಷ್ಠಾಪನೆ ಮಾಡಿಕೊಂಡು ಬರುತ್ತಿದ್ದಾರೆ.

ಇಲ್ಲಿನ ವಿಶೇಷವೆಂದರೆ ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆ ದೇವಸ್ಥಾನವಾಗಿದೆ ಎರಡು ಧರ್ಮಿಯರು ಒಟ್ಟುಗೂಡಿ ಈ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಆರಾಧನೆ ಮಾಡುತ್ತಾರೆ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಾರೆ

ಈ ಗಣಪತಿಯ ಸದಸ್ಯರಾದ ತ್ರಿಶೂಲ್ ರವರು ಹೇಳುವ ಪ್ರಕಾರ ಬಿಳೇಕಲ್ ಬಡಾವಣೆಯ  ಚಿಂತಾಮಣೆಶ್ವರ ಪುರಾತನ ದೇವಾಲಯದಲ್ಲಿ ಪ್ರತಿಷ್ಠಾಪನೆ ಮಾಡಿದ್ದೇವೆ ಐದು ದಿನಗಳ ಕಾಲ ಈ ಗಣಪನನ್ನು ಪ್ರತಿಷ್ಠಾಪನೆ ಮಾಡಿ ನಂತರ ವಿಸರ್ಜನಾ ಕಾರ್ಯಕ್ರಮ ಮಾಡುತ್ತೇವೆ ಈ ಐದು ದಿನಗಳಲ್ಲಿ ಇಂದು ಮನೋರಂಜನ ಕಾರ್ಯಕ್ರಮ ನಾಳೆ ನೃತ್ಯ ರಸಮಂಜರಿ ನಾಲ್ಕನೇ ದಿನ ಗ್ರಾಮೀಣ ಸ್ಪರ್ಧೆಗಳನ್ನು ಮಾಡಲಾಗುತ್ತದೆ ಕೊನೆಯ ದಿನದಂದು ಸರ್ಕಾರ ಸೂಚಿಸಿದ ನಿಯಮಾವಳಿಗಳೊಂದಿಗೆ ಆಧುನಿಕ ಕಲಾತಂಡ ಕಹಳೆ ವಾದ್ಯ ವೃಂದದವರಿಂದ ಅದ್ದೂರಿಯದ ಮೆರವಣಿಗೆಯ ಮೂಲಕ ವಿಸರ್ಜನೆ ಮಾಡಲಾಗುತ್ತದೆ ಎಂದು ತಿಳಿಸಿದರು

ಈ ಮಹಾಶಕ್ತಿ ಗಣಪತಿಯ ಸದಸ್ಯರಾದ ಉಮಾಪತಿ, ಬಿ ಗೋಪಿ, ಎಸ್ ಬಂಗಾರ ನಾಯ,ಕ್ ತ್ರಿಶೂಲ್ ಕುಮಾರ್, ಲೋಕೇಶ್ ಆಚಾರ್, ಗಿರೀಶ್, ಸುರೇಶ್, ಸೋಮು, ಗೋಪಿ, ಮಧು, ಎಸ್ ತಿಪ್ಪೇಸ್ವಾಮಿ, ಚೆನ್ನಕೇಶವ, ಮಂಜುನಾಥ, ವೈ ತಿಪ್ಪೇಸ್ವಾಮಿ ಮತ್ತಿತರರು ಭಾಗಿಯಾಗಿದ್ದರು

ವರದಿ :- ಆಂಜನೇಯ .ನಾಯಕನಹಟ್ಟಿ.

Ganesh Installation ಈದ್ಗಾ ಗಣೇಶನ ಪ್ರತಿಷ್ಠಾಪನೆ; ಶಾಸಕರ ಸಖತ್ ಡ್ಯಾನ್ಸ್;

Water problem: ನೀರಿಲ್ಲದೆ ಒಣಗಿ ನಾಶವಾಗುತ್ತಿರುವ ಭತ್ತದ ಬೆಳೆ;

Ganesh statue: ಹುಬ್ಬಳ್ಳಿಯ ಬೀದಿಗಳಲ್ಲಿ ಗಣೇಶ ಮೂರ್ತಿ ಭರ್ಜರಿ ಮೆರವಣಿಗೆ..!

- Advertisement -

Latest Posts

Don't Miss