- Advertisement -
www.karnatakatv.net : ಬೆಂಗಳೂರು: ಸಾರ್ವನಿಕವಾಗಿ ಗಣೇಶೋತ್ಸವ ಆಚರಿಸಿಯೇ ತೀರುತ್ತೇವೆ. ತಾಕತ್ತಿದ್ರೆ ನಮ್ಮನ್ನ ಅರೆಸ್ಟ್ ಮಾಡಿ ಅಂತ ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಬಾರ್, ಮಾಲ್ ಗಳು ತೆರೆಯೋದಕ್ಕೆ ಮಾತ್ರ ಅವಕಾಶ ನೀಡಿರೋ ಸರ್ಕಾರ, ಗಣೇಶೋತ್ಸವ ಆಚರಣೆಗೆ ನಿಷೇಧ ಹೇರುತ್ತಿರೋದು ಯಾಕೆ ಅಂತ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಮೆರವಣಿಗೆ, ಭಜನೆ, ಸಂಗೀತ ಕಾರ್ಯಕ್ರಮ ಪ್ರಸಾದ ವಿತರಣೆ ಸೇರಿದಂತೆ ಕೋವಿಡ್ ನ ಎಲ್ಲಾ ಮಾರ್ಗಸೂಚಿಗಳನ್ನ ಅನುಸರಿಸ್ತೀವಿ. ಷರತ್ತುಬದ್ಧವಾಗಿಯೇ ನಾವು ಹಬ್ಬವನ್ನ ಆಚರಿಸುತ್ತೇವೆ ಎಂದಿರೋ ಮುತಾಲಿಕ್, ಸರ್ಕಾರ ಅನುಮತಿ ನೀಡದಿದ್ದರೂ ಕೂಡ ಗಣೇಶೋತ್ಸವ ಆಚರಿಸ್ತೇವೆ ಅಂತ ಸರ್ಕಾರಕ್ಕೆ ಸವಾಲ್ ಹಾಕಿದ್ದಾರೆ.
ಕರ್ನಾಟಕ ಟಿವಿ – ಬೆಂಗಳೂರು
- Advertisement -