Friday, November 22, 2024

Latest Posts

Aravind Bellad: ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುವವರೆಗೂ ಪಾಲಿಕೆ ಬಿಟ್ಟು ಹೋಗಲ್ಲ..!

- Advertisement -

ಹುಬ್ಬಳ್ಳಿ. ಇನ್ನೇನು ನಾಲ್ಕು ದಿನಗಳಲ್ಲಿ ಗಣೇಶ ಹಬ್ಬದ ಸಡಗರ ಬರಲಿದ್ದು ಎಲ್ಲಾ ಕಡೆಯೂ ಹಬ್ಬದ ಆಚರಣೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಆದರೆ ಅವಳಿ ನಗರಗಳಾದ ಹುಬ್ಬಳ್ಳಿ ಧಾರವಾಡ ಜಿಲ್ಲೆಗಳಲ್ಲಿ ಮಾತ್ರ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ವಿವಾದ ಸ್ಥಳ ವಿವಾದ ಶುರುವಾಗಿದೆ.

ಸಂಘ ಸಂಸ್ಥೆಗಳು ಸ್ಥಳಾವಕಾಶಕ್ಕಾಗಿ ಹಲವು ದಿನಗಳ ಹಿಂದೆಯೇ ಪಾಲಿಕೆಗೆ ಪತ್ರ ಬರೆಯಲಾಗಿತ್ತು ಆದರೆ ಇಲ್ಲಿಯವರೆಗೂ ಅಧಿಕಾರಿಗಳು ಅನುಮತಿ ನೀಡಲ್ಲ ಇದರಿಂದ ಬೇಸತ್ತ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅಧಿಕಾರಿಗಳ ವಿರುದ್ದ ಹರಿಹಾಯ್ದಿದ್ದಾರೆ. ಹು-ಧಾ ಪಾಲಿಕೆ ಆಯುಕ್ತರು ಸಿದ್ದರಾಮಯ್ಯ ಸರ್ಕಾರದ ಕೈಗೊಂಬೆ ಆಗಿದ್ದಾರೆ.

ಕಾಂಗ್ರೆಸ್ ತುಷ್ಟೀಕರಣಕ್ಕಾಗಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಡುತಿಲ್ಲ‌ ನಮಗೇ ಅನುಮತಿ ಕೊಡವವರೆಗೂ ನಾವು ಹೋಗೋದಿಲ್ಲ ಪಾಲಿಕೆ‌ ಬಿಟ್ಟು ಹೋಗೋದಿಲ್ಲ ಸುಪ್ರೀಂ ಕೋರ್ಟ್ ಅನುಮತಿ ಕೊಟ್ರು, ಪಾಲಿಕೆ ಆಯುಕ್ತರು ಪರವಾನಿಗೆ ಕೊಡ್ತೀಲ್ಲ. ಅವರು ಪರವಾನಿಗೆ ಕೊಡಲಿ ಬಿಡಲಿ ಅಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡೋದು‌ ಫಿಕ್ಸ್ ಎಂದ ಬೆಲ್ಲದ್ ಅಧಿಕಾರಿಗಳ ವಿರುದ್ದ ಕಿಡಿಕಾರಿದರು.

ಹುಬ್ಬಳ್ಳಿ ಜನತೆ ಶಾಂತವಾಗಿ ಗಣೇಶ ಹಬ್ಬ ಆಚರಣೆ ಮಾಡ್ತೀವಿ, ಕಳೆದ ವರ್ಷದಂತೆ ಚೆನ್ನಮ್ಮ ವೃತ್ತದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೇಳಿದ್ವಿ ಸಾಮಾನ್ಯ ಸಭೆಯಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಕೊಟ್ಟಿತ್ತು. ಸಾಮಾನ್ಯ ಸಭೆಯಲ್ಲಿ ತಗೆದುಕೊಂಡು ನಿರ್ಣಯಕ್ಕೆ ಆಯುಕ್ತರು ವರ್ಕಿಂಗ್ ಆರ್ಡರ್ ಮಾಡ್ತಿಲ್ಲ.

ಮುಸ್ಲಿಂ ಸಮಾಜಕ್ಕೆ ನಮಾಜ್ ಮಾಡೋಕೆ ಸಿದ್ದರಾಮಯ್ಯ ಸರ್ಕಾರ ಅವಕಾಶ ಕೊಟ್ಟಿದೆ.. ಆದ್ರೆ ಗಣೆಶ ಹಬ್ಬಕ್ಕೆ ಸಿದ್ದರಾಮಯ್ಯ ಸರ್ಕಾರ ಅನುಮತಿ ಕೊಡ್ತಿಲ್ಲ.ಪಾಲಿಕೆ ಆಯುಕ್ತರು ಸಿದ್ದರಾಮಯ್ಯ ಸರ್ಕಾರ ನಿರ್ದೇಶನದಂತೆ ಕೆಲಸ ಮಾಡ್ತೀದಾರೆ.ಹಿಂದೂ ಭಾವನೆಗಳ ಜೊತೆ ಚೆಲ್ಲಾಟ ಆಡಬೇಡಿ ನಿಮಗೆ ಹಿಂದೂಗಳು ವೋಟ್ ಹಾಕಿದ್ದಾರೆ, ಹೀಗಾಗಿ ಕೂಡಲೇ ಅನುಮತಿ ಕೊಡಿ  ಕಾನೂನು ಪ್ರಕಾರ ಯಾರದರೂ ತೊಂದರೆ ಮಾಡ್ತಾ ರೆ ಅಂದ್ರೆ ಅವರನ್ನು ಒಳಗೆ ಹಾಕಿ ಎಂದ ಬೆಲ್ಲದ ಹೇಳಿದರು.

Basavaraj Bommai : ಬಿಜೆಪಿಗೂ, ಚೈತ್ರ ಕೇಸ್ ಗೂ ಯಾವುದೇ ಸಂಬಂಧವಿಲ್ಲ : ಬೊಮ್ಮಾಯಿ

Krishna Byregowda: ತಹಶಿಲ್ದಾರ್ ಕಛೇರಿಗೆ ಸಚಿವರ ದಿಡೀರ್ ಭೇಟಿ ಅಧಿಕಾರಿಗಳ ತರಾಟೆಗೆ..!

Police: ಗಣೇಶ ಹಬ್ಬ ಆಚರಣೆ ವೇಳೆ ನಿಯಮ ಪಾಲನೆಗೆ ಪೊಲೀಸರು ಮನವಿ..!

- Advertisement -

Latest Posts

Don't Miss