National news
ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಗಾಟಿಸಿ ಸಂಚಾರಕ್ಕೆ ಚಾಲನೆ ನೀಡಿದ ಗಂಗಾ ವಿಲಾಸ್ ಕ್ರೂಸ್ ಸಂಚಾರದಲ್ಲಿ ಅಡಚಣೆ ಉಂಟಾಗಿದ್ದು ಪ್ರಯಾಣಿಕರಲ್ಲಿ ಆತಂಕ ಉಂಟುಮಾಡಿದೆ. ಗಂಗಾ ವಿಲಾಸ್ ಕ್ರೂಸ್ ಜಲ ಸಂಚಾರ ಬಿಹಾರ ಮೂಲಕ ಹಾದು ಹೋಗುವಾಗ ತೊಂದರ ಉಂಟಾಗಿದೆ ಎಂದು ವರದಿಯಾಗಿದೆ. ಜನವರಿ 13 ರಂದು ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕ್ರೂಸ್‌ಗೆ ಚಾಲನೆ ನೀಡಿದರು. ಎರಡು ದಿನಗಳ ನಂತರ, ಗಂಗಾ ವಿಲ್ಲಾಸ್ ಕ್ರೂಸ್‌ನಲ್ಲಿ ಪ್ರವಾಸಿಗರಿಗೆ ಬಿಕ್ಕಟ್ಟು ಎದುರಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದೆ. ಒಂದು ದಿನಕ್ಕ 50 ಸಾವಿರ ರೂಪಾಯಿಯಂತೆ 50 ದಿನಗಳ ಪ್ರವಾಸದಲ್ಲಿ ಹಲವು ದೇಶಗಳನ್ನು ಸುತ್ತಿ ಹಲವಾರು ದೇವಾಲಯಗಳನ್ನು ಭೇಟಿ ನೀಡುವ ಮೂಲಕ ಪ್ರಯಾಣಿಕರಿಗೆ ದರ್ಶನ ಭಾಗಯ ಕರುಣಿಸುವ ಈ ಕ್ರೂಸರ್ ಈಗ ನೀರಿನ ಮಧ್ಯೆ ಕೆಟ್ಟು ನಿಂತು ಕಾರಣ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದಾರೆ.ಎನ್ ಡಿ ಆರ್ ಎಪ್ ತಂಡದವರು ಸುದ್ದಿ ತಿಳಿದ ತಕ್ಷಣ ಕ್ರೂಸ್ ಇದ್ದ ಸ್ಥಳಕ್ಕೆ ಧಾವಿಸಿ ಗಂಗಾ ವಿಲಾಸ್ ಕ್ರೂಸ್ ಅನ್ನು ಹಡಗುಗಳ ಮೂಲಕ ದಡಕ್ಕೆ ತರುವಲ್ಲಿ ಯಶಸ್ವಿಯಾದರು.