Thursday, April 17, 2025

Latest Posts

ಗರ್ಭಾ ನೃತ್ಯ ಮಾಡುತ್ತಲೇ ಹೃದಯಾಘಾತದಿಂದ ಮೃತಪಟ್ಟ ಗರ್ಭಾ ಕಿಂಗ್ ಅಶೋಕ್ ಮಾಲಿ

- Advertisement -

Pune: ಗರ್ಭಾ ಕಿಂಗ್ ಎಂದೇ ಖ್ಯಾತರಾಗಿದ್ದ, ಗರ್ಭಾ ನೃತ್ಯಗಾರ ಅಶೋಕ್ ಮಾಲಿ, ಗರ್ಭಾ ಮಾಡುತ್ತಲೇ ಸಾವನ್ನಪ್ಪಿದ್ದಾರೆ. ನವರಾತ್ರಿಯ ಸಮಯದಲ್ಲಿ ಗುಜರಾತ್‌, ಮಹಾರಾಷ್ಟ್ರದಲ್ಲಿ ಗರ್ಭಾ ನೃತ್ಯ ಮಾಡಲಾಗುತ್ತದೆ. ಇದು ದೇವಿಗೆ ಸಮರ್ಪಿಸುವ ಕಲಾ ಸೇವೆ.

ಈ ಗರ್ಭಾ ನೃತ್ಯವನ್ನು ಚೆನ್ನಾಗಿ ಮಾಡುತ್ತಿದ್ದ ಅಶೋಕ್ ಮಾಲಿ (54) ಎನ್ನುವವರು ಪುಣೆ ಜಿಲ್ಲೆಯ ಖೇಡ್ ಎಂಬಲ್ಲಿ ನವರಾತ್ರಿ ಉತ್ಸವದ ವೇಳೆ, ಗರ್ಭಾ ಮಾಡುತ್ತಿದ್ದಾಗ, ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಆಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.

ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ, ದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ. ನಾವು ಪ್ರೀತಿಸುವ ಕಲೆಯನ್ನು ಪ್‌ರದರ್ಶಿಸುತ್ತಿರುವಾಗಲೇ, ಸಾವು ಬರುವುದು ತುಂಬಾ ಅಪರೂಪ. ಆಸ್ಪತ್ರೆ ಸೇರದೆ, ಇನ್ನೊಬ್ಬರಿಗೆ ತೊಂದರೆ ನೀಡದೇ, ಕಲಾಸೇವೆ ಮಾಡುತ್ತಲೇ ಹೋಗಲು ಕೂಡ ಪುಣ್ಯ ಮಾಡಿರಬೇಕು. ಆದರೆ ಕುಟುಂಬಸ್ಥರಿಗೆ ಮಾತ್ರ ಕಷ್ಟ. ಇದೇ ರೀತಿ, ಹಾಡು, ನೃತ್ಯ, ಯಕ್ಷಗಾನ, ಪಾಠ ಮಾಡುವಾಗಲೂ ಎಷ್ಟೋ ಶಿಕ್ಷಕರು, ಕಲಾವಿದರು ಸಡನ್ ಆಗಿ ಹೃದಯಾಘಾತದಿಂದ ಮೃತಪಟ್ಟ ನಿದರ್ಶನಗಳಿದೆ.

- Advertisement -

Latest Posts

Don't Miss