ಸಣ್ಣಪರದೆ ಮೇಲೆ ಮಿಂಚುತ್ತಿರೋ, ಹೆಣೈಕ್ಳ ನೆಚ್ಚಿನ ಹೀರೋ… ಸ್ಮಾಲ್ ಸ್ಕ್ರೀನ್ ಗೂ ಜೈ ಬಿಗ್ ಸ್ಕ್ರೀನ್ ಗೂ ಸೈ ಎನ್ನುವ ಸ್ಟಾರ್ ನಟ ರಕ್ಷಿತ್. ಪುಟ್ಟಗೌರಿ ಸೀರಿಯಲ್ ನಿಂದ ಶುರುವಾದ ರಕ್ಷಿತ್ ಬಣ್ಣದ ಜರ್ನಿ ಸಖತ್ ಕಲರ್ ಫುಲ್. ಸಾಕಷ್ಟು ಏಳು-ಬೀಳುಗಳನ್ನು ಕಂಡು ಕಿರುತೆರೆ ಲೋಕ ನಂಬರ್-1 ಹೀರೋ ಎನಿಸಿಕೊಂಡಿರೋ ನಟ. ಇಂದು ದಿ ಗ್ರೇಟ್ ವಸಿಷ್ಠ ಖ್ಯಾತಿಯ ರಕ್ಷಿತ್ ಗೆ ಬರ್ತ್ ಡೇ ಸಂಭ್ರಮ.

ಕಳೆದ ಹತ್ತು ವರ್ಷಗಳಿಂದ ಕಲಾ ದೇವಿಯ ಆರಾಧಿಸುತ್ತಿರೋ ರಕ್ಷಿತ್ ಸೀರಿಯಲ್ ಜೊತೆ ಸಿನಿಮಾದಲ್ಲಿಯೂ ನಟಿಸುತ್ತಿರೋ ಈ ಸ್ಮಾರ್ಟ್ ಹೀರೋಗೆ ಕಿರುತೆರೆ ಲೋಕದಲ್ಲಿ ಬಹುದೊಡ್ಡ ಹೆಸರಿದೆ. ಕಿರುತೆರೆಯ ಡಿಬಾಸ್ ಹಾಗೂ ಸೀರಿಯಲ್ ಲೋಕದ Badshah ಅಂತಾ ಪಟ್ಟ ಗಿಟ್ಟಿಸಿಕೊಂಡಿರೋ ಜನಮೆಚ್ಚಿದ ನಾಯಕ.

ಬಣ್ಣದ ಜಗತ್ತಿನಲ್ಲಿ ಮಿಂಚಬೇಕು..ಏನಾದ್ರೂ ಸಾಧಿಸಬೇಕು ಅನ್ನೋ ಛಲ ಹೊತ್ತು ಬಂದ ರಕ್ಷಿತ್ ಇಂದು ಕಿರುತೆರೆ ಲೋಕದ ನಂಬರ್-1 ಹೀರೋ. ಹಾಗಂತ್ ರಕ್ಷಿತ್ ಬಣ್ಣದ ಬದುಕಿನಲ್ಲಿ ಗಾಡ್ ಫಾದರ್ ಇಲ್ಲ.. ಸಿನಿಮಾ ಬ್ಯಾಗ್ರೌಂಡ್ ಅಂತೂ ಇಲ್ಲವೇ ಇಲ್ಲ. ಬಟ್ ಸಾಧಿಸುವ ಛಲವಿತ್ತು. ಕಷ್ಟ-ಸುಖ-ದುಃಖ ಎಲ್ಲವನ್ನು ಸಹಿಸಿಕೊಂಡು ಪುಟ್ಟಗೌರಿಯಿಂದ ಶುರು ಮಾಡಿದ ಸೀರಿಯಲ್ ಜರ್ನಿ ಇಂದು ಗಟ್ಟಿಮೇಳ ಸೀರಿಯಲ್ ವರೆಗೂ ಬಂದಿದೆ.

ಪುಟ್ಟಗೌರಿ ಸೀರಿಯಲ್ ಮಹೇಶ ಎಷ್ಟು ಖ್ಯಾತಿ ಪಡೆದಿದ್ದರೋ ಅದೇ ರೀತಿ ಗಟ್ಟಿಮೇಳ ವೇದಾಂತ್ ಅಷ್ಟೇ ಫೇಮಸ್. ಅವರ ಆ್ಯಟಿಟ್ಯೂಡ್, ಸ್ಟೈಲ್, ಲುಕ್, ಗೆಟಪ್, ನಟನೆ ಪ್ರತಿಯೊಂದ ಸಿಂಪಲ್ಲಿ ಸೂಪರ್. ಹೀಗಿದ್ಮೇಲೆ ಗ್ರೇಟ್ ವಸಿಷ್ಠ ವೇದಾಂತ್ ಗೆ ನಮ್ಮ ಹೆಣೈಕ್ಳು ಫಿದಾ ಆಗದೇ ಇರ್ತಾರಾ..? ಖಂಡಿತ ವಸಿಷ್ಠ ವೇದಾಂತ್ ನಂತಹ ಹುಡ್ಗ ಲೈಫ್ ಪಾರ್ಟ್ನಾರ್ ಆಗಬೇಕು ಅಂತಾರೆ. ಇಷ್ಟೆ,ಲ್ಲಾ ನೇಮೂ-ಫೇಮೂ ಪಡೆದಿರೋ ರಾಕ್ ಸ್ಟಾರ್ ರಕ್ಷಿತ್ ಬರೀ ಸೀರಿಯಲ್ ಗೂ ಸೀಮಿತವಾಗದೇ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಕಮರ್ಷಿಯಲ್ ಸಿನಿಮಾಗಳ ಆರ್ಭಟದ ನಡುವೆ ನೆಲ-ಜಲ, ನಾಡು-ನುಡಿ ಬಗ್ಗೆ ಹೋರಾಟ ನಡೆಸುದವಂತಹ ಸಿನಿಮಾದಲ್ಲಿ ನಟಿಸಿದ್ದಾರೆ. ಕಳೆದ ವರ್ಷ ರಿಲೀಸ್ ಆದ ನರಗುಂದ ಬಂಡಾಯ ಸಿನಿಮಾದಲ್ಲಿ ನಟಿಸಿ ಎಲ್ಲರಿಂದ ಸೈ ಎನಿಸಿಕೊಂಡಿದ್ದಾರೆ.

ಸ್ಮಾಲ್ ಸ್ಕ್ರೀನ್, ಬಿಗ್ ಸ್ಕ್ರೀನ್ ಎರಡರಲ್ಲೂ ನಟಿಸುತ್ತಿರುವ ರಾಕ್ ಸ್ಟಾರ್ ರಕ್ಷತ್ ಹೀಗೆ ಕಿರುತೆರೆಯಲ್ಲಿ ನಂಬರ್ ಪಟ್ಟದಲ್ಲಿ ಮಿಂಚುತ್ತಿರಲಿ ಜೊತೆ ಸಾಕಷ್ಟು ಸಿನಿಮಾಗಳು ರಕ್ಷತ್ ಅರಸಿ ಬರಲಿ ಏನಂತೀರಾ..?


