www.karnatakatv.net: ಕರ್ನಾಟಕ ಮೂಲದ ಗೀತಾ ಗೋಪಿನಾಥ್ ಅಂತರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಐಎಂಎಫ್ ಮುಖ್ಯಸ್ಥ ಸ್ಥಾನದ ಅವಧಿ ಜನವರಿಗೆ ಮುಕ್ತಾಯವಾಗುತ್ತಿದೆ.
ಗೀತಾ ಗೋಪಿನಾಥ್ ಅವರು ಐ.ಎಂ.ಎಫ್ ನಲ್ಲಿ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 2018ರಲ್ಲಿ ಅವರು ಆ ಸ್ಥಾನಕ್ಕೆ ನಿಯುಕ್ತಿಗೊಂಡಿದ್ದರು. ಇಂದಿಗೆ ಐ.ಎಂ.ಎಫ್ ಮುಖ್ಯಸ್ಥ ಹುದ್ದೆಯಲ್ಲಿ ಗೀತಾ ಅವರು ಮೂರು ವರ್ಷ ಸೇವೆ ಸಲ್ಲಿಸಿದ್ದಾರೆ. ಗೀತಾ ಅವರ ಸೇವಾವಧಿ ಮುಕ್ತಾಯಗೊಳ್ಳುತ್ತಿರುವುದಕ್ಕೆ ಐ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕಿ ಜಾರ್ಜೀವಾ ಅವರಿ ಗೀತಾ ಸೇವೆಯನ್ನು ಶ್ಲಾಘಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಗೀತಾ ನಿರ್ವಹಿಸಿದ ಜವಾಬ್ದಾರಿ ಹೇಳತಿರದು ಎಂದು ಗೀತಾ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.
ಗೀತಾ ಮುಂದಿನ ದಿನಗಳಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದ ಉಪನ್ಯಾಸಕ ಹುದ್ದೆಗೆ ಮರಳಲಿದ್ದಾರೆ. ಈ ಹಿಂದೆ ಐ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕಿ ಜಾರ್ಜಿವಾ ಅವರ ಮೇಲೆ ಆಪಾದನೆಗಳು ಕೇಳಿಬಂದಿದ್ದವು. ಅವರು ದೊಡ್ಡ ದೊಡ್ಡ ಪ್ರಭಾವಿ ದೇಶಗಳ ಬ್ಯಾಂಕುಗಳ ಪರ ತಮಗೆ ಬೇಕಾದಂತೆ ದಾಖಲೆ ತಿದ್ದಲು ಆರ್ಥಿಕ ತಜ್ಞರ ಮೇಲೆ ಒತ್ತಡ ಹೇರುತ್ತಿರುವುದಾಗಿ ಆಪಾದನೆ ಮಾಡಲಾಗಿತ್ತು. ಆ ಪ್ರಕರಣಕ್ಕೂ ಗೀತಾ ನಿರ್ಗಮನಕ್ಕೂ ಯಾವುದೇ ಸಂಬAಧವಿಲ್ಲ ಎಂದು ಮೂಲಗಳು ತಿಳಿಸಿವೆ.
ಯುಎಸ್ ಹಣಕಾಸು ಇಲಾಖೆಯು ತಮ್ಮ ಸಮಗ್ರತೆಯನ್ನು ಕಾಪಾಡಲು ಸಂಸ್ಥೆಗಳಲ್ಲಿ ಬದಲಾವಣೆಗಳಿಗಾಗಿ ಒತ್ತಡವನ್ನು ಮುಂದುವರಿಸಿದೆ. ಗೀತಾ ಗೋಪಿನಾಥ್ ಕಳೆದ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಐಎಂಎಫ್ ಡೇಟಾ ಸಮಗ್ರತೆಯನ್ನು `ನಂಬಲಾಗದಷ್ಟು ಗಂಭೀರವಾಗಿ’ ತೆಗೆದುಕೊಳ್ಳುತ್ತದೆ. ಯಾವಾಗಲೂ ಸುಧಾರಿಸುವ ಮಾರ್ಗಗಳನ್ನು ಹುಡುಕುತ್ತಿದೆ ಎಂದು ಹೇಳಿದ್ದರು.