ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿನ ಗೀತಂ ವಿವಿಯಲ್ಲಿ ಕನ್ನಡಿಗ ವರ್ಸಸ್ ಆಂಧ್ರಪ್ರದೇಶದ ವಿದ್ಯಾರ್ಥಿಗಳ ಗಲಾಟೆ ಪ್ರಕರಣ ತಾರಕಕ್ಕೇರಿದೆ. ಈ ವೇಳೆಯಲ್ಲಿಯೇ ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ, ಕಾಲೇಜಿನ 6ನೇ ಮಹಡಿಯಿಂದ ವಿದ್ಯಾರ್ಥಿನಿಯೊಬ್ಬಳ್ಳಿ ಬಿದ್ದು ಸಾವನ್ನಪ್ಪಿರೋ ಘಟನೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ನಾಗದೇವನಹಳ್ಳಿ ಬಳಿಯಿರುವಂತ ಗೀತಂ ವಿಶ್ವವಿದ್ಯಾಲಯದಲ್ಲಿ ಕಳೆದ ರಾತ್ರಿ ಉಗಾಂಡ ಮೂಲಕ ಹಸೀನಾ (24) ವಿದ್ಯಾರ್ಥಿನಿ, ಕಾಲೇಜು ಕಟ್ಟಡದ ಮೇಲಿನಿಂದ ಅನುಮಾನಾಸ್ಪದ ರೀತಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ.
ಮೃತ ಹಸೀನಾ ಗೀತಂ ಕಾಲೇಜಿನಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವ್ಯಾಸಾಂಗ ಮಾಡುತ್ತಿದ್ದಳು. ರಾತ್ರಿ 11 ಗಂಟೆ ಸುಮಾರಿಗೆ, 6 ನೇ ಮಹಡಿಯಿಂದ ಮೊದಲ ಮಹಡಿಗೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾದರೂ, ಮಾರ್ಗಮಧ್ಯೆ ಸಾವನ್ನಪ್ಪಿರೋದಾಗಿ ತಿಳಿದು ಬಂದಿದೆ.
ಇನ್ನೂ ಬಹು ಮಹಡಿಯಿಂದ ಬಿದ್ದು ಯುವತಿ ಸಾವು ಹಿನ್ನೆಲೆಯಲ್ಲಿ ಗೀತಂ ವಿವಿಯಲ್ಲಿ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ. ಆಕ್ರೋಶ ಭರಿತರಾದಂತ ವಿದ್ಯಾರ್ಥಿಗಳು ಕಾಲೇಜಿನ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಪರಿಣಾಮ, ಕಿಟಕಿ, ಬಾಗಿಲುಗಳ ಗ್ಲಾಸ್ ಗಳು ಪುಡಿ ಪುಡಿಯಾಗಿವೆ.
ಇದಷ್ಟೇ ಅಲ್ಲದೇ ಕಾಲೇಜಿನಲ್ಲಿ ಅಲ್ಲದೇ ಹಾಸ್ಟೆಲ್ ನಲ್ಲಿಯೂ ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.ನೂರಾರು ವಿದ್ಯಾರ್ಥಿಗಳಿಂದ ಸಿಕ್ಕ ಸಿಕ್ಕ ವಸ್ತುಗಳೆಲ್ಲ ಪುಡಿ ಪುಡಿ ಮಾಡ್ತೀರೋದಾಗಿ ತಿಳಿದು ಬಂದಿದೆ. ವಿದ್ಯಾರ್ಥಿಗಳ ಆಕ್ರೋಶದಿಂದಾಗಿ ಗೀತಂ ವಿವಿಯಲ್ಲಿ ಪರಿಸ್ಥಿತಿ ಉದ್ವಿಗ್ನತೆಯಿಂದ ಕೂಡಿದೆ. ಈ ಹಿನ್ನಲೆಯಲ್ಲಿ ಕಾಲೇಜಿಗೆ ಇಂದು ರಜೆ ಕೂಡ ಘೋಷಿಸಲಾಗಿದೆ.




