ಬೆಂಗಳೂರು: ಆರ್.ಮಂಜುನಾಥ್ ಅವರು ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡುತ್ತ, ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಭ್ರಷ್ಟಾಚಾರ ಶುರುಮಾಡಿದರು. 2019ರಿಂದೀಚೆಗೆ ತಿಪ್ಪಾರೆಡ್ಡಿಗೆ 90 ಲಕ್ಷ ರೂ. ಕೊಟ್ಟಿದ್ದೇನೆ ಎಂದು ಹೇಳಿದ್ದರು. ಇದಕ್ಕೆ ತಿಪ್ಪಾರೆಡ್ಡಿ ಪ್ರತಿಕ್ರಿಯಿಸಿದ್ದು, “ಇದು ವೈಯಕ್ತಿಕ ದ್ವೇಷದ ಹೇಳಿಕೆ” ಎಂದು ಹೇಳಿದ್ದಾರೆ. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ(ಕೆಎಸ್‌ಸಿಎ)ದ ಕಾರ್ಯಾಧ್ಯಕ್ಷ ಆರ್.ಮಂಜುನಾಥ್ ಸುದ್ದಿಗೋಷ್ಠಿ ನಡೆಸಿ, ಲಂಚದ ಬೇಡಿಕೆ ಸಂಬಂಧ ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಜತೆಗೆ ಮಾತನಾಡಿದ ಆಡಿಯೋ ರಿಲೀಸ್ ಮಾಡಿದ್ದರು. ಸರ್ಕಾರಿ ಗುತ್ತಿಗೆ ಪಡೆಯಬೇಕಾದರೆ ಲಂಚ ಮತ್ತು ಕಮಿಷನ್ ನೀಡಬೇಕಾಗಿ ಬಂದಿರುವ ಪರಿಸ್ಥಿತಿಯ ಕಡೆಗೆ ಮಂಜುನಾಥ್ ಗಮನಸೆಳೆಯಲು ಪ್ರಯತ್ನಿಸಿ, ಈ ಆಡಿಯೋ ರಿಲೀಸ್ ಮಾಡಿದ್ದರು.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಎರಡನೇ ಮದುವೆಯಾಗಿದ್ದು, ಪಾಕಿಸ್ತಾನದಲ್ಲಿ ನೆಲೆಯೂರಿದ್ದಾನಂತೆ..!
ಈ ಆರೋಪದ ಬಗ್ಗೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, “ಮಂಜುನಾಥ್‌ಗೆ ನನ್ನ ಬಗ್ಗೆ ವೈಯಕ್ತಿಕ ದ್ವೇಷ ಇದೆ. ಕಳೆದ 10-20 ವರ್ಷದಿಂದ ನನಗೂ ಮಂಜುನಾಥ್‌ಗೂ ಭಿನ್ನಾಭಿಪ್ರಾಯ ಇದೆ. ಏನು ಕೆಲಸ ಮಾಡಿದ್ರೂ, ಅದರಲ್ಲಿ ಆತನದ್ದೇ ಅಂತಿಮ ಮಾತಿರಬೇಕು ಎಂಬ ಧೋರಣೆ ಹೊಂದಿದ ವ್ಯಕ್ತಿ ಮಂಜುನಾಥ್. ಅವರು ಜಿಲ್ಲಾ ಅಧ್ಯಕ್ಷರಾಗಿದ್ದಾಗ ಅಧಿಕಾರಿಗಳನ್ನು ಬೆದರಿಸುತ್ತಿದ್ದರು. ಸಣ್ಣ ಗುತ್ತಿಗೆದಾರರಿಗೆ ಬಹಳ ಕಿರುಕುಳ ಕೊಟ್ಟಿದ್ದಾರೆ. ಯಾವ ಪಕ್ಷಕ್ಕೆ ಬೆಂಬಲ ನೀಡುತ್ತೀರಿ ಎಂದು ಕೇಳಿ ಸತಾಯಿಸುವ ಕೆಲಸವನ್ನೂ ಮಂಜುನಾಥ್ ಮಾಡುತ್ತಿದ್ದರು ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಕಛೇರಿಯಲ್ಲಿ ಇಂಥಹ ವ್ಯಕ್ತಿಗಳನ್ನು ಇಷ್ಟಪಡುತ್ತಾರೆ.. ಚಾಣಕ್ಯ ಹೇಳಿದ ಈ ಗುಣಗಳು ನಿಮ್ಮಲ್ಲಿದೆಯೇ..?