ಬಿಗ್ ಬಾಸ್ ಮನೆಯಲ್ಲಿ ಭೂತ..?

www.karnatakatv.net: ಸಿನಿಮಾಬಿಗ್ ಬಾಸ್ ಮನೆಯಲ್ಲಿ ವಿಚಿತ್ರ ಶಕ್ತಿ ಇದೆಯಾ..? ಹೀಗೊಂದು ಚರ್ಚೆಯನ್ನು ಶಮಂತ್ ಹುಟ್ಟು ಹಾಕಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಸೀಸನ್ 8ರ 2ನೇ ಇನ್ನಿಂಗ್ಸ್‍ನ ಮೊದಲ ದಿನ ನಡೆದ ಭಯಾನಕ ಅನುಭವವನ್ನ ಶಮಂತ್ ಹೇಳಿಕೊಂಡಿದ್ದಾರೆ. “ನಾನು ಬೆಡ್ ರೂಂಗೆ ಹೋದೆ, ಕ್ಯಾಪ್ಟನ್ ರೂಂನಲ್ಲಿ ವಿಚಿತ್ರ ಆಕೃತಿಯೊಂದು ಹಾದು ಹೋಯ್ತು. ನಾನು 5 ನಿಮಿಷ ತಲೆಕೆಡಿಸಿಕೊಂಡೆ. ಆದ್ರೆ, ಈ ವಿಚಾರವನ್ನ ನಿನ್ನ ಬಳಿ ಹೇಳುತ್ತಿದ್ದೇನೆ, ಈ ವಿಚಾರದಲ್ಲಿ ಪ್ರಾಂಕ್ ಮಾಡುತ್ತಿಲ್ಲ” ಎಂದು ಪ್ರಿಯಾಂಕಾಗೆ ಶಮಂತ್ ಹೇಳಿದ್ದಾರೆ. ನಾನು ಕ್ಯಾಪ್ಟನ್ ಆಗಿದ್ದಾಗ ನಿದ್ದೆಯೇ ಮಾಡಿಲ್ಲ. ಅಲ್ಲಿ ಮಲಗಿದವರಿಗೆ ಯಾರಿಗೂ ನಿದ್ದೆ ಬರಲ್ಲ. 2 ವಾರ ಅಲ್ಲಿ ಹೇಗೆ ಕಳೆದೆನೋ ನನಗೆ ಗೊತ್ತಿಲ್ಲ ಎಂದು ಶಮಂತ್ ಪ್ರಿಯಾಂಕ ಬಳಿ ಹೇಳಿಕೊಂಡಿದ್ದಾರೆ.

About The Author