ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ(Gilli) ನೀನ್ ಏನ್ ಸಾಧನೆ ಮಾಡಿದೀಯಾ ಅಂತ ಕೇಳುತ್ತಿದ್ದವರಿಗೆ ಗಿಲ್ಲಿ ಉತ್ತರ ಕೊಡೋಕೆ ತಯಾರಾಗ್ತಿರೋ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ, ಬಿಗ್ ಬಾಸ್ ಮನೆಯಲ್ಲಿ ಹಾಗೆ ನೋಡ್ಕೊಂಡ್ರೆ ಕೆಲವು ಸ್ಪರ್ದಿಗಳು ಟಾಸ್ಕ್ನಲ್ಲೂ ಬೆಸ್ಟ್ ಮನೆ ಕೆಲಸಗಳನ್ನ ಮಾಡೋದ್ರಲ್ಲೂ ,ಅನ್ನೋವವರು ಇದಾರೆ, ಹಾಗ್ ನೋಡಿದ್ರೆ ಗಿಲ್ಲಿಗಿಂತ ಸಾಮರ್ಥ್ಯಗಳನ್ನ ಹೊಂದಿರೋ, ಘಟಾನುಘಟಿ ಸ್ಪರ್ದಿಗಳೇ ಬಿಗ್ ಹೌಸ್ನಲ್ಲಿ ಇದಾರೆ , ಆದ್ರೆ ಗಿಲ್ಲಿ ಮಾತ್ರಾ ಅದ್ಯಾವ ಘಟಾನುಘಟಿಯೇ ಇದ್ರೂ ಜನತೆಯ ಮನಸ್ಸನ್ನ ಗೆಲ್ಲೋದ್ರಲ್ಲಿ ಮಾತ್ರ ಫಸ್ಟ್ ಪ್ಲೇಸ್ನಲ್ಲಿ ಇರೋದಂತು ಪಕ್ಕ…
ಸಿನಿಮಾ ವಿಮರ್ಶೆ ಮಾಡೋವಾಗ ಒಂದು ಮಾತು ಕೇಳಿರ್ತೀವಿ ಕೆಲವು ನಟರು ಅದ್ಯಾರೇ ತನ್ನೆದುರು ನಟಿಸುತ್ತಿದ್ರು ಆ ಒಬ್ಬ ನಟ ಮಾತ್ರ ಸ್ಕ್ರೀನ್ ತಿಂದ್ಕೊಂಡ್ ಬಿಡ್ತಾರೆ ಅಂತ ಸಾಕಷ್ಟು ನಟರಿಗೆ ಹೇಳಿರೋದನ್ನ ನಾವ್ ನೋಡಿದೀವಿ,ಅದೇ ಸಾಲಿಗೆ ಗಿಲ್ಲಿ ಸೇರ್ತಾರೆ, ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಒಬ್ರೇ ಎದುರಾಳಿ ಯಾರೇ ಇದ್ರೂ ಸ್ಕ್ರೀನ್ ತಿಂದುಕೊಳ್ತಾರೆ , ಜನ ಗಿಲ್ಲಿ ಬಂದ್ರೆ ಸಾಕು ಅಂತ ಕಾಯ್ತಾ ಇರ್ತಾರೆ, ಗಿಲ್ಲಿ ಕಾಮಿಡಿ ಮಾಡೋಕು ಸೈ , ಕಾಲ್ ಎಳೆಯೋಕು ಸೈ , ಅನ್ಯಾಯ ನಡೀತಿದ್ರೆ ದ್ವನಿ ಎತ್ತೋಕೂ ಸೈ , ಬಿಗ್ ಬಾಸ್(Bigg Boss) ಕಪ್ ಗೆಲ್ಲೋಕೆ ಟಾಸ್ಕ್ ಆಡಿ ಗೆಲ್ಲಲೇ ಬೇಕು ಅನ್ನೋ ಮೂಢನಂಬಿಕೆಯನ್ನ ಸುಳ್ಳು ಮಾಡೋಕೆ ಗಿಲ್ಲಿ ಒಬ್ರೇ ಸಾಕು ಅನ್ನೋ ಹಾಗಿದೆ, ಹಾಗಂತ ಗಿಲ್ಲಿ ಟಾಸ್ಕ್ ಗೆಲ್ಲೋದೇ ಇಲ್ವಾ? ಅನ್ನೋವವರಿಗೆ ಉತ್ತರವನ್ನೂ ಗಿಲ್ಲಿ ಖಂಡಿತ ಒಂದಲ್ಲ ಒಂದು ದಿನ ಕೊಟ್ಟೆ ಕೊಡ್ತಾರೆ,ಗಿಲ್ಲಿಯ ಕ್ಯಾಪ್ಟನ್ಸಿ ನೋಡೋಕೆ ಕಾಯ್ತಾ ಇರೋ ಅಭಿಮಾನಿಗಳಿಗೆ ಗಿಲ್ಲಿ ಗುಡ್ ನ್ಯೂಸ್ ಕೊಟ್ಟೆ ಕೊಡ್ತಾರೆ…
ನೆನ್ನೆಯ ಟಾಸ್ಕ್ನಲ್ಲಿ(Task) ಗಿಲ್ಲಿ ತುಂಬಾ ವಿಭಿನ್ನವಾಗಿ ಕಾಣಿಸಿಕೊಂಡರು, ಗಿಲ್ಲಿ ತಮ್ಮ ತಂಡದ ನಾಯಕ ಕೂಡ ಆಗಿದ್ದಾರೆ, ಗಿಲ್ಲಿಗೆ ಜವಾಬ್ದಾರಿಯನ್ನ ಸೀರಿಯಸ್ ಆಗಿ, ನ್ಯಾಯವಾಗಿ ನಿಭಾಯಿಸೋಕು ಬರುತ್ತೆ ಅನ್ನೋದನ್ನ ಅಲ್ಲಿದ್ದ ಸ್ಪರ್ದಿಗಳಿಗೆ ಗಿಲ್ಲಿ ನಿರೂಪಿಸಿದ್ದಾರೆ , ‘ನ್ಯಾಯ ಅಂದ್ರೆ ನ್ಯಾಯ ಮಂಡ್ಯ ಹೈಕ್ಳು ನ್ಯಾಯ’ ಅನ್ನೋದು ನಿಮಗೆ ಗೊತ್ತೇ ಇದೆ, ಎಲ್ಲಿ ಅನ್ಯಾಯ ನಡೆಯುತ್ತೋ ಅಲ್ಲಿ ಗಿಲ್ಲಿ ರಿಯಾಕ್ಟ್ ಮಾಡೋದು ಬೇರೆಯೇ ಇರುತ್ತೆ…ಒಟ್ನಲ್ಲಿ ಗಿಲ್ಲಿ ಡಿಫರೆಂಟ್ ಫಾರ್ಮ್ಗೆ ಬಂದಿರೋ ಎಲ್ಲ ಲಕ್ಷಣಗಳೂ ಕಾಣುತ್ತಿವೆ..ಗಿಲ್ಲಿ ಬಿಗ್ ಬಾಸ್ ಕಪ್ ಗೆಲ್ಲೋ ಲಕ್ಷಣಗಳು ದಿನೇ ದಿನೇ ಹೆಚ್ಚಾಗ್ತಿವೆ….
ವರದಿ : ಗಾಯತ್ರಿ ಗುಬ್ಬಿ

