ಮೈಸೂರು: ಹೊಲದಲ್ಲಿ ಬೆಳೆದಿದ್ದ 5 ಲಕ್ಷ ರೂಪಾಯಿ ಮೌಲ್ಯದ ಶುಂಠಿ ಬೆಳೆಯನ್ನು ಕಳ್ಳರು ರಾತ್ರಿ ವೇಳೆ ಕಿತ್ತು ಕದ್ದೊಯ್ದಿರುವ ಘಟನೆ ಹುಣಸೂರು ತಾಲೂಕಿನ ಸಣ್ಣೇನಹಳ್ಳಿಯಲ್ಲಿ ನಡೆದಿದೆ.ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಸಣ್ಣೇನಹಳ್ಳಿ ಚಂದ್ರೇ ಗೌಡರ ಜಮೀನಿನಲ್ಲಿ ಕಳ್ಳರು ಶುಂಠಿಯನ್ನು ಕದ್ದ ಘಟನೆ ನಡೆದಿದ್ದು, ಇದೇ ತಾಲೂಕಿನ ಚೆನ್ನಸೋಗೆಯ ಪ್ರಸನ್ನ ಕುಮಾರ್, ಹೊಸಕೋಟೆಯ ಶ್ರೀನಿವಾಸ್ ಹಾಗೂ ದೇವೇಂದ್ರ ಸೇರಿದಂತೆ ಮೂವರು ಸಣ್ಣೇನಹಳ್ಳಿಯ ಚಂದ್ರೇಗೌಡ ಸೇರಿದಂತೆ ಮತ್ತಿತರ ರೈತರಿಂದ ಒಟ್ಟು 15 ಎಕರೆ ಜಮೀನನ್ನು ಗುತ್ತಿಗೆ ಪಡೆದು ಶುಂಠಿ ಬೆಳೆದಿದ್ದರು. ಶುಂಠಿ ಬೆಳೆಯೂ ಉತ್ತಮವಾಗಿ ಬಂದಿತ್ತು.
ಕಳೆದ ಶನಿವಾರ ರಾತ್ರಿ ಯಾರೋ ಕಳ್ಳರು ಸುಮಾರು ಅರ್ಧ ಎಕರೆಯಷ್ಟು ಜಮೀನಿನಲ್ಲಿ, 5 ಲಕ್ಷ ರೂ ಬೆಲೆ ಬಾಳುವ ಶುಂಠಿ ಬೆಳೆಯನ್ನು ಕಳುವು ಮಾಡಿಕೊಂಡು ಹೋಗಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಮನೆ – ಅಂಗಡಿಗಳಲ್ಲಿ ಕಳ್ಳತನ ಮಾಡುವುದು, ಪಂಪ್ ಸೆಟ್, ಸ್ಲಿಂಕ್ಲರ್ ಸೆಟ್‌ಗಳನ್ನು ಕಳ್ಳರು ಹೊತ್ತೊಯ್ಯುತ್ತಿದ್ದರು. ಆದರೆ, ಇದೀಗ ಶುಂಠಿ ಬೆಲೆ ಗಗನಕ್ಕೇರಿರುವುದರಿಂದ ಶುಂಠಿ ಬೆಳೆ ಮೇಲೂ ಕಳ್ಳರು ಕಣ್ಣು ಹಾಯಿಸಿದ್ದು, ರೈತರು ಕಷ್ಟಪಟ್ಟು ಸಾಲ ಸೋಲ ಮಾಡಿ ಬೆಳೆದ ಬೆಳೆಯೂ ಅವರಿಗೆ ದಕ್ಕದಂತಾಗಿದೆ.
Grhalaxmi yojana : ಗೃಹಲಕ್ಷ್ಮೀ ಯೋಜನೆಗೆ ಸ್ಟಾರ್ಟಿಂಗ್ ಟ್ರಬಲ್..! ಹಾಸನದಲ್ಲಿ ಸರ್ವರ್ ಡೌನ್..?!