Health tips:
ತೂಕ ಇಳಿಸುವ ಬಗ್ಗೆ ನೀವು ಈಗಾಗಲೇ ಹಲವಾರು ವಿಧಾನಗಳ ಬಗ್ಗೆ ತಿಳಿದುಕೊಂಡಿರಬಹುದು ಹಾಗೂ ತೂಕ ಇಳಿಸುವ ಆಹಾರಗಳನ್ನು ಸಹ ಪ್ರಯತ್ನಿಸಿರಬಹುದು. ಆದರೆ ಎಲ್ಲದಕ್ಕಿತಲೂ ಶುಂಠಿ ಆರೋಗ್ಯ ಹೆಚ್ಚಿಸುವ ಮತ್ತು ತೂಕ ಇಳಿಸುವಲ್ಲಿ ಅತ್ಯುತ್ತಮವಾಗಿದೆ. ಸೊಂಟ, ತೊಡೆ ಮತ್ತು ನಿತಂಬಗಳ ಕೊಬ್ಬನ್ನು ಕರಗಿಸುವುದಲ್ಲದೆ ನಿಮ್ಮ ಆರೋಗ್ಯವನ್ನೂ ಹಲವಾರು ವಿಧಗಳಲ್ಲಿ ವೃದ್ಧಿಸುತ್ತದೆ.
ಸಂಶೋಧನೆಯ ಪ್ರಕಾರ, ಪ್ರತಿದಿನ ಶುಂಠಿಯನ್ನು ಸೇವಿಸುವವರಿಗೆ ಬೇಗನೇ ಹಸಿವಾಗುವುದಿಲ್ಲ ,ಇದರಲ್ಲಿರುವ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿರಿಸುತ್ತದೆ. ಸಂಶೋಧನೆಯ ಪ್ರಕಾರ ಶುಂಠಿ ತೂಕವನ್ನು ಕಡಿಮೆ ಮಾಡಲು ಮತ್ತು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಶುಂಠಿಯನ್ನು ಅನೇಕ ರೀತಿಯಲ್ಲಿ ಬಳಸಲಾಗುತ್ತದೆ. ಶುಂಠಿಯಲ್ಲಿ ಔಷಧೀಯ ಗುಣವಿರುತ್ತದೆ. ಶುಂಠಿಯನ್ನು ಚಹಾಕ್ಕೆ ಮಾತ್ರವಲ್ಲದೆ ಕೆಮ್ಮು, ಶೀತದಂತಹ ಕಾಯಿಲೆಗಳಿಗೂ ರಾಮಬಾಣವಾಗಿ ಬಳಸಲಾಗುತ್ತದೆ. ಶುಂಠಿಯಿಂದ ಜೀರ್ಣಕ್ರಿಯೆ ಉತ್ತಮವಾಗುವುದಲ್ಲದೆ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ. ತಜ್ಞರ ಪ್ರಕಾರ ಶುಂಠಿ ಸೇವನೆಯಿಂದ ತೂಕವನ್ನು ಕಡಿಮೆ ಮಾಡಬಹುದು.
ಹಾಗಾದ್ರೆ ಇದನ್ನು ತಯಾರಿಸುವ ಬಗ್ಗೆ ಹೇಗೆ ಎಂದು ತಿಳಿದು ಕೊಳ್ಳೋಣ ,ಇದನ್ನು ತಯಾರಿಸಲು ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರನ್ನು ಹಾಕಿ ಇದರಲ್ಲಿ ನೂರು ಗ್ರಾಂ ಹಸಿ ಶುಂಠಿಯನ್ನು ಚಿಕ್ಕದಾಗಿ ತುರಿದು ಈ ನೀರಿನಲ್ಲಿ ಬೆರೆಸಿ ಕುದಿಸಿ. ಕುದಿಯಲು ಆರಂಭವಾದ ಬಳಿಕ ಕನಿಷ್ಟವಾಗಿ ಹದಿನೈದು ನಿಮಿಷಗಳ ಕಾಲ ಕುದಿಸಿ ನಂತರ ಆ ನೀರು ತಣ್ಣಗಾಗುವವರೆಗೂ ಹಾಗೆಯೆ ಬಿಡಿ. ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಸಂಗ್ರಹಿಸಿ. ಈ ನೀರನ್ನು ಸ್ವಲ್ಪ ಪ್ರಮಾಣದಲ್ಲಿ ದಿನವಿಡೀ ಕುಡಿಯಿರಿ. ದಿನಕ್ಕೆ ಕನಿಷ್ಟ ಒಂದು ಲೀಟರ್ ಕುಡಿಯಬೇಕು. ಆರೋಗ್ಯ ಉತ್ತಮಗೊಳ್ಳಲು ಹಾಗೂ ದೇಹದಿಂದ ಕಲ್ಮಶಗಳು ಸಂಪೂರ್ಣವಾಗಿ ನಿವಾರಣೆಯಾಗಲು ಈ ನೀರನ್ನು ಆರು ತಿಂಗಳು ಸತತವಾಗಿ ಸೇವಿಸಿ.
ಶುಂಠಿಯನ್ನು ವಾಕರಿಕೆಯ ನಿವಾರಣೆಗಾಗಿ ಬಳಸಲಾಗುತ್ತದೆ .ಸಮುದ್ರಯಾನಿಗಳಿಗೆ ಎದುರಾಗುವ ವಾಕರಿಕೆಯನ್ನೂ ಶುಂಠಿಯ ನೀರು ಕಡಿಮೆಯಾಗಿಸುತ್ತದೆ. ಗರ್ಭಾವಸ್ಥೆ ಅಥವಾ ಕ್ಯಾನ್ಸರ್ ಚಿಕಿತ್ಸೆಯಾದ ಖೀಮೋಥೆರಪಿ ಮೊದಲಾದ ಸಂದರ್ಭದಲ್ಲಿ ಎದುರಾಗುವ ವಾಕರಿಕೆಯನ್ನೂ ಶುಂಠಿಯ ನೀರು ಗುಣಪಡಿಸುತ್ತದೆ.
ದೇಹದಲ್ಲಿ ಕ್ಯಾನ್ಸರ್ ಉಂಟುಮಾಡುವ ಫ್ರೀ ರ್ಯಾಡಿಕಲ್ ಎಂಬ ಕಣಗಳನ್ನು ನಿಯಂತ್ರಿಸಿ ಕ್ಯಾನ್ಸರ್ ಆವರಿಸುವ ಸಾಧ್ಯತೆಯಿಂದ ರಕ್ಷಿಸುತ್ತದೆ. ಅಲ್ಲದೇ ಕ್ಯಾನ್ಸರ್ ಆವರಿಸಿರುವ ಜೀವಕೋಶಗಳನ್ನು ಕೊಂದು ಹರಡುವಿಕೆಯಿಂದ ರಕ್ಷಿಸುತ್ತದೆ.ರಕ್ತದೊತ್ತಡವನ್ನು ಕಡಿಮೆಗೊಳಿಸುತ್ತದೆ
ಸಂಧಿವಾತ (Arthritis) ದಿಂದ ರಕ್ಷಿಸುತ್ತದೆ ಶುಂಠಿರಸದ ಉರಿಯೂತ ನಿವಾರಕ ಗುಣದಿಂದಾಗಿ ಮೂಳೆಗಳ ಸಂದುಗಳಲ್ಲಿ ಮತ್ತು ಥೈರಾಯ್ಡ್ ಗ್ರಂಥಿಯ ಸ್ರವಿಕೆಯ ಕೊರತೆಯಿಂದ ಬಳಲುತ್ತಿರುವ ರೋಗಿಗಳು ಶೀಘ್ರ ಗುಣಮುಖರಾಗುವರು
ಪ್ರತಿದಿನವೂ ತಾಜಾ ಶುಂಠಿಯನ್ನೇ ಬಳಸಿ ನೀರನ್ನು ತಯಾರಿಸಿ ಆರೋಗ್ಯ ಉತ್ತಮಗೊಳ್ಳಲು ಹಾಗೂ ದೇಹದಿಂದ ಕಲ್ಮಶಗಳು ಸಂಪೂರ್ಣವಾಗಿ ನಿವಾರಣೆಯಾಗಲು ಈ ನೀರನ್ನು ಕನಿಷ್ಟ ಆರು ತಿಂಗಳಾದರೂ ಸತತವಾಗಿ ಸೇವಿಸಿ.
ವಿರುದ್ಧ ಆಹಾರ ಸೇವನೆಯಿಂದ ಆಹಾರವು ವಿಷವಾಗಿ ಪರಿವರ್ಥನೆ ಯಾಗುತ್ತದೆಯ …?
ಕಡಲೆ ಬೀಜ ಹಾಗು ಬೆಲ್ಲದಲ್ಲಿ ಇಷ್ಟೊಂದು ಅದ್ಬುತ ಅರೋಗ್ಯ ರಹಸ್ಯಗಳು ….!