ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗ್ತಿರುವ ನಿಗೂಢ ಸಾವುಗಳು ಪ್ರಕರಣ, ರೋಚಕ ಟ್ವಿಸ್ಟ್ ಪಡೆದಿದೆ. ಎಸ್‌ಐಟಿ ವಿಚಾರಣೆ ಬಳಿಕ, ಗಿರೀಶ್ ಮಟ್ಟಣ್ಣವರ್, ಎಸ್‌ಐಟಿಗೆ ಮತ್ತೊಂದು ದೂರು ಕೊಟ್ಟಿದ್ದಾರೆ. 2006ರಿಂದ 2010ರೊಳಗೆ, ಧರ್ಮಸ್ಥಳದ ಲಾಡ್ಜ್‌ಗಳಲ್ಲಿ ಅಪರಿಚಿತ ಶವಗಳು ಪತ್ತೆಯಾಗಿವೆ. ಕೊಲೆ ಅಥವಾ ಆತ್ಮಹತ್ಯೆ ಬಗ್ಗೆ ಸಂಶಯವಿದ್ರೂ, ತರಾತುರಿಯಲ್ಲಿ ದಫನ್ ಮಾಡಲಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಂತ್ಯಕ್ರಿಯೆ ಮಾಡಲಾಗಿದೆ. ಈ ಬಗ್ಗೆ ತನಿಖೆ ಮಾಡಿ ಅಂತಾ, ಎಸ್‌ಐಟಿಗೆ ದೂರು ಕೊಟ್ಟಿದ್ದಾರೆ.
ಸೆಪ್ಟೆಂಬರ್ 11ರಂದು ಮಟ್ಟಣ್ಣವರ್ ದೂರು ಹಿನ್ನೆಲೆ, ಸೆಪ್ಟೆಂಬರ್ 12ರಂದು ವಿಚಾರಣೆಗೆ ಬುಲಾವ್ ನೀಡುವ ಸಾಧ್ಯತೆ ಇದೆ. ಈಗಾಗಲೇ ದೂರಿಗೆ ಸಂಬಂಧಪಟ್ಟಂತೆ, ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ. 1987ರಿಂದ ನಡೆಸಲಾಗಿರುವ ಅಂತ್ರಕ್ರಿಯೆಗಳ ಮಾಹಿತಿ ಕೊಡಿ. ಯುಡಿಆರ್, ರಸೀದಿಗಳ ದಾಖಲೆ ನೀಡುವಂತೆ ಸೂಚಿಸಲಾಗಿದೆ.
ನೇತ್ರಾವತಿ ನದಿ ಮತ್ತು ಕಾಡಿನಲ್ಲಿ, ಸುಮಾರು 120ಕ್ಕೂ ಹೆಚ್ಚು ಸ್ಯಾಂಪಲ್‌ಗಳನ್ನು ಎಸ್‌ಐಟಿ ಕಲೆ ಹಾಕಿತ್ತು. 17 ಸ್ಥಳಗಳಲ್ಲಿ ಸೀನ್ ಆಫ್ ಕ್ರೈಮ್ ತಂಡ ಸ್ಯಾಂಪಲ್ ಸಂಗ್ರಹಿಸಿತ್ತು. ಸುಮಾರು 70ಕ್ಕೂ ಹೆಚ್ಚು ಮಣ್ಣಿನ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಕೆಲವು ಕಡೆ ಸಿಕ್ಕಿದ ಮೂಳೆಗಳು, ಬಟ್ಟೆ, ಬುರುಡೆ ತುಂಡು ಸೇರಿದಂತೆ, ಅನುಮಾನಾಸ್ಪದ ವಸ್ತುಗಳನ್ನು ಎಸ್‌ಐಟಿ ತಂಡ ಸಂಗ್ರಹಿಸಿತ್ತು. ಈ ಎಲ್ಲಾ ಸ್ಯಾಂಪಲ್‌ಗಳ ಪರೀಕ್ಷಾ ವರದಿ ಮುಂದಿನ ವಾರವೇ, ವಿಶೇಷ ತನಿಖಾ ತಂಡದ ಕೈಸೇರುವ ಸಾಧ್ಯತೆ ಇದೆ.