Sunday, September 8, 2024

Latest Posts

ನ್ಯಾಯಾಲಯದ ಆದೇಶದಂತೆ ಗ್ರ್ಯಾಚ್ಯುಟಿ ನೀಡಿ: ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಆಗ್ರಹ

- Advertisement -

News: ಸುಪ್ರೀಕೋರ್ಟ್ ನೀಡಿದ ತೀರ್ಪಿನಂತೆ, 2022ರಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನಿವೃತ್ತಿ ಉಪಧನದ ಕುರಿತು ಆದೇಶವನ್ನು ಹೊರಡಿಸಿದ್ದು, ಅದರ ಪ್ರಕಾರ ರಾಜ್ಯ ಸರ್ಕಾರ ಗ್ರ್ಯಾಚ್ಯುಟಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಸಹಾಯಕರಿಯರು ಮತ್ತು ಕಾರ್ಯಕರ್ತೆಯರ ಸಂಘಟನೆಗಳ ಸಂಘರ್ಷ ಸಂಯುಕ್ತ ಸಮಿತಿ ಒತ್ತಾಯಿಸಿದೆ.

1975ರಿಂದ ಕೆಲಸ ಮಾಡುತ್ತಿದ್ದು, ಆ ಸಮಯದಿಂದ ಯಾರ್ಯಾರು ನಿವೃತ್ತಿಯಾಗಿದ್ದಾರೋ, ಅಂಥವರಿಗೆ ಗ್ರ್ಯಾಚ್ಯುಟಿ ನೀಡಬೇಕು ಎಂದು ಸರ್ವೋಚ್ಛ ನ್ಯಾಯಾಲಯ ಆದೇಶ ಹೊರಡಿಸಿತ್ತು. ಆದರೆ ರಾಜ್ಯ ಸರ್ಕಾರ 2023 ಏಪ್ರಿಲ್ 1ರಿಂದ ಅನ್ವಯವಾಗುವಂತೆ ಆದೇಶಿಸಿದೆ. ಆದರೆ ಈ ಕೂಡಲೇ ಆದೇಶ ವಾಪಸ್ ಪಡೆದು, ನಿವೃತ್ತರಾದವರಿಗೆ ಸಿಗಬೇಕಾದ ಗ್ರ್ಯಾಚ್ಯುಟಿ ಕೊಡಿ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಸಹಾಯಕರಿಯರು ಮತ್ತು ಕಾರ್ಯಕರ್ತೆಯರ ಸಂಘಟನೆಗಳ ಸಂಘರ್ಷ ಸಂಯುಕ್ತ ಸಮಿತಿ ಒತ್ತಾಯಿಸಿದೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಫೆಡರೇಶನ್ ಅಧ್ಯಕ್ಷೆ ಎಂ.ಜಯಮ್ಮ, ಕರ್ನಾಟಕದಲ್ಲಿರುವ ಅಂಗನವಾಡಿಗಳಿಗೆ ಸರಬರಾಜಾಗುತ್ತಿರುವ ಫುಡ್ ಉತ್‌ತಮ ಕ್ವಾಲಿಟಿಯದ್ದಾಗಿಲ್ಲ. ಈ ಕಾರಣಗಳಿಂದ ಫುಡ್ ಪಡೆದವರು ಸಹ ಆ ಆಹಾರವನ್ನು ಸೇವಿಸುತ್ತಿಲ್ಲ. ಲಕ್ಷ್ಮೀ ಹೆಬ್ಬಾಳ್ಕರ್ ಅವರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

- Advertisement -

Latest Posts

Don't Miss