Saturday, October 25, 2025

Latest Posts

ನಾಳೆಯೇ ಗಲ್ಲು ಶಿಕ್ಷೆ ಕೊಡಿ.. ದರ್ಶನ್‌ ಲಾಯರ್‌ ಖಡಕ್‌ ವಾದ

- Advertisement -

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಕೆಲವು ಮೂಲಭೂತ ಸೌಲಭ್ಯಗಳಿಗಾಗಿ, ಹಾಸಿಗೆ, ದಿಂಬು, ಕನ್ನಡಿ, ಬಾಚಣಿಗೆ ಸೇರಿದಂತೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಇತ್ತೀಚೆಗೆ ಕಾನೂನು ಸೇವಾ ಪ್ರಾಧಿಕಾರದ ಸಮಿತಿ ಜೈಲಿಗೆ ಭೇಟಿ ನೀಡಿ, ದರ್ಶನ್‌ನ ಸ್ಥಿತಿ ಮತ್ತು ಜೈಲಿನ ಪರಿಸ್ಥಿತಿ ಕುರಿತು ವರದಿ ಸಲ್ಲಿಸಿತ್ತು. ಇಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್‌ನಲ್ಲಿ ಹಾಸಿಗೆ-ದಿಂಬು ವಿಚಾರಣೆಯ ವೇಳೆ, ದರ್ಶನ್ ಪರ ವಕೀಲ ಸುನಿಲ್ ಅವರು ಆವೇಶಭರಿತವಾಗಿ ವಾದ ಮಂಡಿಸಿದರು. ನಾಡಿದ್ದೇ ದರ್ಶನ್‌ಗೆ ಗಲ್ಲು ಶಿಕ್ಷೆ ಬೇಕಾದರೆ ಕೊಡಿ ಎಂದು ಸಿಟ್ಟಿನಲ್ಲಿ ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯರನ್ನು ಜೈಲಾಧಿಕಾರಿಗಳು ತಪ್ಪು ಮಾಹಿತಿಯಿಂದ ದಾರಿ ತಪ್ಪಿಸಿದ್ದಾರೆ. ಜೈಲಿನಲ್ಲಿರುವ ಇತರ ಆರೋಪಿಗಳು, ಉದಾಹರಣೆಗೆ ಗುಬ್ಬಚ್ಚಿ ಸೀನ್, ಜನ್ಮದಿನ ಆಚರಿಸುತ್ತಿದ್ದಾರೆ. ಆದರೆ ದರ್ಶನ್‌ಗೆ ಕನ್ನಡಿ, ಬಾಚಣಿಗೆ ಮುಂತಾದ ಸಾಮಾನ್ಯ ಸೌಲಭ್ಯಗಳನ್ನೂ ನಿರಾಕರಿಸಲಾಗಿದೆ. ಭದ್ರತೆ ಎಂಬ ಕಾರಣ ಹೇಳುವುದು ಕೇವಲ ನೆಪ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ. ಆತ ಭದ್ರತೆಯ ಹೆಸರಿನಲ್ಲಿ ಅನ್ಯಾಯ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಜಾಮೀನು ರದ್ದು ಮಾಡಿದ ನಂತರ 20 ವಿಚಾರಣೆಗಳು ನಡೆದಿವೆ, ಆದರೆ ವಿಚಾರಣೆಯಲ್ಲಿ ಯಾವುದೇ ಪ್ರಗತಿ ಇಲ್ಲ. ನಾವು ಬೇಗನೆ ಟ್ರಯಲ್ ಆರಂಭಿಸಬೇಕೆಂದು ಕೇಳುತ್ತಿದ್ದೇವೆ. ನಾಳೆಯೇ ವಿಚಾರಣೆ ನಿಗದಿಪಡಿಸಿ, ನಾಳೆಯೇ ತೀರ್ಪು ಕೊಡಿ.ಗಲ್ಲು ಶಿಕ್ಷೆ ಬೇಕಾದರೂ ನೀಡಿ, ನಾವು ಸಿದ್ದರಿದ್ದೇವೆ ಎಂದು ವಕೀಲರು ಹೇಳಿದರು. ಸರ್ಕಾರಿ ವಕೀಲರ ವಾದದ ನಂತರ, ನ್ಯಾಯಾಲಯವು ಹಾಸಿಗೆ–ದಿಂಬು ಸಂಬಂಧಿತ ಅರ್ಜಿಯ ವಿಚಾರಣೆಯ ಆದೇಶವನ್ನು ಅಕ್ಟೋಬರ್ 29ಕ್ಕೆ ಕಾಯ್ದಿರಿಸಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

- Advertisement -

Latest Posts

Don't Miss