Friday, April 18, 2025

Latest Posts

ಜಿಕೆವಿಕೆ ಕೃಷಿ ಮೇಳ: ಗಾಣದ ಎಣ್ಣೆ ಮಾಡುವ ವಿಧಾನ, ಆರೋಗ್ಯಕ್ಕೆ ಎಷ್ಟು ಒಳ್ಳೆಯದು.?

- Advertisement -

GKVK Agriculture Fair: ಜಿಕೆವಿಕೆ ಕೃಷಿ ಮೇಳ ಶುರುವಾಗಿದ್ದು, ಒಂದೇ ಮಳಿಗೆಯಲ್ಲಿ ವಿವಿಧ ರೀತಿಯ ಪ್ರಾಣಿ, ಪಕ್ಷಿ, ಕೃಷಿ ತಳಿಗಳು, ತಿಂಡಿ ತಿನಿಸು ಎಲ್ಲವೂ ಸಿಗುತ್ತಿದೆ.

ಜೊತೆಗೆ ಪ್ಯೂರ್ ಆಗಿರುವ ಗಾಣದ ಎಣ್ಣೆ ಕೂಡ ನಿಮಗಿಲ್ಲಿ ಸಿಗುತ್ತಿದೆ. ಇತ್ತೀಚೆಗೆ ಬರುವ ಎಣ್ಣೆಗಳಲ್ಲಿ ಆರೋಗ್ಯಕರ ಅಂಶಗಳಿಗಿಂತ ಹೆಚ್ಚು, ಕಲಬೆರಕೆಯೇ ಕೂಡಿದೆ. ಆದರೆ ನೀವು ಈ ಕೃಷಿ ಮೇಳದಲ್ಲಿ ಯಾವ ರೀತಿಯಾಗಿ, ನಿಮ್ಮ ಕಣ್ಣೆದುರಿಗೆ ಆರೋಗ್ಯಕರವಾದ ಗಾಣದ ಎಣ್ಣೆ ರೆಡಿ ಮಾಡಲಾಗುತ್ತದೆ ಎಂದು ಕಾಣಬಹುದು.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬಳಿ ಬೇಗೂರು ಎಂಬಲ್ಲಿ ಇರುವ ಶ್ರೀಕೃಷ್ಣ ಗೋಶಾಲೆಯಿಂದ ಬಂದ ಟೀಂ, ಈ ಕೃಷಿಮೇಳದಲ್ಲಿ ಹೇಗೆ ಗಾಣದಿಂದ ಎಣ್ಣೆ ತಯಾರಿಸಲಾಗುತ್ತದೆ ಎಂದು ತೋರಿಸಿದ್ದಾರೆ. ಅಲ್ಲದೇ, ಇವರ ಗೋಶಾಲೆಯಲ್ಲಿರುವ ಹಲವು ತಳಿಯ ದೇಸಿ ಕರುಗಳ ಪ್ರದರ್ಶನವನ್ನೂ ಇಲ್ಲಿ ಮಾಡಲಾಗಿದೆ. ನಿಮಗೂ ಹಸುವಿನ ಹಾಲು, ಮೊಸರು, ಶುದ್ಧ ತುಪ್ಪ ಬಳಸಿ, ಆರೋಗ್ಯಕರ ಜೀವನ ಜೀವಿಸಬೇಕು ಎಂದಲ್ಲಿ, ಹಸುವನ್ನು ಸಾಕಬೇಕು ಎಂದಲ್ಲಿ ನೀವೂ ಕೂಡ ಈ ಜಿಕೆವಿಕೆ ಕೃಷಿ ಮೇಳಕ್ಕೆ ಭೇಟಿ ಕೊಡಬಹುದು. ಅಥವಾ ಶ್ರೀಕೃಷ್ಣ ಗೋಶಾಲೆಗೆ ಭೇಟಿ ನೀಡಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss