Thursday, June 19, 2025

Latest Posts

Glenn maxwell : ಆಸ್ಟ್ರೇಲಿಯಾದ ಕ್ರಿಕೆಟಿಗನ ಪತ್ನಿಗೆ ಭಾರತೀಯ ಸಂಪ್ರದಾಯದಂತೆ ಸೀಮಂತ…!

- Advertisement -

International News : ಆಸ್ತ್ರೇಲಿಯಾ ಕ್ರಿಕೆಟಿಗ ಭಾರತ ಮೂಲದ  ವಧುವನ್ನು  ವಿವಾಹ ವಾಗಿದ್ದರು. ಇದೀಗ ತನ್ನ ಮಡದಿಗೆ ಭಾರತೀಯ ಸಂಪ್ರದಾಯದಲ್ಲಿ ಸೀಮಂತ ಮಾಡಿ ಸುದ್ದಿಯಾಗಿದ್ದಾರೆ.

2022ರಲ್ಲಿ ಜೋಡಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದರು. 2022 ರ ಮಾರ್ಚ್ 27 ರಂದು ಚೆನ್ನೈನಲ್ಲಿ ವಿನಿ ಅವರನ್ನು ಮ್ಯಾಕ್ಸ್‌ವೆಲ್ ವರಿಸಿದ್ದರು. ಇನ್ನು 2023ರ ಮೇನಲ್ಲಿ ದಂಪತಿ ಪೋಷಕರಾಗುತ್ತಿರುವ ಬಗ್ಗೆ ಘೋಷಿಸಿದ್ದರು.

ಸದ್ಯ ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಭಾರತೀಯ ಮೂಲದವರಾಗಿರುವ ಅವರ ಪತ್ನಿ ವಿನಿ ರಾಮನ್ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.

ಮ್ಯಾಕ್ಸ್‌ವೆಲ್ ಅವರು ಗರ್ಭಿಣಿಯಾಗಿರುವ ಪತ್ನಿ ವಿನಿ ರಾಮನ್ ಅವರಿಗೆ ಭಾರತೀಯ ತಮಿಳು ಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ನೆರವೇರಿಸಿದ್ದಾರೆ. ಈ ಕುರಿತ ಫೋಟೊ ಮತ್ತು ವಿಡಿಯೊಗಳನ್ನುಅವರು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆಸ್ಟ್ರೇಲಿಯಾದ ತಮ್ಮ ಮನೆಯಲ್ಲಿ ಮ್ಯಾಕ್ಸ್‌ವೆಲ್ ಅವರು ಹೆಂಡತಿಗೆ ಸೀಮಂತ ನೆರವೇರಿಸಿದ್ದಾರೆ. ಈ ವೇಳೆ ವಿನಿ ಕುಟುಂಬದವರು ಹಾಜರಿದ್ದರು ಎನ್ನಲಾಗಿದೆ.

ಪತಿ ಮೋಸ ಮಾಡಿ ಸಿಕ್ಕಿಬಿದ್ದರೆ, ಪತ್ನಿ ಅವನನ್ನು ಕೊಲ್ಲಬಹುದಂತೆ..! Abroad Rules part 3

ಪತ್ನಿಯ ಹುಟ್ಟುಹಬ್ಬವನ್ನು ಮರೆತರೆ ಪತಿಗೆ ಸಿಗತ್ತೆ ಕಠಿಣ ಶಿಕ್ಷೆ- Abroad Rules part 2

ಈ ದೇಶದಲ್ಲಿ ನೀರಲ್ಲಿ ಮುಳುಗಿ ಸಾಯುತ್ತಿರುವವರನ್ನು ರಕ್ಷಿಸಿದರೆ ಜೈಲು ಗ್ಯಾರಂಟಿ- Abroad Rules part 1

- Advertisement -

Latest Posts

Don't Miss