Sunday, July 6, 2025

Latest Posts

ಜಾಗತಿಕ ಸ್ಟಾರ್ಟ್ ಅಪ್ ರಾಂಕಿಂಗ್: ಒಂದು ಸ್ಥಾನ ಮೇಲಕ್ಕೇರಿದ ಬೆಂಗಳೂರು

- Advertisement -

ಬೆಂಗಳೂರು: ಜಾಗತಿಕ ನವೋದ್ಯಮ ಕಾರ್ಯಪರಿಸರ ವರದಿ (ಜಿ.ಎಸ್.ಇ.ಆರ್. 2022) ಸಮೀಕ್ಷಾ ವರದಿ ಪ್ರಕಾರ ಬೆಂಗಳೂರು ಸ್ಟಾರ್ಟ್ ಅಪ್ ಕಾರ್ಯಪರಿಸರವು 22ನೇ ಸ್ಥಾನ ಪಡೆದಿದ್ದು, ಕಳೆದ ಸಾಲಿಗಿಂತ ಒಂದು ರಾಂಕ್ ಮೇಲಕ್ಕೇರಿದೆ.

ಜೀನೋಮ್ ಸ್ಟಾರ್ಟ್ ಅಪ್ ಪ್ರಕಟಿಸಿರುವ ಈ ವರದಿಯಲ್ಲಿ ಬೆಂಗಳೂರು ನಗರವು ನಿಧಿ ಹೂಡಿಕೆ, ಸಂಪರ್ಕ, ಮಾರುಕಟ್ಟೆ ತಲುಪುವಿಕೆ, ಪ್ರತಿಭೆ ಮೇಳೈಸಿದ ಅನುಭವ ಹಾಗೂ ಜ್ಞಾನಾರ್ಜನೆ ವಿಭಾಗಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದೆ.

ಬೆಂಗಳೂರು ಸ್ಟಾರ್ಟ್ ಅಪ್ ಕಾರ್ಯಪರಿಸರವು ನಿಧಿ ಹೂಡಿಕೆಯಲ್ಲಿ ಜಾಗತಿಕವಾಗಿ 15ರೊಳಗಿನ ಸ್ಥಾನದಲ್ಲಿದ್ದರೆ, ಸಾಧನೆಯಲ್ಲಿ 25ರೊಳಗಿನ ಸ್ಥಾನದಲ್ಲಿದೆ. ನಾಲ್ಕು ವರ್ಷಗಳ ಅವಧಿಯಲ್ಲಿ (2017-2021) ಬೆಂಗಳೂರು ನಗರವು 21 ಶತಕೋಟಿ ಡಾಲರ್ ಶೋಧನಾ ಬಂಡವಾಳವನ್ನು ಆಕರ್ಷಿಸಿದ್ದು, ಇದು ಜಾಗತಿಕ ಸರಾಸರಿಯಾದ 4.5 ಶತಕೋಟಿ ಡಾಲರ್ ಗಳಿಗಿಂತ ತುಂಬಾ ಮುಂದಿದೆ.

ಬೆಂಗಳೂರು ನಗರವು ತಂತ್ರಜ್ಞಾನ ಸಂಬಂಧಿ ಶೋಧನಾ ಬಂಡವಾಳ ಹೂಡಿಕೆಯಲ್ಲಿ ಜಾಗತಿಕವಾಗಿ 5ನೇ ಸ್ಥಾನಕ್ಕೆ ಪಾತ್ರವಾಗಿದೆ. ಪ್ರಸಕ್ತ 2022ರ ಐದು ತಿಂಗಳುಗಳಲ್ಲಿ ನಗರದಲ್ಲಿ ಈ ವಲಯದಲ್ಲಿ 7.5 ಶತಕೋಟಿ ಡಾಲರ್ ಶೋಧನಾ ಬಂಡವಾಳ ಹೂಡಿಕೆಯಾಗಿದೆ. ಇದು ಹೋದ ವರ್ಷದ ಇದೇ ಅವಧಿಯಲ್ಲಿ ಹೂಡಿಕೆಯಾಗಿದ್ದ 5.2 ಶತಕೋಟಿ ಡಾಲರ್ ಗಳಿಗೆ ಹೋಲಿಸಿದರೆ ಗಣನೀಯ ಏರಿಕೆಯಾಗಿದೆ.

ಬೆಂಗಳೂರು ಸ್ಟಾರ್ಟ್ ಅಪ್ ಕಾರ್ಯಪರಿಸರದ ಈ ಸಾಧನೆ ಬಗ್ಗೆ ಮಂಗಳವಾರ ಸಂತೋಷ ವ್ಯಕ್ತಪಡಿಸಿರುವ ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು, “ಭಾರತದ ಸಿಲಿಕಾನ್ ನಗರವಾದ ಬೆಂಗಳೂರು ಸಿಂಗಪುರ, ಪ್ಯಾರಿಸ್, ಬರ್ಲಿನ್ ಗಳಿಗಿಂತ ಹೆಚ್ಚಿನ ಬಂಡವಾಳವನ್ನು ತನ್ನತ್ತ ಸೆಳೆಯುತ್ತಿದೆ. ಈ ಸಮೀಕ್ಷೆಯು ಭಾರತದ ಏಳು ಕಾರ್ಯಪರಿಸರಗಳ ಪೈಕಿ ಆರು ಕಾರ್ಯಪರಿಸರಗಳು ರಾಂಕಿಂಗ್ ಅನ್ನು ಉತ್ತಮಪಡಿಸಿಕೊಂಡಿರುವುದನ್ನು ದೃಢೀಕರಿಸಿದೆ. ಭಾರತದ ನವೋದ್ಯಮಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಧ್ಯೇಯವನ್ನು ಇದು ಪ್ರತಿಬಿಂಬಿಸುತ್ತದೆ” ಎಂದಿದ್ದಾರೆ.

ಇದೇ ವೇಳೆ, ಫಿನ್ ಟೆಕ್ ಉಪವಲಯಕ್ಕೆ ಸಂಬಂಧಿಸಿದಂತೆ ಶೋಧನಾ ಬಂಡವಾಳ ಆಕರ್ಷಿಸುವಲ್ಲಿ ಬೆಂಗಳೂರು 8ನೇ ಸ್ಥಾನ ಪಡೆದಿರುವುದನ್ನು ಲಂಡನ್ & ಪಾರ್ಟ್ ನರ್ಸ್ ಹಾಗೂ ಡೀಲ್ ರೂಮ್ ನಡೆಸಿರುವ ವಿಶ್ಲೇಷಣೆಗಳು ದೃಢಪಡಿಸಿವೆ.

 

- Advertisement -

Latest Posts

Don't Miss